ಚೆನ್ನೈ: ಭಾರತ ಮತ್ತು ರಷ್ಯಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ವ್ಯಾಪಕವಾದ ಸಹಕಾರವನ್ನು ಪರಸ್ಪರ ಹೊಂದುವ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸುತ್ತಿವೆ. ರಷ್ಯಾವು ತನ್ನ ಸೆಮಿ- ಕ್ರೈಯೊಜೆನಿಕ್ ಎಂಜಿನ್ ಟೆಕ್ನಾಲಜಿ ಮತ್ತು ನಿರ್ಣಾಯಕ ಘಟಕಗಳನ್ನು ಭಾರತದ ಹ್ಯುಮನ್ ಸ್ಪೇಸ್ ಕ್ಯಾಪ್ಸುಲ್ಗೆ ನೀಡಲು ಮುಂದಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ.
“ನಾವು ರಷ್ಯಾದ ಬಾಹ್ಯಾಕಾಶ ಏಜೆನ್ಸಿಯೊಂದಿಗೆ ವಿವಿಧ ಅಂಶಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಮತ್ತು ಯಾವುದನ್ನೂ ಇದುವರೆಗೆ ದೃಢಕರಿಸಲಾಗಿಲ್ಲ. ನಮ್ಮ ಮಾನವ ಬಾಹ್ಯಾಕಾಶ ಯಾನ ಗಗನಯಾನಕ್ಕೆ ರಷ್ಯಾದಿಂದ ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನೀಡುವ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ” ಎಂದು ಸಿವನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
“ಮೇಕ್-ಇನ್-ಇಂಡಿಯಾ” ಕಾರ್ಯಕ್ರಮದಡಿಯಲ್ಲಿ ರಷ್ಯಾ ತನ್ನ ಸೆಮಿ-ಕ್ರಯೋಜೆನಿಕ್ ರಾಕೆಟ್ ಎಂಜಿನ್ ತಂತ್ರಜ್ಞಾನವನ್ನು ಭಾರತಕ್ಕೆ ನೀಡುತ್ತಿದೆ. ರಾಕೆಟ್ ಎಂಜಿನ್ ಗಳನ್ನು ಭಾರತದಲ್ಲಿ ತಯಾರಿಸಬಹುದು ಮತ್ತು ನಮ್ಮ ರಾಕೆಟ್ಗಳಲ್ಲಿ ಬಳಸಬಹುದು ”ಎಂದು ಸಿವನ್ ಹೇಳಿದ್ದಾರೆ.
ಪೈಲೆಟೆಡ್ ಸ್ಪೇಸ್ ಫ್ಲೈಟ್ಸ್, ಸ್ಯಾಟಲೈಟ್ ನೇವಿಗೇಶನ್ ಮತ್ತು ಎಂಜಿನ್ ಟೆಕ್ನಾಲಜಿ ಕ್ಷೇತ್ರದಲ್ಲಿ ಉಭಯ ದೇಶಗಳು ಸಹಕಾರದ ಕುರಿತು ಚರ್ಚಿಸಲಿವೆ ಎಂದು ರಷ್ಯಾದ ಸರ್ಕಾರಿ ಬಾಹ್ಯಾಕಾಶ ನಿಗಮ ರೋಸ್ಕೋಸ್ಮೋಸ್ ಹೇಳಿದೆ.
ಸ್ಯಾಟಲೈಟ್ ನೇವಿಗೇಶನ್ ಸಿಗ್ನಲ್ಸ್ ನಿಖರತೆಯನ್ನು ಹೆಚ್ಚಿಸಲು ಉಭಯ ದೇಶಗಳು ಪರಸ್ಪರರ ದೇಶಗಳಲ್ಲಿ ಗ್ರೌಂಡ್ ಸ್ಟೇಶನ್ಗಳನ್ನು ಸ್ಥಾಪಿಸುವ ಬಗ್ಗೆ ಚರ್ಚಿಸುತ್ತಿವೆ ಎಂದು ಸಿವನ್ ಹೇಳಿದ್ದಾರೆ.
“ನಾವು ನಮ್ಮ NavIC ಸಿಸ್ಟಮ್ಗಾಗಿ ರಷ್ಯಾದಲ್ಲಿ ಗ್ರೌಂಡ್ ಸ್ಟೇಶನ್ ಅನ್ನು ಸ್ಥಾಪಿಸಲು ಬಯಸುತ್ತೇವೆ. ರಷ್ಯಾವು ಭಾರತದಲ್ಲಿ ತನ್ನ ಸ್ಯಾಟಲೈಟ್ ನಾವಿಗೇಷನ್ ಸಿಸ್ಟಮ್ಗಾಗಿ ಗ್ರೌಂಡ್ ಸ್ಟೇಶನ್ ಅನ್ನು ಸ್ಥಾಪಿಸಲು ಬಯಸಿದೆ. ರಷ್ಯಾದ ಗ್ರೌಂಡ್ ಸ್ಟೇಶನ್ ಬೆಂಗಳೂರಿನಲ್ಲಿರುತ್ತದೆ ಮತ್ತು ನಮ್ಮದು ಮಾಸ್ಕೋದಲ್ಲಿ ಇರುವ ಸಾಧ್ಯತೆ ಇದೆ” ಎಂದು ಸಿವನ್ ಹೇಳಿದ್ದಾರೆ.
ಭಾರತದ ಮಾನವ ಬಾಹ್ಯಾಕಾಶ ಯಾನ ‘ಗಗನಯಾನ’ಕ್ಕಾಗಿ ರಷ್ಯಾದಿಂದ ನಿರ್ಣಾಯಕ ಘಟಕಗಳನ್ನು ಪಡೆದುಕೊಳ್ಳುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿವನ್, “ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ. ನಾವು ಅವರ ಘಟಕಗಳನ್ನು ಖರೀದಿಸಬೇಕೇ ಎಂದು ನಾವು ಪರಿಶೀಲಿಸಬೇಕಾಗಿದೆ. ಘಟಕಗಳು ನಮಗೆ ಸೂಕ್ತವಾಗಿರಬೇಕು” ಎಂದಿದ್ದಾರೆ
ಇಸ್ರೋ ಗಮನವು ಪ್ರಸ್ತುತ ಭಾರತದ ಮೂನ್ ಲ್ಯಾಂಡಿಂಗ್ ಮಿಷನ್ ಚಂದ್ರಯಾನ್ -2 ರ ಮೇಲೆ ಇದೆ ಎಂದು ಸಿವನ್ ಹೇಳಿದ್ದಾರೆ.
ಚಂದ್ರಯಾನ್ -2 ಬಾಹ್ಯಾಕಾಶ ನೌಕೆ ಈಗ ಚಂದ್ರನ ಕಕ್ಷೆಯಲ್ಲಿದೆ ಮತ್ತು ಚಂದ್ರನ ಮೇಲ್ಮೈಯಿಂದ 100 ಕಿ.ಮೀ ಎತ್ತರಕ್ಕೆ ತರಲು ಇಸ್ರೋ ಇನ್ನೂ ಮೂರು ಕಕ್ಷೀಯ ಕಾರ್ಯಾಚರಣೆಯನ್ನು ಮಾಡಬೇಕಾಗುತ್ತದೆ. ಅದರ ನಂತರ, ಲ್ಯಾಂಡರ್ ‘ವಿಕ್ರಮ್’ ಬೇರ್ಪಡುತ್ತದೆ ಮತ್ತು ಸೆಪ್ಟೆಂಬರ್ 7 ರಂದು ಬೆಳಿಗ್ಗೆ 1.55 ರ ಸುಮಾರಿಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಇದು ಇಳಿಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.