“ಭ್ರಷ್ಟಾಚಾರಿ ನಂ.1” ಹೇಳಿಕೆಯಿಂದ ಪ್ರತಿಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಸ್ವರೂಪದ ಹೊಡತವನ್ನೇ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್ ಗಾಂಧಿ ಅವಧಿಯಲ್ಲಿ ನಡೆದ ಸಾಲು ಸಾಲು ಭ್ರಷ್ಟಾಚಾರಗಳನ್ನು ಎಳೆ ಎಳೆಯಾಗಿ ದೇಶದ ಮುಂದೆ ಬಿಡಿಸಿಟ್ಟಿದ್ದರು. ಅಲ್ಲದೇ, ರಾಜೀವ್ ಗಾಂಧಿ ಹೆಸರು ಹೇಳಿಕೊಂಡು ಚುನಾವಣೆ ಎದುರಿಸುವಂತೆ ಆ ಪಕ್ಷಕ್ಕೆ ಸವಾಲು ಹಾಕಿದರು.
ಕಾಂಗ್ರೆಸ್ಸಿನ ಮೊದಲ ಕುಟುಂಬದ ಸದಸ್ಯರು, ಅವರ ಬೆಂಬಲಿಗರು, ಎಡ ಪಗ್ರತಿಪರರು ಸೇರಿದಂತೆ ಎಲ್ಲರೂ ಮೋದಿಯವರ ಹೇಳಿಕೆಯನ್ನು ಖಂಡಿಸಿದರು. ‘ಹುತಾತ್ಮ’ ಮಾಜಿ ಪ್ರಧಾನಿ ಬಗ್ಗೆ ಹಾಗೆ ಮಾತನಾಡಿದ್ದು ಸರಿಯಲ್ಲ ಎಂದು ಬೊಬ್ಬಿಟ್ಟರು. ಕೆಲವು ಬಿಜೆಪಿಯವರು ಕೂಡ ಸತ್ತ ಮನುಷ್ಯನನ್ನು ಟೀಕಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಹೊರಹಾಕಿದರು. ಅವರೆಲ್ಲ ಅಟಲ್ ಬಿಹಾರಿ ವಾಜಪೇಯಿ ಉದಾಹರಣೆಯನ್ನು ನೀಡಿ, ವಾಜಪೇಯಿ ಮುತ್ಸದ್ಧಿಯಾಗಿದ್ದರು, ಮೋದಿ ಅವರ ರೀತಿ ಇಲ್ಲ ಎಂದರು.
ಹೌದು, ವಾಜಪೇಯಿ ಅವರನ್ನು ಮುತ್ಸದ್ಧಿ ಎಂದು ಕರೆಯಲಾಗುತ್ತಿತ್ತು. ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ, ಅಳೆದು ತೂಗಿ ಮಾತನಾಡುವ, ವಿರೋಧಿಗಳ ಬಗ್ಗೆ ಮೃದುವಾಗಿರುವ ಗುಣ ಅವರಿಗಿತ್ತು. ಆದರೆ ಅವರ ಈ ಗುಣ 2004ರ ಅವರ ಪತನಕ್ಕೂ ಕಾರಣವಾಗಿತ್ತು. ಭಾರತದಲ್ಲಿದ್ದ ಲುಟಿಯಾನ್ಗಳ ವಿರುದ್ಧ ಸದಾ ಹೋರಾಟ ಮಾಡುವ ಹಿಂದೂ ಮತ್ತು ರಾಷ್ಟ್ರವಾದಿಗಳಿಂದಾಗಿ ಅವರು ಪ್ರಧಾನಿಯಾಗಿದ್ದರು. ತನ್ನ ಕಾರ್ಯವೇ ಮಾತನಾಡುತ್ತದೆ ಎಂದು ಅವರು ಅಂದುಕೊಂಡಿದ್ದರು. ಅವರ ಶೈನಿಂಗ್ ಇಂಡಿಯಾ ಆಭಿಯಾನ, ಇಂದಿನ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ಗಿಂತ ವಿಭಿನ್ನವಾಗಿರಲಿಲ್ಲ. ಆದರೂ ಅವರು ಸೋತರು. ವಿರೋಧಿಗಳ ಅಪಪ್ರಚಾರ ನನ್ನ ಕಾರ್ಯದಲ್ಲಿ ಮರೆಯಾಗಿ ಹೋಗುತ್ತದೆ ಎಂದು ಅವರು ಅಂದುಕೊಂಡಿದ್ದರು. ಆದರೆ ಹಾಗಾಗಲಿಲ್ಲ.
ಕಾಂಗ್ರೆಸ್ ಇಂದು ಮಾಡುತ್ತಿರುವ ಅಪಪ್ರಚಾರ 2004ಕ್ಕಿಂತ ಭಿನ್ನವಾಗಿಲ್ಲ. ಕಾಂಗ್ರೆಸ್ ನಾಯಕರ ಭಾಷಣವನ್ನು ಆಲಿಸಿದರೆ, ಹಿಂದೆ ಆಡುತ್ತಿದ್ದ ಅದೇ ಜಾತ್ಯಾತೀತತೆ, ಕೋಮುವಾದಿ ಪಡೆ, ಸಾಮಾಜಿಕ ನ್ಯಾಯ, ಕೋಮು ಅಸಹಿಷ್ಣುತೆ ಮುಂತಾದ ಪದಗಳೇ ಇಂದು ಕೂಡ ಗೋಚರಿಸುತ್ತದೆ. ಆಗಿನ ‘ಕಾಫಿನ್ ಹಗರಣ’ ಸುಳ್ಳಿನಂತೆ ಈಗ ಅವರು ‘ರಫೇಲ್ ಹಗರಣ’ ವನ್ನು ತಂದಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ನಿಂತ ಪಡೆಗಳ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಜೀವನಪೂರ್ತಿ ಭ್ರಷ್ಟಾಚಾರ ಮಾಡಿಕೊಂಡು ಬಂದವರು ಈಗ ಪ್ರಾಮಾಣಿಕ ಪ್ರಧಾನಿಯೊಬ್ಬನ ಬಗ್ಗೆ, ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಆರೋಪ ಹೊರಿಸುತ್ತಿದ್ದಾರೆ. ಹಿಂದಿನ ಪ್ರಧಾನಿ ಭಾರತವನ್ನು ತನ್ನ ಸಾಮ್ರಾಜ್ಯ ಎಂದು ಘೋಷಿಸಿಕೊಂಡಿದ್ದರೂ, ತುರ್ತು ಪರಿಸ್ಥಿತಿಯನ್ನು ಹೇರಿದ್ದರು ಇಂದಿಗೂ ಆಕೆಯನ್ನು ಉಕ್ಕಿನ ಮಹಿಳೆ ಎಂದು ಕರೆಯುತ್ತಾರೆ. ಯಾರೂ ಆಕೆಯನ್ನು ಹಿಟ್ಲರ್ ಎಂದು ಬಣ್ಣಿಸುವುದಿಲ್ಲ. ಈ ವಂಶದವರು ಆಳಿದ ಬಹುತೇಕ ಕಡೆ ದಂಗೆ ದೊಂಬಿಗಳಾಗಿದ್ದರೂ, ಅವರು ಜಾತ್ಯಾತೀತರಾಗಿ ಉಳಿದುಕೊಂಡಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದೀರ್ಘಕಾಲದಿಂದ ಯಾವುದೇ ಘರ್ಷಣೆಗಳಾಗದಿದ್ದರೂ ಅವರನ್ನು ಕೋಮುವಾದಿಗಳೆಂದು ಸುಲಭವಾಗಿ ಬ್ರ್ಯಾಂಡ್ ಮಾಡಿ ಬಿಡುತ್ತಾರೆ, ಈ ವಿಷಯಕ್ಕೆ ಮಾಧ್ಯಮದವರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡುವುದೂ ಇಲ್ಲ.
ಕಾಂಗ್ರೆಸ್ ಕುಟುಂಬದ ವಂಶಾಡಳಿತಕ್ಕೆ ಭಾರತೀಯ ಹಿತಾಸಕ್ತಿಗಳು ಮುಖ್ಯವಲ್ಲ. ಸಾವಿರಾರು ಸಿಖ್ಖರ ನರಮೇಧ ನಡೆಸುವ ಮುನ್ನ ಒಂದು ನಿಮಿಷವೂ ಅವರು ಯೋಚನೆ ಮಾಡಿಲ್ಲ, ನರಮೇಧ ಸಮರ್ಥಿಸಿಕೊಂಡ ರಾಜೀವ್ ಗಾಂಧಿಯನ್ನೂ ಪ್ರಶ್ನೆ ಮಾಡಲಿಲ್ಲ. ಭೋಪಾಲ್ ಅನಿಲ ದುರಂತದ ಆರೋಪಿ ಆಂಡ್ರಸನ್ ಅನ್ನು ವಿಮಾನನಿಲ್ದಾಣದವರೆಗೆ ತೆರಳಿ ವಿದೇಶಕ್ಕೆ ಕಳುಹಿಸಿಕೊಟ್ಟರು. ನಕಲಿ ‘ಹಿಂದೂ ಟೆರರ್’ ಎನ್ನುತ್ತಲೇ ಅವರು ನಿಜವಾದ ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಿದರು.
ಅವರು ಹೀಗೆ ಭಾರತವನ್ನು ಲೂಟಿ ಮಾಡಿದರು, ರಾಷ್ಟ್ರೀಯ ಭದ್ರತೆಯನ್ನು ಕಡೆಗಣಿಸಿದರು, ಕೋಮು ಘರ್ಷಣೆಯನ್ನು ಸೃಷ್ಟಿಸಿದರು, ದೇಶವನ್ನೇ ನಾಶಪಡಿಸುವ ಮಾದರಿ ಜಾತ್ಯಾತೀತತೆಯನ್ನು ಅನುಷ್ಠಾನಗೊಳಿಸಿದರು ಎಂಬ ಬಗ್ಗೆ ಒಂದು ದೊಡ್ಡ ಪುಸ್ತಕವನ್ನೇ ಬರೆಯಬಹುದು. ಇಂತಹವರು ಈಗ ಪ್ರಾಮಾಣಿಕ ಪ್ರಧಾನಿಯ ಬಗ್ಗೆ ‘ಛೋರ್’ ಎನ್ನುತ್ತಾ ದೊಡ್ಡ ದೊಡ್ಡ ಉಪನ್ಯಾಸಗಳನ್ನು ನೀಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಈ ದೇಶದ ಸಂಪನ್ಮೂಲವನ್ನು ಕೆಲವೊಂದು ಕುಟುಂಬದ ವೈಯಕ್ತಿಕ ಆಸ್ತಿಯನ್ನಾಗಿಸಿತು. ಅವರನ್ನವರು ರಾಜ, ರಾಣಿಯರು ಎಂದು ಅಂದುಕೊಂಡರು. ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್, ಉತ್ತರಪ್ರದೇಶದಲ್ಲಿ ಮುಲಾಯಂ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಕರ್ನಾಟಕದಲ್ಲಿ ದೇವೇಗೌಡ, ಕಾಶ್ಮೀರದಲ್ಲಿ ಅಬ್ದುಲ್ಲಾಗಳು, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷಗಳ ಕುಟುಂಬ ರಾಜಕಾರಣಕ್ಕೆ ಬೆಂಬಲ ನೀಡಿದ್ದೇ ಕಾಂಗ್ರೆಸ್. ಕೆಲವೊಂದು ರಾಜ್ಯಗಳನ್ನು ಸುಪರ್ದಿಯಲ್ಲಿ ಇಟ್ಟುಕೊಂಡಿರುವ ಕೆಲವೊಂದು ಕುಟುಂಬಗಳು ಕಾಂಗ್ರೆಸ್ ಪಕ್ಷದ ನೆರಳಿನಲ್ಲಿದೆ. ಈ ಕುಟುಂಬಗಳ ಹೊಸ ತಲೆಮಾರು 2019ರ ಚುನಾವಣೆಯನ್ನು ಎದುರಿಸುತ್ತಿವೆ.
ಇಂತಹ ರಾಕ್ಷಸೀಕರಣದ ಎದುರು ದೃಢವಾಗಿ ನಿಲ್ಲಬೇಕಾದರೆ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಬಹಿರಂಗ ಬೆಂಬಲ ನೀಡುತ್ತಿರುವ, ಹಿರಿಯ ನಾಗರಿಕತೆಯೊಂದನ್ನು ಅಸಹಿಷ್ಣು, ಹಲ್ಲೆಕೋರ ಎಂದು ಬ್ರ್ಯಾಂಡ್ ಮಾಡುವ, ಸೇನೆಯನ್ನು ಅವಮಾನಿಸುವ ‘ಭಾರತ್ ತೇರೆ ತುಕ್ಡೆ ಹೋಂಗೆ’ ನಂತಹ ಗ್ಯಾಂಗ್ ವಿರುದ್ಧವೂ ದೃಢವಾಗಿ ನಿಲ್ಲಬೇಕಾದರೆ ನಮಗೆ ಸಮರ್ಥ ರಾಜಕಾರಣಿ ಬೇಕೇ ಹೊರತು ಮುತ್ಸದ್ಧಿಯಲ್ಲ.
ಅವರಿಗೆ ತಕ್ಕ ಉತ್ತರವನ್ನು ನೀಡುವಂತಹ ಸಮರ್ಥ ರಾಜಕಾರಣಿ ಬೇಕು, ಅವರ ಮುಖವಾಡಗಳನ್ನು ಕಳಚಿ ಅವರ ನಿಜಬಣ್ಣ ಬಯಲು ಮಾಡುವಂತಹ ನಾಯಕ ಬೇಕು. ಸತ್ಯ ಮಾತನಾಡಲು ಹಿಂಜರಿಯದಂತಹ, ನನಗೆ ಅಗೌರವ ತರಬಹುದು ಎಂಬುದನ್ನೂ ಚಿಂತೆ ಮಾಡದಂತಹ ನಾಯಕ, ರಾಜಕಾರಣಿಯ ಅವಶ್ಯಕತೆ ದೇಶಕ್ಕಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ 4 ರಾಷ್ಟ್ರವಾದಿ ನಾಯಕರಿದ್ದಾರೆ. ಅವರು ತಮ್ಮ ಹಿಂದೂ ಗುರುತಿಸುವಿಕೆಯ ಬಗ್ಗೆ ಎಂದೂ ಅಂಜಿಕೆಯನ್ನು ಇಟ್ಟುಕೊಂಡಿರಲಿಲ್ಲ. ಸರ್ದಾರ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರೀ, ಅಟಲ್ ಬಿಹಾರಿ ವಾಜಪೇಯಿ, ಈಗ ಪ್ರಧಾನಿ ನರೇಂದ್ರ ಮೋದಿ. ಒಬ್ಬರನ್ನು ಸ್ವತಂತ್ರ ಬಂದ ಕೂಡಲೇ ಕಳೆದುಕೊಂಡೆವು, ಒಬ್ಬರು ಅನುಮಾನಾಸ್ಪದ ರೀತಿಯಲ್ಲಿ ನಮ್ಮನ್ನು ಅಗಲಿದರು. ಮತ್ತೊಬ್ಬರನ್ನು ಮುತ್ಸದ್ಧಿ ಮಾಡಲು ಹೋಗಿ ಕಳೆದುಕೊಂಡೆವು.
ಇದೇ ರೀತಿ ಮತ್ತೊಬ್ಬರನ್ನು ಕಳೆದುಕೊಳ್ಳಲು ನಾವು ಎಂದಿಗೂ ಬಯಸಲಾರೆವು. ತಮ್ಮ ಪಕ್ಷದ ಮಾಜಿ ಪ್ರಧಾನಿಯೊಬ್ಬರ ಮೃತದೇಹವನ್ನು ತನ್ನ ಕಛೇರಿಯೊಳಗೆ ಬಿಡದೆ ಅವಮಾನಿಸಿದವರಿಗೆ ಗೌರವದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ.
ನೆನಪಿದೆಯೇ ? ಶ್ರೀಕೃಷ್ಣ ಧರ್ಮಯುದ್ಧವನ್ನು ಗೆಲ್ಲಲ್ಲು ಕೆಲವೊಂದು ಪ್ರಶ್ನಾರ್ಹ ನಿರ್ಧಾರಗಳನ್ನು ತೆಗೆದುಕೊಂಡ. ಶಿಶುಪಾಲ ತನ್ನ 100 ನೇ ತಪ್ಪನ್ನು ಮಾಡಿದಾಗ ಶಸ್ತ್ರಾಸ್ತ್ರ ತೆಗೆದುಕೊಂಡು ಅವನನ್ನು ಶಿಕ್ಷಿಸಿದ್ದ. ನಾವೆಷ್ಟು ತಪ್ಪುಗಳನ್ನು ಇದೇ ರೀತಿ ಬಿಡಬೇಕು ?
ನಮಗೀಗ ಬೇಕಾಗಿರುವುದು ತನ್ನ ವೈಯಕ್ತಿಕ ಗೌರವದ ಬಗ್ಗೆ ಚಿಂತಿಸದೆ ದುಷ್ಟರನ್ನು ಎದುರಿಸಿ, ಅವರಿಗೆ ಉತ್ತರ ನೀಡುವ ರಾಜಕಾರಣಿಯೇ ಹೊರತು ಮುತ್ಸದ್ಧಿಯಲ್ಲ, ಪ್ರಧಾನಿ ನರೇಂದ್ರ ಮೋದಿ ಕಳೆದ 17 ವರ್ಷಗಳಿಂದ ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತಾ ಬಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.