ಹುಬ್ಬಳ್ಳಿ: ಹೇಗಾದರೂ ಮಾಡಿ ಕಾರಾಗೃಹದಿಂದ ತಪ್ಪಿಸಿಕೊಳ್ಳುತ್ತಿದ್ದ ಕೈದಿಗಳ ತಂತ್ರಕ್ಕೆ, ಆಧುನಿಕ ವ್ಯವಸ್ಥೆಯ ಮೂಲಕ ಪ್ರತಿತಂತ್ರವನ್ನು ಹೆಣೆಯಲಾಗಿದೆ. ಪರಿಣಾಮ ಅಂತಾರಾಷ್ಟ್ರೀಯ ಗುಣಮಟ್ಟದ ವಿಷಪೂರಿತ ತಂತಿ ಬೇಲಿಯನ್ನು ನಗರದ ಉಪ ಕಾರಾಗೃಹಕ್ಕೆ ಅಳವಡಿಸಲಾಗಿದೆ.
ಬಳ್ಳಾರಿ ಕೇಂದ್ರ ಕಾರಾಗೃಹ, ಬೆಂಗಳೂರಿನ ಪರಪ್ಪನ ಅಗ್ರಹಾರಗಳಲ್ಲಿ ಈ ವ್ಯವಸ್ಥೆ ಇತ್ತು. ಆದರೆ ಉಪ ಕಾರಾಗೃಹವೊಂದು ವಿಷಪೂರಿತ ಬೇಲಿ ಹೊಂದಿರುವುದು ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದೆ.
ಬೇಲಿಗೆ ಸಿಸಿಎಫ್( ಕನ್ಸರ್ಟೈನಾ ಕ್ಯಾಯಿಲ್ ಫೆನ್ಸಿಂಗ್) ಎಂದು ಕರೆಯಲಾಗುತ್ತದೆ. ಲೋಕೋಪಯೋಗಿ ಇಲಾಖೆವತಿಯಿಂದ ೬ ಲಕ್ಷ ವೆಚ್ಚದಲ್ಲಿ ಬೇಲಿಯನ್ನು ನಿರ್ಮಿಸಲಾಗಿದೆ. ೧೬ ಅಡಿ ಎತ್ತರದ ಗೋಡೆ ಮೇಲೆ ಈ ತಂತಿಯನ್ನು ಅಳವಡಿಸಲಾಗಿದ್ದು, ಅದರ ಜೊತೆಗೆ ವಿದ್ಯುತ್ ಸಂಪರ್ಕವನ್ನೂ ನೀಡಲಾಗುವುದು ಎಂದು ಉಪ ಕಾರಾಗೃಹದ ಅಧಿಕಾರಿ ಕ್ಷತ್ರಿ ತಿಳಿಸಿದ್ದಾರೆ.
ಇದುವರೆಗೂ ಕಾರಾಗೃಹದ ಗೋಡೆಗಳ ಮೇಲೆ ಗಾಜಿನ ಚೂರುಗಳನ್ನು ಅಳವಡಿಸಲಾಗುತ್ತಿತ್ತು. ಆದರೆ ಕೈದಿಗಳು ಅದನ್ನು ಲೆಕ್ಕಿಸದೇ ಅನಾಯಾಸವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಆಧುನಿಕ ವ್ಯವಸ್ಥೆಯಾದ ವಿಷಪೂರಿತ ಬೇಲಿ ಅಳವಡಿಕೆಯಿಂದ ತಪ್ಪಿಸಿಕೊಳ್ಳಲು ಆಗದು. ಇದನ್ನು ಮುಟ್ಟಿದರೆ ಸಾಕು, ಮರುಕ್ಷಣವೇ ಗಾಯವಾಗಿ, ರಕ್ತಸ್ರಾವವೂ ಆಗುತ್ತದೆ. ಅಲ್ಲದೇ ವ್ಯಕ್ತಿಯೂ ಮೂರ್ಛೆ ಹೋಗುವ ಸಾಧ್ಯತೆಯೂ ಇದೆ ಎನ್ನುವ ಕ್ಷತ್ರಿ ಅವರು, ಕೈದಿಗಳ ತಂತ್ರಕ್ಕೆ ಪ್ರತಿತಂತ್ರ ಹೂಡುವುದು ಅನಿವಾರ್ಯ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.