ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಸಂಸ್ಥಾಪಕ ಮತ್ತು ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ಎಂದು ಕರೆಯಲ್ಪಡುವ ವಿಕ್ರಮ್ ಸಾರಾಭಾಯ್ ಅವರ 100 ನೇ ಜನ್ಮದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಗೂಗಲ್ ವಿಶೇಷವಾದ ಡೂಡಲ್ ಅನ್ನು ರಚನೆ ಮಾಡುವ ಮೂಲಕ ಅವರಿಗೆ ಗೌರವಾರ್ಪಣೆಯನ್ನು ಮಾಡಿದೆ.
“ಪ್ರಶಸ್ತಿ ವಿಜೇತ ಭಾರತೀಯ ಭೌತಶಾಸ್ತ್ರಜ್ಞ, ಕೈಗಾರಿಕೋದ್ಯಮಿ ಮತ್ತು ಸಂಶೋಧಕ ವಿಕ್ರಮ್ ಸಾರಾಭಾಯ್ ಅವರ 100 ನೇ ಹುಟ್ಟುಹಬ್ಬವನ್ನು ಆಚರಿಸುವುದಕ್ಕಾಗಿ ಇಂದಿನ ಡೂಡಲ್ ಅನ್ನು ಮುಂಬಯಿ ಮೂಲದ ಅತಿಥಿ ಕಲಾವಿದ ಪವನ್ ರಾಜೂರ್ಕರ್ ರಚನೆ ಮಾಡಿದ್ದಾರೆ. ಸಾರಾಭಾಯ್ ಅವರನ್ನು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಅನೇಕರು ನೆನಪಿಸಿಕೊಳ್ಳುತ್ತಾರೆ. ಕಾಸ್ಮಿಕ್ ಕಿರಣಗಳ ಬಗೆಗಿನ ಅವರ ವೈಯಕ್ತಿಕ ಆಸಕ್ತಿಯನ್ನೂ ಮೀರಿ ಅವರು, ರಾಕೆಟ್ಗಳಲ್ಲಿ, ಉಪಗ್ರಹಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿದ್ದಾರೆ. ಡಾ. ಸಾರಾಭಾಯ್ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ‘ಅಭಿವೃದ್ಧಿಯ ಯಂತ್ರ’ ಎಂದು ಅವರು ನಂಬಿದ್ದರು” ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ.
1966 ರಲ್ಲಿ ಪದ್ಮಭೂಷಣ್ ಮತ್ತು 1972 ರಲ್ಲಿ ಪದ್ಮಭೂಭೂಷಣ್ (ಮರಣೋತ್ತರವಾಗಿ) ಗೌರವಿಸಲ್ಪಟ್ಟ ಸಾರಾಭಾಯ್ ಅವರು, ಇಸ್ರೋವನ್ನು ಸ್ಥಾಪನೆ ಮಾಡಿದವರು. ಇದನ್ನು ಮೊದಲು 1962 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನೆಗಾಗಿನ ರಾಷ್ಟ್ರೀಯ ಸಮಿತಿ ಎಂದು ಕರೆಯಲಾಗುತ್ತಿತ್ತು.
1919 ರ ಆಗಸ್ಟ್ 12ರಂದು ಅಹ್ಮದಾಬಾದ್ ನಗರದಲ್ಲಿ ಜನಿಸಿದ ವಿಕ್ರಮ್ ಅಂಬಲಾಲ್ ಸಾರಾಭಾಯ್ ಅವರು ಪ್ರತಿಷ್ಠಿತ ಜೈನ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇವರ ಕುಟುಂಬ ಪ್ರಮುಖ ಕೈಗಾರಿಕೋದ್ಯಮವನ್ನು ನಡೆಸುತ್ತಿತ್ತು.
ಗುಜರಾತ್ ಕಾಲೇಜಿನಿಂದ ಪದವಿ ಮುಗಿಸಿಸಿ ಇವರು, ನಂತರ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಗಳಿಸಲು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದರು. ಅಲ್ಲಿಂದ ಹಿಂದಿರುಗಿದ ನಂತರ, ಅವರ ಕುಟುಂಬ ಮತ್ತು ಸ್ನೇಹಿತರು ನಡೆಸುತ್ತಿದ್ದ ಚಾರಿಟಬಲ್ ಟ್ರಸ್ಟ್ಗಳಿಗೆ ಅಹಮದಾಬಾದ್ನ ತನ್ನ ಮನೆಯ ಸಮೀಪವಿರುವ ಸಂಶೋಧನಾ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿದರು. ನವೆಂಬರ್ 11, 1947 ರಂದು ಅವರು ಅಹಮದಾಬಾದಿನಲ್ಲಿ ಭೌತಿಕ ಸಂಶೋಧನಾ ಪ್ರಯೋಗಾಲಯವನ್ನು (ಪಿಆರ್ ಎಲ್) ಸ್ಥಾಪಿಸಿದರು ಮತ್ತು 1966-1971ರವರೆಗೆ ಅದರಲ್ಲಿ ಸೇವೆ ಸಲ್ಲಿಸಿದರು.
ಡಿಸೆಂಬರ್ 30, 1971 ರಂದು ಇಹಲೋಕ ತ್ಯಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.