ನವದೆಹಲಿ: ಭಾರತ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಳ್ಳಬೇಕು, ಅದರ ಅನುಪಸ್ಥಿತಿಯಿಂದಾಗಿ ವಿಶ್ವಸಂಸ್ಥೆ ವ್ಯವಸ್ಥೆಗಳಲ್ಲಿ ವಿಶ್ವಾಸಾರ್ಹತೆ ಇಲ್ಲದಂತಾಗಿದೆ ಎಂದು ಭಾರತದಲ್ಲಿ ಜರ್ಮನಿಯ ನೂತನ ರಾಯಭಾರಿಯಾಗಿ ನೇಮಕಗೊಂಡಿರುವ ವಾಲ್ಟರ್ ಜೆ ಲಿಂಡ್ನರ್ ಹೇಳಿದ್ದಾರೆ.
ಮಂಗಳವಾರ ಲಿಂಡ್ನರ್ ಅವರು ತಮ್ಮ ದೃಢೀಕರಣಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಲ್ಲಿಕೆ ಮಾಡಿದರು.
ದೃಢೀಕರಣ ಸಲ್ಲಿಕೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಭಾರತ, ಜರ್ಮನ್, ಜಪಾನ್ ಮತ್ತು ಬ್ರೆಝಿಲ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿನ ಖಾಯಂ ಸದಸ್ಯತ್ವಕ್ಕೆ ಹೋರಾಟ ಮಾಡುತ್ತಿವೆ. ಭಾರತದ ಖಾಯಂ ಸದಸ್ಯತ್ವವನ್ನು ಪಡೆಯಲೇಬೇಕು. 1.37 ಶತಕೋಟಿ ಜನರಿರುವ ಭಾರತ ಈಗಲೂ ಭದ್ರತಾ ಮಂಡಳಿಯ ಸದಸ್ಯನಲ್ಲ, ಇದು ದುರಾದೃಷ್ಟಕರ. ಇದು ಮುಂದುವರೆಯಬಾರದು, ಇದರಿಂದ ವಿಶ್ವಸಂಸ್ಥೆ ವ್ಯವಸ್ಥೆಗಳ ವಿಶ್ವಾಸಾರ್ಹತೆ ಮೇಲೆ ಹೊಡೆತ ಬೀಳುತ್ತದೆ” ಎಂದಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪ್ರಸ್ತುತ ಅಮೆರಿಕಾ, ಚೀನಾ, ಫ್ರಾನ್ಸ್, ರಷ್ಯಾ ಮತ್ತು ಯುಕೆ ಖಾಯಂ ಸದಸ್ಯತ್ವವನ್ನು ಹೊಂದಿವೆ.
ಮಸೂದ್ ಅಝರ್ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಿದ ಕ್ರಮವನ್ನು ನನ್ನ ದೇಶ ಬೆಂಬಲಿಸಿದೆ ಎಂದ ಅವರು, ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತ ಮತ್ತು ಇತರ ದೇಶಗಳೊಂದಿಗೆ ಜರ್ಮನಿ ಅತ್ಯಂತ ನಿಕಟವಾಗಿ ಸಹಕರಿಸುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.