ನವದೆಹಲಿ: ಇದೇ ವಾರ ಬಿಷ್ಕೆಕ್ ನಲ್ಲಿ ನಡೆಯಲಿರುವ ಶಾಂಗೈ ಕೋಆಪರೇಶನ್ ಆರ್ಗನೈಸೇಶನ್(SCO) ಸಮಿತ್ನಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಭೇಟಿಯಾಗಲಿದ್ದಾರೆ.
ಎರಡನೇ ಅವಧಿಯ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಚೀನಾ ಮತ್ತು ಭಾರತದ ನಾಯಕರುಗಳ ನಡುವಿನ ಮೊದಲ ದ್ವಿಪಕ್ಷೀಯ ಮಾತುಕತೆ ಇದಾಗಲಿದೆ.
ಕ್ಸಿ ಅವರು ಜೂನ್ 12ರಿಂದ 16ರವರೆಗೆ ಕರ್ಜೀಸ್ಥಾನ್ ಮತ್ತು ತಜಕೀಸ್ಥಾನ್ಗಳಿಗೆ ಭೇಟಿ ನೀಡಲಿದ್ದಾರೆ ಎಂದು ಚೀನಾ ಮೂಲಗಳು ತಿಳಿಸಿವೆ.
ಕರ್ಜೀಸ್ಥಾನದ ಬಿಷ್ಕೆಕ್ನಲ್ಲಿ ಜೂನ್ 13-14ರವರೆಗೆ SCO ಸಮಿತ್ ಜರುಗಲಿದೆ. SCO ಚೀನಾ ನೇತೃತ್ವದ 8 ಸದಸ್ಯರ ಆರ್ಥಿಕ ಮತ್ತು ಭದ್ರತಾ ಬ್ಲಾಕ್ ಆಗಿದೆ . ಚೀನಾ ಮತ್ತು ಪಾಕಿಸ್ತಾನ ಇದಕ್ಕೆ 2017ರಲ್ಲಿ ಸೇರ್ಪಡೆಗೊಂಡಿತು.
ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈ ಸಮಿತ್ನಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.