ನವದೆಹಲಿ: ರಫೆಲ್ ಫೈಟರ್ ಜೆಟ್ಗಳನ್ನು ಎರಡು ವರ್ಷದೊಳಗೆ ಭಾರತೀಯ ವಾಯುಸೇನೆ ಸೇರ್ಪಡೆಗೊಳಿಸುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಶನಿವಾರ ತಿಳಿಸಿದ್ದಾರೆ.
17 ವರ್ಷಗಳಿಂದ ಬಾಕಿ ಉಳಿದಿದ್ದ ರಫೆಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಫ್ರಾನ್ಸ್ನಲ್ಲಿ ಸಹಿ ಹಾಕಿದ್ದರು.
ಫ್ರಾನ್ಸ್ನಿಂದ ರಫೆಲ್ ಯುದ್ಧ ವಿಮಾನವನ್ನು ಖರೀದಿಸುತ್ತಿರುವುದು ಒಂದು ಅತ್ಯುತ್ತಮ ನಿರ್ಧಾರ, ಈ ಒಪ್ಪಂದದ ನಿಯಮ ಮತ್ತು ಷರತ್ತುಗಳು ಕೂಡ ಉತ್ತಮವಾಗಿದೆ. ಇನ್ನು 2 ವರ್ಷದಲ್ಲಿ ರಫೆಲ್ ಭಾರತದ ವಾಯುಸೇನೆ ಸೇರಲಿದೆ ಎಂದು ಪರಿಕ್ಕರ್ ತಿಳಿಸಿದ್ದಾರೆ.
ಶೀಘ್ರದಲ್ಲೇ ಭಾರತ 36 ರಫೆಲ್ ಜೆಟ್ಗಳನ್ನು ಖರೀದಿಸಲಿದೆ ಎಂದು ಮೋದಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಘೋಷಿಸಿದ್ದರು. ಅಲ್ಲದೇ ವಾಯುಸೇನೆಯ ಅವಶ್ಯ ನಿರ್ಣಾಯಕ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ರಫೆಲ್ ಜೆಟ್ಗಳನ್ನು ಖರೀದಿಸಲು ಮುಂದಾಗಿದ್ದೇವೆ ಎಂದು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.