ಕಲ್ಲಡ್ಕ : ಒಂದು ದೇಶದ ಜನಸಂಖ್ಯೆ ಆ ದೇಶದ ಅಸ್ತಿತ್ವವನ್ನು ನಿಧರಿಸುವ ಒಂದು ಬಹು ದೊಡ್ಡ ಅಂಶ. ಇಂದಿನ ಪಠ್ಯಕ್ರಮದಲ್ಲಿ ಜನಸಂಖ್ಯೆಯ ಹೆಚ್ಚಳ ಒಂದು ಸಮಸ್ಯೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆಯಾದರೂ ಭಾರತದಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆತಂಕದ ವಿಷಯವಾಗಿದೆ ಇದರಿಂದ ಇಲ್ಲಿನ ಸ್ಥಿತಿಗತಿಯೇ ಪಲ್ಲಟವಾಗಲಿದೆ ಎಂದು ರಾ.ಸ್ವ.ಸಂಘದ ಸಹ ಪ್ರಾಂತ ಪ್ರಚಾರ ವಿಭಾಗ ಪ್ರಮುಖ್ ಶ್ರೀ ಪ್ರದೀಪ ಎಚ್ಚರಿಸಿದರು.
ಅವರು ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಣವ ವಿದ್ಯಾರ್ಥಿ ಸಂಘ ಆಯೋಜಿಸಿದ 2011 ರ ಜನಗಣತಿ ಜನಸಂಖ್ಯಾ ಏರುಪೇರಿನ ಚಿತ್ರಣ ಮತ್ತು ಪರಿಣಾಮದ ಬಗ್ಗೆ ಏರ್ಪಡಿಸಲಾದ ಚಿಂತನ ಗೋಷ್ಠಿಯಲ್ಲಿ ಈ ವಿಚಾರ ಮಂಡಿಸಿದರು. 1951 ರಲ್ಲಿ ಶೇ 87 ರಷ್ಟು ಇದ್ದ ಹಿಂದುಗಳ ಸಂಖ್ಯೆ 2011 ಕ್ಕೆ ಶೇ 82.5 ಕ್ಕೆ ಇಳಿದಿದೆ. ಮುಂದೆ ಇದು ತೀವ್ರ ರೀತಿಯ ಏರುಪೇರಿಗೆ ಕಾರಣವಾಗಲಿದೆ. ಅಕ್ರಮ ವಲಸಿಗರು, ಮುಸ್ಲಿಂ ಜನಸಂಖ್ಯೆ ಏರಿಕೆ ಹಿಂದು ಕುಟುಂಬಗಳಲ್ಲಿ ಏಕ ಸಂತಾನ ಮತ್ತಿತರ ಕಾರಣಗಳಿಂದ ಹಿಂದುಗಳ ಸಂಖ್ಯೆ ಕುಸಿಯುತ್ತಿದೆ. ದೇಶ ಉಳಿಯಲು ಹಿಂದುಗಳ ಪ್ರಾಬಲ್ಯವಿದ್ದರೆ ಮಾತ್ರ ಸಾಧ್ಯ. ಈಶಾನ್ಯ ಭಾರತದಲ್ಲಿ ಕ್ರಿಶ್ಚಿಯನ್ ಪ್ರಾಬಲ್ಯವಿದ್ದರೆ ಉತ್ತರ ಪ್ರದೇಶ. ಪಶ್ಚಿಮ ಬಂಗಾಳ, ಬಿಹಾರ, ಕೇರಳದಂತಹ ರಾಜ್ಯಗಳಲ್ಲಿ ಮುಸಲ್ಮಾನರ ಸಂಖ್ಯೆ ಗಣನೀಯ ಹೆಚ್ಚಳ ಕಂಡಿದೆ. ಕೇರಳದ ಕೆಲವು ಜಿಲ್ಲೆಗಳಂತು ಬಹುಸಂಖ್ಯಾತ ಮುಸಲ್ಮಾನ ಜಿಲ್ಲೆಗಳಾಗಿವೆ. ಕರ್ನಾಟಕದಲ್ಲೂ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಚಿತ್ರಣವನ್ನು ಕಣ್ಣಮುಂದೆ ಇಟ್ಟುಕೊಂಡು ಪರಿಸ್ಥಿತಿಯನ್ನು ವಿವರಿಸಿದ ಅವರು ಮುಂದಿನ ಸ್ಥಿತಿಯ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ ಎಂದರು.
ಹಿಂದುಗಳು ಏಕ ಸಂತಾನವಾಗುವುದರಿಂದ ಸಮುದಾಯ ಹಾಗೂ ದೇಶವೇ ದುರ್ಬಲಗೊಳ್ಳಲಿದೆ. ಇದರ ಪರಿಣಾಮ ಸೈನ್ಯ ಹಾಗೂ ಜಾಗಪರಭಾರೆ ಮೂಲಕ ದೇಶದ ಪ್ರಜಾಪ್ರಭುತ್ವದ ನಾಶವಾಗುವ ಭೀತಿ ಎದುರಾಗಿದೆ. ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತರ ಧ್ವನಿ ಅಡಗುತ್ತಿದೆ ಪ್ರಾದೇಶಿಕ ಪಕ್ಷಗಳಿಂದಾಗಿ ಯಾವೋಂದು ಪಕ್ಷದಲ್ಲಿ ಶೇ. 30 ಕ್ಕಿಂತ ಹೆಚ್ಚು ಬಹುಮತ ಪಡೆದುದನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಇವೆಲ್ಲಕ್ಕೆ ಉತ್ತರವಾಗಿ ನಾವು ಮಾಡಬಹುದಾದ ಕಾರ್ಯವೆಂದರೆ ಜನಸಂಖ್ಯೆಯ ಅಸಮತೋಲನವಾಗದಂತೆ ಕಾಪಾಡಿಕೊಳ್ಳಬೇಕಾದುದು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ಡಾ. ಪ್ರಭಾಕರ ಭಟ್, ಮತ್ತು ವಿದ್ಯಾಕೇಂದ್ರದ ಎಲ್ಲಾ ಶಿಕ್ಷಕ, ಶಿಕ್ಷಕೇತರ ವೃಂದ, ಅಡಳಿತ ಮಂಡಳಿ, ಹಾಗೂ ಇತರ ಕಾಲೇಜುಗಳ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಮೋಹಿನಿ ಸ್ವಾಗತಿಸಿ, ಸದಸ್ಯರಾದ ತೀರ್ಥೇಶ್ ವಂದಿಸಿ, ಶಿವಪ್ರಸಾದ್ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.