ಉಧಂಪುರ: ಜಮ್ಮು ಕಾಶ್ಮೀರದ ಉಧಂಪುರದಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಸಿಬ್ಬಂದಿಗಳ ಕೊರತೆ ಇರುವ ಹಿನ್ನಲೆಯಲ್ಲಿ ಕಾರ್ಮಿಕನ ಮಗಳೊಬ್ಬಳು ಅಲ್ಲಿನ ಮಕ್ಕಳಿಗೆ ಉಚಿತವಾಗಿ ಪಾಠವನ್ನು ಹೇಳಿಕೊಡುತ್ತಿದ್ದಾರೆ.
ಉಧಂಪುರದ ಸರ್ಕಾರಿ ಮಧ್ಯಮ ಶಾಲೆ ಅತ್ಯಂತ ಕುಗ್ರಾಮ ಪ್ರದೇಶದಲ್ಲಿ ಇದ್ದು, ಬೋಧನಾ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿದೆ. ಒಂದರಿಂದ ಎಂಟನೇ ತರಗತಿಯವರೆಗೆ ಶಿಕ್ಷಣವನ್ನು ನೀಡುವ ಈ ಶಾಲೆಗೆ ಆಗಮಿಸುವ ಮಕ್ಕಳು ಬಡತನದ ಹಿನ್ನಲೆಯುಳ್ಳವರು. ಹೀಗಾಗಿ ಸಿಬ್ಬಂದಿ ಕೊರತೆಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಕವಿತಾ ದೇವಿ ಅಲ್ಲಿ ಬೋಧನೆ ಮಾಡುತ್ತಿದ್ದಾರೆ. ಅದು ಕೂಡ ಯಾವುದೇ ಹಣ ಪಡೆಯದೆ.
“ನಾನು ಮೂರು ವರ್ಷಗಳಿಂದ ಇಲ್ಲಿ ಬೋಧಿಸುತ್ತಿದ್ದೇನೆ. ಶಾಲೆಯಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ನಾನು ಇಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇದು ಬಹಳ ಕುಗ್ರಾಮದಲ್ಲಿರುವ ಪ್ರದೇಶವಾಗಿದೆ, ಹೀಗಾಗಿ ವಿದ್ಯಾರ್ಥಿಗಳು ಇಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಆದ್ದರಿಂದ ನಾನು ಅವರಿಗೆ ಕಲಿಸಲು ಯೋಚಿಸಿದೆ. ಕಲಿಸಲು ಶಿಕ್ಷಕರೇ ಇಲ್ಲ ಎಂದ ಮೇಲೆ ಮಕ್ಕಳು ಹೇಗೆ ತಾನೆ ಅಧ್ಯಯನ ಮಾಡುತ್ತಾರೆ? ” ಎಂದು ಕವಿತಾ ಪ್ರಶ್ನಿಸುತ್ತಾರೆ.
ಪ್ರಧಾನಮಂತ್ರಿಯವರು ಈ ಸಮಸ್ಯೆಯ ಬಗ್ಗೆ ಗಮನವನ್ನು ಹರಿಸಿ, ಉತ್ತಮ ಶಿಕ್ಷಣ ಮತ್ತು ಶಿಕ್ಷಕರ ತುರ್ತು ಅಗತ್ಯವಿರುವ ಮಕ್ಕಳ ಭವಿಷ್ಯವನ್ನು ಉಳಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
“ಕವಿತಾ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾಳೆ ಮತ್ತು ಅವರು ಈ ಬಡ ವಿದ್ಯಾರ್ಥಿಗಳ ಕಲಿಕೆಗಾಗಿ ನಮಗೆ ಸಹಾಯ ಮಾಡುತ್ತಿದ್ದಾರೆ. ಅವರು ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸುತ್ತಾರೆ. ಸರ್ಕಾರ ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ನಮಗೆ ಸಹಾಯವನ್ನು ಮಾಡಬೇಕು ಎಂದು ನಾನು ವಿನಂತಿಸುತ್ತೇನೆ, ಇದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ” ಎಂದು ಶಾಲೆಯ ಶಿಕ್ಷಕರೊಬ್ಬರು ಹೇಳುತ್ತಾರೆ.
ಬಡತನದಲ್ಲಿ ಇದ್ದರೂ ಕೂಡ ಕವಿತಾ ಅವರು ಮಕ್ಕಳಿಗೆ ಪಾಠ ಹೇಲಿಕೊಡುವ ಮೂಲಕ ಎಲ್ಲರು ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.