Date : Tuesday, 17-09-2019
ಕೇವಡಿಯಾ: ಜಮ್ಮು ಕಾಶ್ಮೀರದ ಬಗೆಗೆ ನಾವು ತೆಗೆದುಕೊಂಡ ನಿರ್ಧಾರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಂದ ಪ್ರೇರಿತಗೊಂಡಿದ್ದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ನಾವು ದಶಕಗಳ ಹಳೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ....
Date : Tuesday, 17-09-2019
ಬೆಂಗಳೂರು: ಕರ್ನಾಟಕ ಸರ್ಕಾರವು ಜಮ್ಮು ಕಾಶ್ಮೀರ ಮತ್ತು ಲಡಾಖ್ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ ಹೂಡಿಕೆಯನ್ನು ಮಾಡಲು ಆಸಕ್ತಿಯನ್ನು ತೋರಿಸಿದೆ. 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಇಲ್ಲಿ ಭಾರತದ ಇತರ ರಾಜ್ಯಗಳು ಭೂಮಿ ಖರೀದಿಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿವೆ. ಜಮ್ಮು...
Date : Monday, 16-09-2019
2019ರ ಆಗಸ್ಪ್ 5 ರಂದು ನರೇಂದ್ರ ಮೋದಿ ಸರ್ಕಾರವು ಸಂವಿಧಾನದ 370ನೇ ವಿಧಿ ಮತ್ತು 35 ಎ ಅನ್ನು ರದ್ದುಪಡಿಸುವ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಹಿಂಪಡೆದಿತ್ತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಳಿಸಿತ್ತು. ಈ ನಿರ್ಧಾರವನ್ನು ತೆಗೆದುಕೊಂಡಿದೆ....
Date : Monday, 16-09-2019
ಮೆಲ್ಬೋರ್ನ್: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾನುವಾರ ಕಾಶ್ಮೀರಿ ಪಂಡಿತ ಸಮುದಾಯ ಬೃಹತ್ ಸಮಾವೇಶವನ್ನು ಆಯೋಜನೆಗೊಳಿಸಿತ್ತು. ಕಾಶ್ಮೀರಿ ಪಂಡಿತರು ಆಸ್ಟ್ರೇಲಿಯಾದಲ್ಲಿನ ಇತರ ಭಾರತೀಯ ಸಮುದಾಯದವರ...
Date : Sunday, 15-09-2019
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಅಕ್ಟೋಬರ್ 3 ಮತ್ತು 4ರಂದು ಸೇನಾ ನೇಮಕಾತಿ ಕಾರ್ಯಕ್ರಮ ನಡೆಸುವುದಾಗಿ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ದಿಲ್ಲಾನ್ ಹೇಳಿದ್ದಾರೆ. “ಕಾಶ್ಮೀರದ ಜನತೆಗೆ ರಾಜ್ಯಪಾಲರು ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಮತ್ತು 3 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಸೇನಾ ನೇಮಕಾತಿ...
Date : Friday, 13-09-2019
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಜಿಬಿ ಪಂತ್ ಆಸ್ಪತ್ರೆಯ ಬಳಿಯಲ್ಲಿ ನಾಗರಿಕರು ಮುಕ್ತವಾಗಿ ಓಡಾಡುವ ದೃಶ್ಯವುಳ್ಳ ವಿಡಿಯೋವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿ ಕಶ್ಯಪ್ ಕಡಗತ್ತೂರು ಅವರು ಬುಧವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರು, ಸಾರಿಗೆ...
Date : Thursday, 12-09-2019
ಉಧಂಪುರ: ಜಮ್ಮು ಕಾಶ್ಮೀರದ ಉಧಂಪುರದಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಸಿಬ್ಬಂದಿಗಳ ಕೊರತೆ ಇರುವ ಹಿನ್ನಲೆಯಲ್ಲಿ ಕಾರ್ಮಿಕನ ಮಗಳೊಬ್ಬಳು ಅಲ್ಲಿನ ಮಕ್ಕಳಿಗೆ ಉಚಿತವಾಗಿ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಉಧಂಪುರದ ಸರ್ಕಾರಿ ಮಧ್ಯಮ ಶಾಲೆ ಅತ್ಯಂತ ಕುಗ್ರಾಮ ಪ್ರದೇಶದಲ್ಲಿ ಇದ್ದು, ಬೋಧನಾ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿದೆ. ಒಂದರಿಂದ ಎಂಟನೇ ತರಗತಿಯವರೆಗೆ ಶಿಕ್ಷಣವನ್ನು...
Date : Tuesday, 10-09-2019
ಅಂಬಾಲ : ಪಂಜಾಬಿನ ಅಂಬಾಲದಲ್ಲಿ ಭಾರತೀಯ ಸೇನೆ ಆಯೋಜನೆಗೊಳಿಸಿದ ಸೇನಾ ನೇಮಕಾತಿ ಸಮಾವೇಶದಲ್ಲಿ ಜಮ್ಮು ಕಾಶ್ಮೀರದ ಸಾಕಷ್ಟು ಯುವತಿಯರು ಪಾಲ್ಗೊಂಡಿದ್ದರು. ಈ ನೇಮಕಾತಿ ಸಮಾವೇಶವು ಸೆಪ್ಟಂಬರ್ 7ರಂದು ಆರಂಭಗೊಂಡಿದ್ದು, ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿದೆ. ಅಂಬಾಲದ ಖರ್ಗಾ ಕಾರ್ಪ್ಸ್ ಸ್ಪೋರ್ಟ್ಸ್ ಗ್ರೌಂಡ್‌ನಲ್ಲಿ...
Date : Saturday, 07-09-2019
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ದೌರ್ಜನ್ಯಗಳನ್ನು ಎಸಗುತ್ತಿದೆ ಎಂಬ ಆರೋಪವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನಿರಾಕರಿಸಿದ್ದಾರೆ. ಸೇನೆಯು ಈ ಪ್ರದೇಶದಲ್ಲಿ ಕೇವಲ ಭಯೋತ್ಪಾದಕರೊಂದಿಗೆ ಹೋರಾಡುತ್ತಿದೆ ಎಂದಿದ್ದಾರೆ. ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಜಮ್ಮು ಕಾಶ್ಮೀರದಲ್ಲಿ...
Date : Wednesday, 04-09-2019
ಶ್ರೀನಗರ: ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ಬದಲು ಉತ್ತಮ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸಲು ಕೈಜೋಡಿಸಿ ಎಂದು ಭಾರತೀಯ ಸೇನೆಯು ಜಮ್ಮು-ಕಾಶ್ಮೀರದ ಯುವಕರಿಗೆ ಕರೆಯನ್ನು ನೀಡಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ದಿಲ್ಲಾನ್ ಅವರು, “ಯುವಕರು ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ರೀತಿಯಲ್ಲಿ...