ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಡಿಯಲ್ ಆಯಿಲ್ ಕಾರ್ಪೋರೇಶನ್ (IOC), ಸಾಗರೋತ್ತರ ಸ್ಟಾರ್ಟ್ ಅಪ್ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಬಳಸುವ ಬ್ಯಾಟರಿಗಳನ್ನು ತಯಾರಿಸಲು 1 ಗಿಗಾವಾಟ್ (ಜಿಡಬ್ಲ್ಯೂ) ಸಾಮರ್ಥ್ಯದ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಂಡಿಯಲ್ ಆಯಿಲ್ ಅಧ್ಯಕ್ಷ ಸಂಜೀವ್ ಸಿಂಗ್ ಅವರು, “ಸ್ಥಾಪನೆಯಾಗಲಿರುವ ಹೊಸ ಘಟಕವು ಲಿಥಿಯಂ-ಅಯಾನ್ ಆಧಾರಿತ ಬ್ಯಾಟರಿ ಉತ್ಪನ್ನಗಳನ್ನು ತಯಾರಿಸುವುದಿಲ್ಲ, ಬದಲಿಗೆ ಭಾರತದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳನ್ನು ಬಳಸಿ ಬ್ಯಾಟರಿ ತಯಾರಿಸಲಿದೆ” ಎಂದಿದ್ದಾರೆ.
“ಇಂದು ನಾವು ನೋಡುತ್ತಿರುವ ಲಿಥಿಯಂ-ಐಯಾನ್ ಬ್ಯಾಟರಿಗಳು ಎಲ್ಲದಕ್ಕೂ ಒಂದೇ ಉತ್ತರವಲ್ಲ ಅಥವಾ ಉತ್ತಮ ಉತ್ತರವೂ ಅಲ್ಲ. ಭಾರತದಂತಹ ದೇಶಕ್ಕಾಗಿ, ನಮ್ಮಲ್ಲಿ ಒಂದು ಪ್ರಕಾರದ ಲಿಥಿಯಂ ಇಲ್ಲ. ಆದ್ದರಿಂದ ನಾವು ಎಲೆಕ್ಟ್ರಿಕ್ ವಾಹನಗಳನ್ನು ದೊಡ್ಡ ಮಟ್ಟದಲ್ಲಿ ತರಲು ಬಯಸುವುದೇ ಆದರೆ, ನಾವು ಬ್ಯಾಟರಿಗಾಗಿ ಸ್ಥಳೀಯವಾಗಿ ಲಭ್ಯವಿರುವ ಯಾವುದನ್ನಾದರೂ ಹುಡುಕಬೇಕಾಗಿರುವುದು ಅನಿವಾರ್ಯ” ಎಂದಿದ್ದಾರೆ.
“ನಾವು ಈಗಾಗಲೇ ಒಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಶೇ.100ರಷ್ಟು ಸ್ಥಳೀಯವಾಗಿ ಉತ್ಪಾದಿಸಬಹುದಾದ ಪರಿಹಾರಕ್ಕಾಗಿ ಮುಂದೆ ನೋಡುತ್ತಿದ್ದೇವೆ”ಎಂದು ಅವರು ಹೇಳಿದ್ದಾರೆ.
ನಮ್ಮ ನಿರ್ಧಾರ ಆಮದು ಮಾಡಿದ ಲಿಥಿಯಂ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಲಿಥಿಯಂಗಳ ಬಹುಪಾಲು ಚೀನಾದ ವಶದಲ್ಲಿವೆ ಎಂದು ಇಂಡಿಯನ್ ಆಯಿಲ್ನ ಸಂಶೋಧನಾ ಮತ್ತು ಅಭಿವೃದ್ಧಿ ನಿರ್ದೇಶಕ ಡಾ.ಎಸ್. ರಾಮ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.