ಬೆಂಗಳೂರು: ಬಹುನಿರೀಕ್ಷಿತ 13 ನೇ ಏರೋ ಇಂಡಿಯಾ ಏರ್ ಶೋಗೆ ನಗರದ ಯಲಹಂಕ ವಾಯುನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಆತ್ಮನಿರ್ಭರ ಭಾರತ ಕಲ್ಪನೆಗೆ ಪೂರಕವಾಗಿ ಈ ಏರ್ ಶೋ ನಡೆಯುತ್ತಿದೆ. ಇದರಲ್ಲಿ ನಮ್ಮ ದೇಶದ ಸೇನಾ ಶಕ್ತಿ, ರಕ್ಷಣಾ ವಲಯದ ಸಾಮರ್ಥ್ಯ ಜಗಜ್ಜಾಹೀರಾಗಲಿದೆ. ಚಿನೂಕ್, ಹಾಕ್, ಜಾಗ್ವಾರ್, ಅಪಾಚೆ, ಸೂರ್ಯಕಿರಣ್, ಸಾರಂಗ್, ರಫೇಲ್ ಸೇರಿದಂತೆ ಇನ್ನೂ ಅನೇಕ ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯ ಪ್ರಸ್ತುತ ಪಡಿಸಲಿವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಈ ವೈಮಾನಿಕ ಪ್ರದರ್ಶನದದಲ್ಲಿ 14 ರಾಷ್ಟ್ರಗಳು ಭಾಗವಹಿಸುತ್ತಿವೆ. ಆತ್ಮನಿರ್ಭರ ಕಲ್ಪನೆಯಲ್ಲಿ ದೇಶದ ಸೇನಾ ಶಕ್ತಿಯ ಪ್ರದರ್ಶನ ಈ ಏರ್ ಶೋ ನಲ್ಲಿ ಆಗುತ್ತಿದ್ದು, 41 ಯುದ್ಧ ವಿಮಾನಗಳ ಬಲ ಪ್ರದರ್ಶನ ನಡೆಯಲಿದೆ. ರಫೇಲ್ ಯುದ್ಧ ವಿಮಾನದ ಪ್ರದರ್ಶನ ಈ ಬಾರಿಯ ವೈಮಾನಿಕ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿದೆ. ಮುಂದಿನ ಮೂರು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳು ಸದ್ದು ಮಾಡಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.