
ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ಚೀನಾದೊಂದಿಗೆ ಮುಖಾಮುಖಿ ಘಟನೆಗಳು ನಡೆದಿವೆ ಮತ್ತು ಅವು ಇನ್ನೂ ಮುಂದುವರಿದಿವೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಗುರುವಾರ ತಿಳಿಸಿದ್ದಾರೆ.
‘ಶೌರ್ಯ ಕಮಾಂಡೋಗಳು’ ಎಂಬ ಹೊಸ ಹೋರಾಟಗಾರರ ತಂಡವನ್ನು ರಚಿಸಲಾಗಿದೆ ಎಂದಿರುವ ಅವರು, ಅರುಣಾಚಲ ಪ್ರದೇಶದ ಹಲವು ಕಡೆಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಪಡೆಗಳೊಂದಿಗೆ ನಡೆಯುತ್ತಿರುವ ಮುಖಾಮುಖಿಯ ಸಂದರ್ಭದಲ್ಲಿ ಈ ತಂಡವು ತನ್ನ ಕೌಶಲ್ಯಗಳನ್ನು ಪ್ರದರ್ಶಿಸಿದೆ ಎಂದು ಹೇಳಿದರು.
ಈ ಕಮಾಂಡೋಗಳು ಪ್ರತಿಯೊಂದು ಗಡಿ ಬೆಟಾಲಿಯನ್ನಲ್ಲೂ ಇರುತ್ತಾರೆ ಮತ್ತು ಇವರು ಪಡೆಗೆ ಒಂದು ವಿಶಿಷ್ಟ ಗುರುತನ್ನು ನೀಡಲಿದ್ದಾರೆ ಎಂದು ಉನ್ನತ ಅಧಿಕಾರಿ ತಿಳಿಸಿದರು.
ಚೀನಾದ ಕುರಿತಾದ ಐಟಿಬಿಪಿ ಮುಖ್ಯಸ್ಥರ ಈ ಹೇಳಿಕೆಯು, ಭಾರತ-ಚೀನಾ ಗಡಿಯಲ್ಲಿನ ಸಾಮಾನ್ಯ ನಿಯೋಜನೆ ಮತ್ತು ಸನ್ನದ್ಧತೆಯ ಸಂದರ್ಭದಲ್ಲಿ ನೀಡಿದ್ದಾಗಿದೆಯೇ ಹೊರತು, ಯಾವುದೇ ನಿರ್ದಿಷ್ಟ ಘಟನೆ ಅಥವಾ ಪ್ರಸಂಗಕ್ಕೆ ಸಂಬಂಧಿಸಿದ್ದಲ್ಲ ಎಂದು ಮೂಲಗಳು ತಿಳಿಸಿವೆ.
1962ರಲ್ಲಿ ಸ್ಥಾಪನೆಯಾದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಚೀನಾದೊಂದಿಗಿನ 3,488 ಕಿ.ಮೀ ಉದ್ದದ ‘ಲೈನ್ ಆಫ್ ಆಕ್ಚುವಲ್ ಕಂಟ್ರೋಲ್’ (LAC) ಗಡಿಯನ್ನು ಕಾಯುತ್ತದೆ.
ಚೀನಾದೊಂದಿಗಿನ ‘ಲೈನ್ ಆಕ್ಚುವಲ್ ಕಂಟ್ರೋಲ್’ (LAC) ಬಳಿಯ ಪರಿಸ್ಥಿತಿಯು ಪ್ರಸ್ತುತ ಸ್ಥಿರವಾಗಿದೆ ಮತ್ತು ಆತಂಕಪಡುವ ಅಗತ್ಯವಿಲ್ಲ ಎಂದು ಕಳೆದ ತಿಂಗಳು ನಡೆದ ‘ಎನ್ಡಿಟಿವಿ ಡಿಫೆನ್ಸ್ ಸಮ್ಮಿಟ್’ನಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಹೇಳಿಕೆ ನೀಡಿದ ಬೆನ್ನಲ್ಲೇ, ಐಟಿಬಿಪಿ ಮುಖ್ಯಸ್ಥರ ಈ ಹೇಳಿಕೆ ಹೊರಬಿದ್ದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



