ರಾಜ್ಯದ ಬುಡಕಟ್ಟು ಜನರ ಜೀವನಮಟ್ಟವನ್ನು ಸುಧಾರಣೆ ಮಾಡುವಲ್ಲಿ ವನ್ಧನ್ ಯೋಜನೆ ಯಶಸ್ವಿಯಾಗಿದೆ.
ಹಳ್ಳಿ ಮತ್ತು ಡಿಜಿಟಲ್ ಸಂಪರ್ಕದ ಭಾಗವಾಗಿರುವ ಟ್ರೈಫೆಡ್ನ ಸಂಕಲ್ಪ್ ಸೆ ಸಿದ್ಧಿ, ರಾಜ್ಯ ಅನುಷ್ಟಾನ ಏಜೆನ್ಸಿಗಳು, ಮಾರ್ಗದರ್ಶನ ಏಜೆನ್ಸಿಗಳು ವನ್ ಧನ್ ವಿಕಾಸ ಕೇಂದ್ರಗಳ ಸ್ಥಿತಿಯನ್ನು ಸಕ್ರಿಯಗೊಳಿಸಲು ಮತ್ತು ಅರಿತುಕೊಳ್ಳುವ ನಿಟ್ಟಿನಲ್ಲಿ ಹಳ್ಳಿಗಳಿಗೆ ಭೇಟಿ ನೀಡುತ್ತಿವೆ. ದೇಶದೆಲ್ಲೆಡೆಯ ಹಳ್ಳಿಗಳಿಗೆ ತೆರಳುವ ತಂಡ ಅಧ್ಯಯನ ಮಾಡುತ್ತಿವೆ. ವನ್ ಧನ್ ವಿಕಾಸ್ ಕೇಂದ್ರಗಳ ತಳಮಟ್ಟದ ಅನುಷ್ಠಾನದ ಮೇಲ್ವಿಚಾರಣೆಗೆ ಇದು ಟ್ರೈಫೆಡ್ ತಂಡಕ್ಕೆ ಅನುಕೂಲ ಕಲ್ಪಿಸುತ್ತಿದೆ.
ಈ ಯೋಜನೆಯ ಅನುಷ್ಠಾನ ಒಡಿಶಾ ರಾಜ್ಯದಲ್ಲಿ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, 660 ವನ್ ಧನ್ ವಿಕಾಸ್ ಕೇಂದ್ರಗಳ ಜೊತೆಗೆ, 22 ವನ್ ಧನ್ ವಿಖಾಸ್ ಕೇಂದ್ರಗಳು ಕ್ಲಸ್ಟರ್ಗಳಾಗಿ ಸೇರಿಕೊಂಡಿವೆ. ಈ ಯೋಜನೆ ರಾಜ್ಯದ 6300 ಕ್ಕೂ ಹೆಚ್ಚಿನ ಬುಡಕಟ್ಟು ಜನಾಂಗದವರಿಗೆ ಬದು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಮಯೂರ್ಭಂಜ್, ಕಿಯೋಂಜಿಹಾರ್, ರಾಯಗಢ್, ಸುಂದರ್ಗಢ್ ಮೊದಲಾದ ಪ್ರದೇಶಗಳಲ್ಲಿ ಸಂಸ್ಕರಣೆ, ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಗಳಿಗೆ ಅನುಕೂಲವಾಗುವ ಯಂತ್ರೋಪಕರಣಗಳ ತರಬೇತಿ, ಸಂಗ್ರಹಣೆ ಕಾರ್ಯ ನಡೆಯುತ್ತಿದೆ. ಬುಡಕಟ್ಟು ಜನರು ಕಚ್ಚಾ ವಸ್ತುಗಳ ಉತ್ಪಾದನೆ, ಸಂಸ್ಕರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಈ ಯೋಜನೆಯ ಮೂಲಕ ಎಲೆಗಳಿಂದ ತಟ್ಟೆಗಳು, ಸಾಗುವಾನಿ ಮರದ ಎಲೆಗಳ ಕಪ್ಗಳು, ಕುಸುಮ್ ಎಣ್ಣೆ, ಜೇನುತುಪ್ಪ ಸಂಗ್ರಹ ಕಾರ್ಯಗಳನ್ನು ನಡೆಸುವ ಮೂಲಕ ಜೀವನವನ್ನು ಸದೃಢವಾಗಿ ಕಟ್ಟಿಕೊಳ್ಳುತ್ತಿದ್ದಾರೆ. ಹಾಗೆಯೇ ಮಾವು, ಸಾಸಿವೆ, ಅರಿಶಿನ, ಮಾವಿನ ಹಪ್ಪಳ, ಉಪ್ಪಿನಕಾಯಿ ಮೊದಲಾದವುಗಳ ಸಂಸ್ಕರಣೆಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಹುಣಸೇ ಹಣ್ಣು, ಸಾಗುವಾನಿ ಶಾಂಪೂ, ಸಾವಯವ ಅಕ್ಕಿ, ಬೇವಿನೆಣ್ಣೆ ಸೇರಿದಂತೆ ಇನ್ನಿತರ ವಸ್ತುಗಳ ಸಂಗ್ರಹ, ಇವುಗಳನ್ನು ಬಳಸಿ ಬೇರೆ ಬೇರೆ ರೀತಿಯ ವಸ್ತುಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವೆಲ್ಲಕ್ಕೂ ಇವರಿಗೆ ಪ್ರೇರಣೆ ನೀಡಿದ್ದು ವನ್ ಧನ್ ಯೋಜನೆ.
ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಈಶಯೋಜನೆ ಬುಡಕಟ್ಟು ಜನರ ಆದಾಯ ಹೆಚ್ಚಿಸುವಲ್ಲಿ, ಉದ್ಯೋಗ ಕಂಡುಕೊಳ್ಳುವಲ್ಲಿಯೂ ಅಗತ್ಯ ನೆರವು ನೀಡುತ್ತಿದೆ. ಕಳೆದ 18 ತಿಂಗಳಲ್ಲಿ ಈ ಯೋಜನೆ ಭಾರತದಾದ್ಯಂತ ರಾಜ್ಯ ನೋಡಲ್ ಮತ್ತು ಅನುಷ್ಠಾನ ಸಂಸ್ಥೆಗಳ ನೆರವಿನ ಜೊತೆಗೆ ಜನರ ಜೀವನಮಟ್ಟವನ್ನು ಸುಧಾರಿಸಿದೆ. ಹಾಗೆಯೇ ಜನಪ್ರಿಯತೆಯನ್ನೂ ಗಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.