ಲಕ್ನೋ: ಉತ್ತರಪ್ರದೇಶದಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳಲ್ಲಿರುವ ’ಸಮಾಜವಾದಿ’ ಹೆಸರನ್ನು ತೆಗೆದು ಹಾಕಲು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಮುಂದಾಗಿದ್ದಾರೆ.
‘ಸಮಾಜವಾದಿ’ ಹೆಸರಿನ ಬದಲು ‘ಮುಖ್ಯಮಂತ್ರಿ’ ಎಂಬ ಹೆಸರು ಹಾಕುವಂತೆ ಅವರು ಆದೇಶಿಸಿದ್ದಾರೆ. ಸಮಾಜವಾದಿಯ ಹೆಸರಿರುವ ಎಲ್ಲಾ ಯೋಜನೆಗಳನ್ನು ಸಂಪುಟದ ಮುಂದಿಡಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಸಮಾಜವಾದಿ ಅಂಬ್ಯುಲೆನ್ಸ್ ಸರ್ವಿಸ್, ಸಮಾಜವಾದಿ ಗ್ರಾಮೀಣಾಭಿವೃದ್ಧಿ ಯೋಜನೆ ಮುಂತಾದ ಅಭಿವೃದ್ಧಿ ಯೋಜನೆಗಳಿಗೆ ಅಖಿಲೇಶ್ ಸಿಂಗ್ ಯಾದವ್ ಸರ್ಕಾರ ತಮ್ಮ ಪಕ್ಷದ ಹೆಸರನ್ನು ಇಟ್ಟಿದೆ.
ಇದೀಗ ಯೋಗಿ ಅದನ್ನು ತೆಗೆದು ಹಾಕಿ ಮುಖ್ಯಮಂತ್ರಿ ಎಂಬ ಹೆಸರಿಡಬೇಕು ಎಂದು ಸೂಚಿಸಿದ್ದಾರೆ.
ಅಲ್ಲದೇ ಅಖಿಲೇಶ್ ಸರ್ಕಾರ ವಿತರಿಸಿದ್ದ ೬೦ ಲಕ್ಷ ರೇಶನ್ ಕಾರ್ಡ್ಗಳಲ್ಲಿ ಅವರದ್ದೇ ಭಾವಚಿತ್ರವಿದೆ, ಇದನ್ನೂ ತೆಗೆದು ಹಾಕಲು ಯೋಗಿ ಕ್ರಮಕೈಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.