ಮೆಲ್ಬೋರ್ನ್: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾನುವಾರ ಕಾಶ್ಮೀರಿ ಪಂಡಿತ ಸಮುದಾಯ ಬೃಹತ್ ಸಮಾವೇಶವನ್ನು ಆಯೋಜನೆಗೊಳಿಸಿತ್ತು.
ಕಾಶ್ಮೀರಿ ಪಂಡಿತರು ಆಸ್ಟ್ರೇಲಿಯಾದಲ್ಲಿನ ಇತರ ಭಾರತೀಯ ಸಮುದಾಯದವರ ಜೊತೆಗೂಡಿ ಸಮಾವೇಶವನ್ನು ಆಯೋಜನೆಗೊಳಿಸಿದ್ದಾರೆ. ವಿಕ್ಟೋರಿಯನ್ ಸ್ಟೇಟ್ ಪಾರ್ಲಿಮೆಂಟ್ನಿಂದ ಫೆಡರೇಶನ್ ಸ್ಕ್ವ್ಯಾರ್ವರೆಗೆ ರ್ಯಾಲಿಯನ್ನು ನಡೆಸಲಾಯಿತು. ತಿರಂಗಾ ಮತ್ತು ಜಮ್ಮು ಕಾಶ್ಮೀರ ನಮ್ಮ ತಾಯ್ನಾಡು, ಭಾರತ ನಮ್ಮ ರಾಷ್ಟ್ರ ಎಂಬಿತ್ಯಾದಿ ಘೋಷಣೆಗಳುಳ್ಳ ಪೋಸ್ಟರ್ಗಳನ್ನು ಹಿಡಿದು, ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಭಾರತೀಯರು ರ್ಯಾಲಿಯಲ್ಲಿ ಭಾಗವಹಿಸಿದರು.
ಇಸ್ಲಾಮಿಕ್ ಭಯೋತ್ಪಾದಕರಿಂದ ನರಮೇಧಕ್ಕೆ ಒಳಗಾದ ಕಾಶ್ಮೀರಿ ಪಂಡಿತರು, 1989-1990ರಲ್ಲಿ ಪಾಕಿಸ್ಥಾನ ಬೆಂಬಲಿತ ಭಯೋತ್ಪಾದಕರು ತಮ್ಮ ಪೂರ್ವಜರನ್ನು ತಾಯ್ನಾಡಿನಿಂದ ಹೇಗೆ ಹೊರಹಾಕಿದರು ಎಂಬ ಬಗ್ಗೆ ತಮ್ಮ ವೈಯಕ್ತಿಕ ಕಥೆಗಳನ್ನು ಹಂಚಿಕೊಂಡಿದ್ದಾರೆ.
ಈಗಾಗಲೇ ಅಮೆರಿಕದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ಇದೇ ರೀತಿಯ ರ್ಯಾಲಿಗಳನ್ನು ಇತರ ಭಾರತೀಯರ ಜೊತೆಗೂಡಿ ಆಯೋಜನೆಗೊಳಿಸಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕಿದ ಮೋದಿ ಸರ್ಕಾರಕ್ಕೆ ಬೆಂಬಲ ನೀಡುವ ಸಲುವಾಗಿ ಈ ಸಮಾವೇಶಗಳನ್ನು ಆಯೋಜನೆಗೊಳಿಸಲಾಗುತ್ತಿದೆ.
ಪಾಕಿಸ್ಥಾನವು ಮೋದಿ ಸರ್ಕಾರದ ನಿರ್ಧಾರದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಬೆಂಬಲವನ್ನು ನೀಡಿ ಸಮಾವೇಶಗಳನ್ನು ಆಯೋಜನೆಗೊಳಿಸುತ್ತಿರುವುದು ನಿಜಕ್ಕೂ ಮಹತ್ವದ್ದಾಗಿದೆ.
Melbourne, Australia: Australian citizens of Indian-origin gather to show support to revocation of Article 370. It was followed by a rally led by Kashmiri Pandits from Victorian state parliament to Federation Square pic.twitter.com/nHceQb2Y9U
— ANI (@ANI) September 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.