ಶ್ರೀನಗರ: ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ಬದಲು ಉತ್ತಮ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸಲು ಕೈಜೋಡಿಸಿ ಎಂದು ಭಾರತೀಯ ಸೇನೆಯು ಜಮ್ಮು-ಕಾಶ್ಮೀರದ ಯುವಕರಿಗೆ ಕರೆಯನ್ನು ನೀಡಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ದಿಲ್ಲಾನ್ ಅವರು, “ಯುವಕರು ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ರೀತಿಯಲ್ಲಿ ಆಮಿಷಕ್ಕೊಳಗಾಗಬಾರದು” ಎಂದಿದ್ದಾರೆ.
“ಜಮ್ಮು-ಕಾಶ್ಮೀರದ ಯುವಕರು ಉತ್ತಮ ಭವಿಷ್ಯಕ್ಕಾಗಿ ಪರಿಶ್ರಮಪಟ್ಟು ದುಡಿಯಬೇಕು ಮತ್ತು ಬಂದೂಕುಗಳನ್ನು ಕೈಗೆತ್ತಿಕೊಳ್ಳುವಂತೆ ಆಮಿಷಕ್ಕೆ ಒಳಗಾಗಬಾರದು” ಎಂದಿದ್ದಾರೆ.
“ನಿಮಗೆ ನಿಮ್ಮ ಕುಟುಂಬ ಮತ್ತು ಪೋಷಕರನ್ನು ಹೆಮ್ಮೆ ಪಡಿಸುವ ಗುರಿ ಇರಬೇಕು. ವಿಶ್ವದಲ್ಲಿನ ಎಲ್ಲಾ ಅವಕಾಶಗಳು ನಿಮ್ಮ ಬಾಗಿಲಿನ ಮುಂದೆಯೇ ಇದೆ. ಕಾಶ್ಮೀರದ ಯುವಕರು ಕಾಶ್ಮೀರದ ಭವಿಷ್ಯ” ಎಂದಿದ್ದಾರೆ.
ಶನಿವಾರ ಜಮ್ಮು-ಕಾಶ್ಮೀರದ ವಿವಿಧ ಭಾಗಗಳ ಸುಮಾರು 575 ಯುವಕರು ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ. ಅವರನ್ನು ಜಮ್ಮು ಆಂಡ್ ಕಾಶ್ಮೀರ್ ಲೈಟ್ ಇನ್ಫಾಂಟ್ರಿ ಪಡೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಾನ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.