News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2011-23ರ ನಡುವೆ ಭಾರತ 496 ದಶಲಕ್ಷ ಜನರನ್ನು ಬಡತನದಿಂದ ಹೊರತಂದಿದೆ: ವಿಶ್ವಬ್ಯಾಂಕ್‌ ವರದಿ

ನವದೆಹಲಿ: ವಿಶ್ವ ಬ್ಯಾಂಕ್‌ನ ಅಕ್ಟೋಬರ್ 2026ರ ‘ಬಡತನ ಮತ್ತು ಸಮಾನತೆ ಸಂಕ್ಷಿಪ್ತ ವರದಿ’ (Poverty and Equity Brief) ಯ ಪ್ರಕಾರ, 2011 ಮತ್ತು 2023ರ ನಡುವೆ ಭಾರತವು ಅಂದಾಜು 496 ದಶಲಕ್ಷ ಜನರನ್ನು ಬಡತನದಿಂದ ಹೊರತಂದಿದೆ. ಈ ಅವಧಿಯಲ್ಲಿ ತೀವ್ರ ಬಡತನದಲ್ಲಿ ವಾಸಿಸುವ ಜನಸಂಖ್ಯೆಯ ಪ್ರಮಾಣವು ಶೇಕಡಾ 27.1ರಿಂದ ಶೇಕಡಾ 2.6ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ.

2021ರ ‘ಖರೀದಿ ಶಕ್ತಿ ಸಮಾನತೆ’ (Purchasing Power Parity – PPP) ಮಾನದಂಡದ ಪ್ರಕಾರ, ದಿನಕ್ಕೆ 4.20 ಅಮೆರಿಕನ್ ಡಾಲರ್‌ಗಳಷ್ಟು ಆದಾಯದ ‘ಕೆಳ-ಮಧ್ಯಮ ಆದಾಯದ ಬಡತನ ರೇಖೆ’ಗಿಂತ ಕೆಳಗೆ ವಾಸಿಸುವ ಜನರ ಪ್ರಮಾಣವು ಸಹ ಇದೇ ಅವಧಿಯಲ್ಲಿ ಶೇಕಡಾ 57.7ರಿಂದ ಶೇಕಡಾ 16.1ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ.

ಈ ಪ್ರಗತಿಯನ್ನು “ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬಡತನ ಕಡಿಮೆಯಾದ ನಿದರ್ಶನಗಳಲ್ಲಿ ಒಂದು” ಎಂದು ಬಣ್ಣಿಸಿರುವ ವಿಶ್ವ ಬ್ಯಾಂಕ್, ಭಾರತವು ಬಡತನದ ಆರ್ಥಿಕ ಹಾಗೂ ಆರ್ಥಿಕೇತರ – ಎರಡೂ ಅಳತೆಗೋಲುಗಳಲ್ಲಿ ಸುಧಾರಣೆಯನ್ನು ದಾಖಲಿಸಿದೆ ಎಂದು ಹೇಳಿದೆ.

ಬಡತನದಲ್ಲಿನ ಈ ಇಳಿಕೆಗೆ ಮುಖ್ಯ ಕಾರಣಗಳೆಂದರೆ; ಬಲವಾದ ಬಳಕೆಯ ಬೆಳವಣಿಗೆ (consumption growth), ಉದ್ಯೋಗಾವಕಾಶಗಳಲ್ಲಿನ ಹೆಚ್ಚಳ (ವಿಶೇಷವಾಗಿ ಮಹಿಳೆಯರಲ್ಲಿ), ಮತ್ತು ಆಹಾರ ಸಬ್ಸಿಡಿಗಳನ್ನು ಒಳಗೊಂಡಂತೆ ವಿಸ್ತರಿಸಲಾದ ಸಾಮಾಜಿಕ ಕಲ್ಯಾಣ ವರ್ಗಾವಣೆಗಳು (social transfers) ಎಂದು ವರದಿ ಉಲ್ಲೇಖಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top