2019ರ ಆಗಸ್ಪ್ 5 ರಂದು ನರೇಂದ್ರ ಮೋದಿ ಸರ್ಕಾರವು ಸಂವಿಧಾನದ 370ನೇ ವಿಧಿ ಮತ್ತು 35 ಎ ಅನ್ನು ರದ್ದುಪಡಿಸುವ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಹಿಂಪಡೆದಿತ್ತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಳಿಸಿತ್ತು. ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹೊಸ ಕೇಂದ್ರಾಡಳಿತ ಪ್ರದೇಶಗಳ ಸರ್ವತೋಮುಖ ಬೆಳವಣಿಗೆಗೆ ಸುಧಾರಣೆಗಳನ್ನು, ನಿಯಮಗಳನ್ನು ತರುವುದಾಗಿ ಕೇಂದ್ರ ಸರ್ಕಾರ ಅಲ್ಲಿನ ಜನರಿಗೆ ಭರವಸೆಯನ್ನು ನೀಡಿದೆ.
ಕೆಲ ದಿನಗಳ ಹಿಂದೆ ನರೆಂದ್ರ ಮೋದಿಯವರ ಎರಡನೇಯ ಅವಧಿಯ ಸರ್ಕಾರವು ಅಧಿಕಾರಕ್ಕೆ ಬಂದು 100 ವರ್ಷಗಳನ್ನು ಪೂರೈಸಿದೆ. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕೇಂದ್ರ ಸರ್ಕಾರ ತೆಗೆದುಕೊಂಡ 50 ವಿಷಯಗಳ ಬಗೆಗಿನ ಮಾಹಿತಿ ಇಲ್ಲಿದೆ.
1. ಅಲ್ಲಿನ 4483 ಗ್ರಾಮ ಪಂಚಾಯತ್ಗಳ ಅಭಿವೃದ್ಧಿಗೆ ಕೇಂದ್ರ ರೂ.366 ಕೋಟಿಗಳನ್ನು ಘೋಷಣೆ ಮಾಡಿದೆ.
2. ಸರಪಂಚರುಗಳು ತಿಂಗಳಿಗೆ ರೂ.2500 ಮತ್ತು ಪಂಚರು ಮಾಸಿಕ ರೂ. 1000ಗಳ ಭತ್ಯೆಯನ್ನು ಪಡೆಯಲಿದ್ದಾರೆ.
3. ಗ್ರಾಮ ಪಂಚಾಯತಿಯು ಅಕೌಂಟ್ ಬುಕ್ಗಳನ್ನು ನಿರ್ವಹಣೆ ಮಾಡಲು 2000 ಅಕೌಂಟೆಂಟ್ಗಳನ್ನು ನೇಮಕಾತಿ ಮಾಡಲು ಮುಂದಾಗಿದೆ.
4. 634 ಗ್ರಾಮಪಂಚಾಯಿತಿಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಇಂಟರ್ನೆಟ್ ಒದಗಿಸಲು ನಿರ್ಧರಿಸಿದೆ.
5. ಪ್ರತಿ ಜಿಲ್ಲೆಗಳು ಎರಡು ಡಿಜಿಟಲ್ ಗ್ರಾಮಗಳನ್ನು ಹೊಂದಲಿದೆ.
6. ಆಧಾರ್ ಮೂಲಕ ಸಮಾಜ ಕಲ್ಯಾಣ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವ ಗುರಿಯನ್ನು ಹೊಂದಲಾಗಿದೆ.
7. ಆಧಾರ್ ಅನ್ನು ಎಲ್ಲಾ ಸರ್ಕಾರಿ ಯೋಜನೆಗಳಿಗೆ ಸಂಪರ್ಕಿಸುವುದು.
8. ಪ್ರಧಾನಿ ಮೋದಿಯವರ 80 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಪ್ಯಾಕೇಜ್ ಅನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರುವುದು.
9. ಈ ಪ್ರದೇಶದ ಅಭಿವೃದ್ಧಿ ಯೋಜನೆಗಳಿಗೆ 8 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
10. 2019ರ ಡಿಸೆಂಬರ್ 1ರ ವೇಳೆಗೆ ಜಮ್ಮು ರಿಂಗ್ ರೋಡ್ನ ಮೊದಲ ಹಂತ ಸಂಪೂರ್ಣಗೊಳ್ಳಲಿದೆ.
11. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ 1632 ಕಿಮೀ ರಸ್ತೆಯನ್ನು ಜಮ್ಮು ಕಾಶ್ಮೀರದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.
12. ಕತುವಾ ಮತ್ತು ಹಂಡ್ವಾರದಲ್ಲಿ ಇಂಡಸ್ಟ್ರಿಯಲ್ ಬಯೋ ಟೆಕ್ನಾಲಜಿ ಪಾರ್ಕ್ ನಿರ್ಮಾಣವಾಗುತ್ತಿದೆ.
13. 15 ಲಕ್ಷ ಮನೆಗಳಿಗೆ ದಿನದ 24 ಗಂಟೆಯೂ ಪೈಪ್ ಮೂಲಕ ನೀರನ್ನು ಒದಗಿಸಲು ಕಾಮಗಾರಿ ನಡೆಯುತ್ತಿದೆ.
14. ಬಾರಮುಲ್ಲಾದಿಂದ ಕುಪ್ವಾರಕ್ಕೆ ರೈಲ್ವೇ ಲೈನಿನ ಸರ್ವೇಗೆ ಹಸಿರು ನಿಶಾನೆ.
15. ಎರಡು ದೊಡ್ಡ ಐಟಿ ಪಾರ್ಕ್ಗಳು 5 ಲಕ್ಷ ಚದರ ಅಡಿ ಭೂಮಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ನಿರ್ಮಾಣವಾಗಲಿದೆ.
16.2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಟಾರ್ಗೆಟ್ ತಲುಪುವ ನಿಟ್ಟಿನಲ್ಲಿ ಕಾರ್ಯ ಆರಂಭವಾಗಿದೆ.
17. ಗುಲ್ಮಾರ್ಗ್, ಪಹಲ್ಗಾಮ್, ಪಟ್ನಿಟಾಪ್ ಮತ್ತು ಸೋನಮಾರ್ಗ್ಗಳಲ್ಲಿ ಅಂಡರ್ಗ್ರೌಂಡ್ ಎಲೆಕ್ಟ್ರಿಕಲ್ ಕೇಬಲಿಂಗ್ ಕಾರ್ಯ ಆರಂಭವಾಗಿದೆ.
18. ಶ್ರೀನಗರ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಪೈಪ್ ಮೂಲಕ ಗ್ಯಾಸ್ ಪೂರೈಕೆ ಮಾಡಲಾಗುತ್ತದೆ.
19. ವಿಜಯಪುರ ಮತ್ತು ಅವಂತಿಪುರದಲ್ಲಿ ಏಮ್ಸ್ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ, ಪ್ರಧಾನಿ ಮೋದಿ 2019ರ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
20. ಜಮ್ಮು ಕಾಶ್ಮೀರದಲ್ಲಿ ಎಂಬಿಬಿಎಸ್ ಸೀಟುಗಳ ಸ್ಥಾನವನ್ನು 400 ರಿಂದ 900ಕ್ಕೆ ಏರಿಸಲಾಗಿದೆ.
21. ಶ್ರೀನಗರದಲ್ಲಿ ರೂ.120 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗಲಿದೆ.
22.ಶ್ರೀನಗರ ಮತ್ತು ಜಮ್ಮುವಿನಲ್ಲಿ ಸುಮಾರು 50,000 ಮನೆಗಳು ಮತ್ತು ಸ್ಯಾಟಲೈಟ್ ಟೌನ್ಗಳು ನಿರ್ಮಾಣವಾಗಲಿದೆ.
23.ಶ್ರೀನಗರ ಮೆಟ್ರೋ ರೈಲ್ ಸೇವೆಯನ್ನು ಪಡೆಯಲಿದೆ. 2024ಕ್ಕೆ ಇದು ಕಾರ್ಯಾರಂಭವಾಗಲಿದೆ.
24.ಗ್ರೇಟರ್ ಶ್ರೀನಗರ ಮಾಸ್ಟರ್ ಪ್ಲ್ಯಾನ್ 2035 ಸಿದ್ಧಗೊಳ್ಳಲಿದೆ.
25. ಪ್ರಧಾನಮಂತ್ರಿ ನಗರ ವಸತಿ ಯೋಜನೆಯಡಿ ಕಾಶ್ಮೀರದಲ್ಲಿ 15,334 ಮನೆಗಳು ನಿರ್ಮಾಣವಾಗಲಿದೆ.
26. ಸುಮಾರು 40 ಸಾವಿರ ಜನರನ್ನು ವೃದ್ಧಾಪ್ಯ ಪಿಂಚಣಿ ಯೋಜನೆ ಮತ್ತು ವಿಧವಾ ಪಿಂಚಣಿ ಯೋಜನೆಗಳಿಗೆ ಸೇರ್ಪಡೆಗೊಳಿಸಲಾಗಿದೆ.
27. ಸುಮಾರು 66 ಗ್ರಾಮಗಳನ್ನು ಹಿಂದುಳಿದ ಪ್ರದೇಶಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
28.ಪೊಲೀಸರಿಗೆ 20 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ.
29.ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಗೆ 85,000 ರೈತರನ್ನು ನೋಂದಾವಣೆ ಮಾಡಲಾಗಿದೆ.
30.ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ರೂ.1ಲಕ್ಷ ಆರ್ಥಿಕ ಧನಸಹಾಯವನ್ನು ನೀಡಲಾಗುವುದು.
31. ನಿರಾಶ್ರಿತರಿಗೆ 5.5 ಲಕ್ಷ ರೂ. ಹಣಕಾಸು ನೆರವನ್ನು ನೀಡಲಾಗುತ್ತಿದೆ.
32. 55,544 ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ನೋಂದಣಿ ಮಾಡಲಾಗಿದೆ.
33. ಜಮ್ಮು-ಕಾಶ್ಮೀರದ ಪ್ರತಿ ಜಿಲ್ಲೆಯಲ್ಲೂ ಬಾಲಪರಾಧ ನ್ಯಾಯಮಂಡಳಿ ಮತ್ತು ಮಕ್ಕಳ ಕಲ್ಯಾಣ ಮಂಡಳಿ ನಿರ್ಮಾಣ ಮಾಡಲಾಗುತ್ತಿದೆ.
34. ಸರ್ವಶಿಕ್ಷಾ ಅಭಿಯಾನದಡಿ 43 ಸಾವಿರ ಶಿಕ್ಷಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.
35. ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು ರೂ.3600 ಇಂದ 4100 ರೂಗೆ ಏರಿಕೆ ಮಾಡಲಾಗಿದೆ.
36 ಜಮ್ಮು-ಕಾಶ್ಮೀರದ ಯುವಕರಿಗಾಗಿ 50,000 ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ.
37.ನವೆಂಬರ್ ತಿಂಗಳಲ್ಲಿ ಶ್ರೀನಗರದಲ್ಲಿ ಮೇಘಾ ಹೂಡಿಕೆದಾರರ ಸಮಾವೇಶ ಜರುಗಲಿದೆ.
38.ಹೂಡಿಕೆದಾರರಿಗೆ ಮತ್ತು ಉದ್ಯಮಶೀಲರಿಗೆ ಸಿಂಗಲ್ ವಿಂಡೋ ಸಿಸ್ಟಮ್ ಅನ್ನು ತರಲಾಗುತ್ತಿದೆ .
39.ಶ್ರೀನಗರದ ದಾಲ್ ಲೇಕ್ ಅನ್ನು ಸುಂದರಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.
40. ಟ್ರಾಲ್ ಮತ್ತು ಕೃಷ್ಣ ಗಂಗದಲ್ಲಿ ಎರಡು ವನ್ಯಜೀವಿ ಸಂರಕ್ಷಣ ತಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
41. ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಲಾಗುತ್ತಿದೆ.
42. ಪ್ರವಾಸೋದ್ಯಮವನ್ನು ಉತ್ತೇಜನಗೊಳಿಸಲು ಮೊದಲ ಹಂತದ ಗುಲ್ಮಾರ್ಗ್ ಮಾಸ್ಟರ್ ಪ್ಲಾನ್ 2032 ಅನ್ನು ಅನುಮೋದಿಸಲಾಗಿದೆ. 2ನೇ ಸಂತ ಈ ವರ್ಷ ಪೂರ್ಣಗೊಳ್ಳಲಿದೆ.
43.ಲೇಹ್ ಮತ್ತು ಕಾರ್ಗಿಲ್ನಲ್ಲಿ ಹೊಸ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಲಿದೆ.
44. ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ 12 ಹೊಸ ಚಾರಣ ರಸ್ತೆಗಳು ಅಭಿವೃದ್ಧಿಯಾಗಲಿದೆ.
45 .ರೂಪಾಯಿ 250 ಕೋಟಿ ಅನುದಾನವನ್ನು ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಜನೆಗೊಳಿಸಲಾಗುತ್ತಿದೆ.
46.ಪ್ರತಿ ಪಂಚಾಯಿತಿಗಳು ಆಟದ ಮೈದಾನವನ್ನು ಹೊಂದಲಿವೆ.
47. ಕೇಂದ್ರಾಡಳಿತ ಪ್ರದೇಶದಲ್ಲಿ ಫುಟ್ಬಾಲ್ ಪಂದ್ಯಾವಳಿಗಳು ಆಯೋಜನೆಗಳ್ಳಲಿವೆ.
48.ಜಮ್ಮುವಿನಲ್ಲಿ ಸಾರ್ವಜನಿಕ ಜಿಮ್ ಸ್ಥಾಪನೆಯಾಗಲಿದೆ.
49. ಕೇಂದ್ರಾಡಳಿತ ಪ್ರದೇಶಗಳಿಗೆ 1000 ವೈದ್ಯಕೀಯ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ
50. ಕ್ಲಾಸ್ 4 ಗ್ರೇಡ್ ಉದ್ಯೋಗಗಳಿಗೆ ಸಂದರ್ಶನ ಅಂತ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.