ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಗ್ಗೆ ಶುಂಗ್ಲು ಸಮಿತಿಯ ವರದಿಯಲ್ಲಿ ಮಾಡಲಾದ ಆರೋಪಗಳಿಂದ ನನಗೆ ಅತೀವ ನೋವಾಗಿದೆ. ಕೇಜ್ರಿವಾಲ್ ನನ್ನೆಲ್ಲಾ ಕನಸುಗಳನ್ನು ಭಗ್ನ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬೇಸರ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಕೇಜ್ರಿವಾಲ್ ನನ್ನ ಸಹೋದ್ಯೋಗಿಯಾಗಿದ್ದರು, ಆ ಸಂದರ್ಭದಲ್ಲಿ ವಿದ್ಯಾವಂತ, ಹೊಸ ತಲೆಮಾರಿನ ವ್ಯಕ್ತಿ ದೇಶ ಮುನ್ನಡೆಸಬೇಕು ಎಂದು ನಾನು ಬಯಸಿದ್ದೆ. ಆದರೆ ಅದು ಕನಸಾಗಿಯೇ ಉಳಿಯಿತು. ನನ್ನ ಕನಸು ಛಿದ್ರವಾಯಿತು ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಕೇಜ್ರಿವಾಲ್ ರಾಜಕೀಯ ಪಕ್ಷ ಸ್ಥಾಪಿಸಿದಾಗ ಅದರಲ್ಲಿ ಭಾಗಿಯಾದಂತೆ ದೇವರೇ ನನಗೆ ಬುದ್ಧಿ ನೀಡಿದ. ಇಲ್ಲವಾಗಿದ್ದರೆ ನನ್ನ ಗೌರವ ಕೂಡ ನಾಶವಾಗುತ್ತಿತ್ತು. ಅವರು ಮುಖ್ಯಮಂತ್ರಿಯಾದ ಬಳಿಕವೂ ಅವರನ್ನು ಭೇಟಿಯಾಗಬೇಕು ಎಂದು ನನಗೆ ಅನಿಸಲೇ ಇಲ್ಲ. ಅವರು ಯಾಕೆ ನನ್ನನ್ನು ಗುರು ಎಂದು ಸಂಬೋಧಿಸುತ್ತಾರೆ ಎಂಬುದು ನನಗೆ ಅರ್ಥವಾಗಿದೆ. ದೇವರೇ ನನ್ನನ್ನು ಕಾಪಾಡಿದ ಎಂದಿದ್ದಾರೆ.
ಕೇಜ್ರಿವಾಲ್ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಶುಂಗ್ಲು ಸಮಿತಿ ವರದಿಯನ್ನು ನೀಡಿದೆ. ಇದೀಗ ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.