ನವದೆಹಲಿ: ಸಂವಿಧಾನದ 370ನೇ ವಿಧಿ ದೊಡ್ಡ ಪ್ರಮಾದ ಆಗಿತ್ತು ಮತ್ತು ನರೇಂದ್ರ ಮೋದಿ ಸರ್ಕಾರ ಅದನ್ನು ರದ್ದುಪಡಿಸಿ ಪ್ರಮಾದವನ್ನು ಸರಿಪಡಿಸಿದೆ ಎಂದು ಖ್ಯಾತ ವಕೀಲ ಹರೀಶ್ ಸಾಲ್ವೆ ಅಭಿಪ್ರಾಯಿಸಿದ್ದಾರೆ.
370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನ ತೋರಿಸುತ್ತಿರುವ ವರ್ತನೆಯು ಸಂಪೂರ್ಣ ದಿವಾಳಿತನದ್ದು, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ಥಾನ ಅದನ್ನು ಆಕ್ರಮಿಸಿಕೊಳ್ಳಲು ನೋಡುತ್ತಿದೆ ಎಂದಿದ್ದಾರೆ.
“ಭಾರತ ಆಕ್ರಮಿಸಿಕೊಂಡಿರುವ ಕಾಶ್ಮೀರವೂ ಭಾರತದ್ದೇ, ಪಾಕಿಸ್ಥಾನವು ಅಲ್ಲಿ ಅಕ್ರಮವಾಗಿ ನೆಲೆಯೂರಿದೆ. ಯಾವುದಾದರೂ ವಿವಾದಿತ ಪ್ರದೇಶ ಇದ್ದರೆ ಅದು ಪಿಒಕೆ ಮಾತ್ರ. ಕಾಶ್ಮೀರದ ಸಂವಿಧಾನವೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳುತ್ತದೆ. ಕಾಶ್ಮೀರ ಭಾರತದ್ದು ಎಂಬ ಬಗ್ಗೆ ಯಾವುದೇ ಅನುಮಾನವಿಲ್ಲ, ಕೆಲವು ಪಾಕಿಸ್ಥಾನಿ ಮನಃಸ್ಥಿತಿಗಳಲ್ಲಿ ಮಾತ್ರ ಈ ಅನುಮಾನವಿದೆ” ಎಂದಿದ್ದಾರೆ.
370ನೇ ವಿಧಿ ರದ್ಧತಿಯನ್ನು ನಾನು ಸದಾ ಬೆಂಬಲಿಸುತ್ತೇನೆ, ಆ ವಿಧಿಗೆ ಅನುಮತಿಯನ್ನು ನೀಡಿದ್ದೇ ದೊಡ್ಡ ತಪ್ಪು ಎಂದಿದ್ದಾರೆ.
ವಿಧಿಯನ್ನು ರದ್ದುಪಡಿಸುವ ಮುನ್ನ ಸರ್ಕಾರ ಮಾತುಕತೆ ನಡೆಸಬೇಕಿತ್ತು ಎಂಬ ವಾದ ನಿಜಕ್ಕೂ ಅರ್ಥಹೀನ. ಒಂದೇ ಸಲಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದು ನಿಜಕ್ಕೂ ಉತ್ತಮ ನಿರ್ಧಾರ ಎಂದಿದ್ದಾರೆ.
ಸಾಲ್ವೆ ಅವರು ಭಾರತದ ಖ್ಯಾತ ವಕೀಲರಾಗಿದ್ದು, ಪಾಕ್ ಬಂಧನದಲ್ಲಿರುವ ಭಾರತದ ಪ್ರಜೆ ಕುಲಭೂಷಣ್ ಯಾದವ್ ಅವರ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಇದಕ್ಕಾಗಿ ಅವರ ಪಡೆದುಕೊಂಡಿದ್ದು ಕೇವಲ ಒಂದು ರೂಪಾಯಿ ಮಾತ್ರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.