Date : Saturday, 08-04-2017
ವಾರಣಾಸಿ: ಖ್ಯಾತ ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ನಾಡು ವಾರಣಾಸಿ ಶೀಘ್ರದಲ್ಲೇ ಸಂಗೀತ ಗ್ರಾಮವನ್ನು ಪಡೆಯಲಿದೆ. ಈ ಬಗೆಗಿನ ಪ್ರಸ್ತಾವಣೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಸಮ್ಮತಿ ಸೂಚಿಸಿದ್ದಾರೆ. ಈ ಗ್ರಾಮಕ್ಕೆ ‘ಬಿಸ್ಮಿಲ್ಲಾ ಖಾನ್ ಸಂಗೀತ್ ಗ್ರಾಮ್’...
Date : Saturday, 08-04-2017
ನವದೆಹಲಿ: ಚಂಪಾರಣ್ ಸತ್ಯಾಗ್ರಹದ 100ನೇ ವರ್ಷಾಚರಣೆಯನ್ನು ಸ್ವಚ್ಛಭಾರತ ಅಭಿಯಾನದೊಂದಿಗೆ ಬೆಸೆಯಲು ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸಿದ್ದಾರೆ. ಚಂಪಾರಣ್ ಸತ್ಯಾಗ್ರಹದ ಥೀಮ್‌ನ್ನು ಮರು ಸ್ಥಾಪಿಸುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ. ಸತ್ಯಾಗ್ರಹವನ್ನು ಮರು ವ್ಯಾಖ್ಯಾನಿಸಿ ಈ ಕಾರ್ಯಕ್ರಮಕ್ಕೆ ‘ಸ್ವಚ್ಛಾಗ್ರಹ’ ಎಂಬ ಹೆಸರನ್ನು...
Date : Saturday, 08-04-2017
ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಗ್ಗೆ ಶುಂಗ್ಲು ಸಮಿತಿಯ ವರದಿಯಲ್ಲಿ ಮಾಡಲಾದ ಆರೋಪಗಳಿಂದ ನನಗೆ ಅತೀವ ನೋವಾಗಿದೆ. ಕೇಜ್ರಿವಾಲ್ ನನ್ನೆಲ್ಲಾ ಕನಸುಗಳನ್ನು ಭಗ್ನ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬೇಸರ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಕೇಜ್ರಿವಾಲ್...
Date : Saturday, 08-04-2017
ಲಕ್ನೋ: ಉತ್ತರಪ್ರದೇಶ ಶಿಯಾ ಮುಸ್ಲಿಮರು ಗೋವುಗಳ ವಧೆಯನ್ನು ತಡೆಯುವ ಸಲುವಾಗಿ ’ಗೋ ರಕ್ಷಕ ದಳ’ವನ್ನು ಆರಂಭಿಸಿದ್ದಾರೆ. ಇದರ ಅಧ್ಯಕ್ಷರಾಗಿ ಶಮಿಲ್ ಶಮ್ಶಿ ಅವರು ನೇಮಕಗೊಂಡಿದ್ದಾರೆ. ದೇಶದಲ್ಲಿನ ಶಿಯಾ ಮುಸ್ಲಿಮರ ಕೇಂದ್ರ ಸ್ಥಳವೆಂದು ಪರಿಗಣಿತವಾಗಿರುವ ಲಕ್ನೋದಲ್ಲಿ ನಡೆಸಲಾದ ಸಭೆಯಲ್ಲಿ ಶಿಯಾ ಯುವಕರೊಂದಿಗೆ ಚರ್ಚಿಸಿ...
Date : Saturday, 08-04-2017
ಲಕ್ನೋ: ಉತ್ತರಪ್ರದೇಶದ ಶಿಕ್ಷಣ ವ್ಯವಸ್ಥೆಯನ್ನು ಅಧುನೀಕರಿಸಲು ಮುಂದಾಗಿರುವ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು, ಆರನೇ ತರಗತಿಯ ಬದಲು ನರ್ಸರಿಯಿಂದಲೇ ಇಂಗ್ಲೀಷ್ ಶಿಕ್ಷಣ ಆರಂಭಿಸಲು ನಿರ್ಧರಿಸಿದ್ದಾರೆ. ರಾಷ್ಟ್ರೀಯತೆ ಮತ್ತು ಆಧುನಿಕತೆ ಎರಡನ್ನೂ ಶಿಕ್ಷಣದಲ್ಲಿ ಅಳವಡಿಸಲು ಅವರು ಮುಂದಾಗಿದ್ದಾರೆ. ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ...
Date : Saturday, 08-04-2017
ನವದೆಹಲಿ: ವರ್ಲ್ಡ್ ಎಕನಾಮಿಕ್ ಫೋರಂ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮದಲ್ಲಿ ನೀಡಿರುವ ರ‍್ಯಾಂಕಿಂಗ್‌ನಲ್ಲಿ ಭಾರತ 40ನೇ ಸ್ಥಾನಕ್ಕೆ ಜಿಗಿತ ಕಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ವಲಯಕ್ಕೆ ಸರ್ಕಾರ ಎಷ್ಟು ಮಹತ್ವ ನೀಡುತ್ತಿದೆ ಎಂಬುದನ್ನು ಇದು ತೋರಿಸಿದೆ ಎಂದಿದ್ದಾರೆ....
Date : Friday, 07-04-2017
ಲಕ್ನೋ: ಉತ್ತರಪ್ರದೇಶದಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳಲ್ಲಿರುವ ’ಸಮಾಜವಾದಿ’ ಹೆಸರನ್ನು ತೆಗೆದು ಹಾಕಲು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಮುಂದಾಗಿದ್ದಾರೆ. ‘ಸಮಾಜವಾದಿ’ ಹೆಸರಿನ ಬದಲು ‘ಮುಖ್ಯಮಂತ್ರಿ’ ಎಂಬ ಹೆಸರು ಹಾಕುವಂತೆ ಅವರು ಆದೇಶಿಸಿದ್ದಾರೆ. ಸಮಾಜವಾದಿಯ ಹೆಸರಿರುವ ಎಲ್ಲಾ ಯೋಜನೆಗಳನ್ನು ಸಂಪುಟದ ಮುಂದಿಡಬೇಕು...
Date : Friday, 07-04-2017
ನವದೆಹಲಿ: ಮಾನಸ ಸರೋವರ ಯಾತ್ರೆಗೆ ಈ ವರ್ಷ ಒಟ್ಟು 4 ಸಾವಿರ ಅರ್ಜಿಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ವೀಕರಿಸಿದೆ. ಕಳೆದ ಬಾರಿಗಿಂತ ಈ ಬಾರಿ 1800 ಅರ್ಜಿಗಳು ಹೆಚ್ಚಾಗಿವೆ. ಈ ಬಗೆಗಿನ ವಿವರಗಳನ್ನು ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ‘ಒಟ್ಟು...
Date : Friday, 07-04-2017
ನವದೆಹಲಿ: ಏಪ್ರಿಲ್ 7ರಂದು ಜಗತ್ತಿನಾದ್ಯಂತ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಡಿಪ್ರೆಶನ್(ಖಿನ್ನತೆ)ಯ ವಿಷಯವನ್ನಿಟ್ಟುಕೊಂಡು ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ‘ಡಿಪ್ರೆಶನ್: ಲೆಟ್ ಅಸ್ ಟಾಕ್’ ಎಂಬುದು ಈ ಬಾರಿ ವಿಶ್ವ ಆರೋಗ್ಯ ದಿನದ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್...
Date : Friday, 07-04-2017
ನವದೆಹಲಿ: ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ಪಡೆಯಲು ಬೇಕಾದ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ವಿಟೋ ಅಧಿಕಾರದೊಂದಿಗೆ ಖಾಯಂ ಸದಸ್ಯತ್ವ ಪಡೆಯುವ ಎಲ್ಲಾ ಅರ್ಹತೆಗಳೂ ಭಾರತಕ್ಕಿದೆ ಎಂದು ಲೋಕಸಭೆಯಲ್ಲಿ ಅವರು ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ...