ವಾರಣಾಸಿ: ಖ್ಯಾತ ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ನಾಡು ವಾರಣಾಸಿ ಶೀಘ್ರದಲ್ಲೇ ಸಂಗೀತ ಗ್ರಾಮವನ್ನು ಪಡೆಯಲಿದೆ. ಈ ಬಗೆಗಿನ ಪ್ರಸ್ತಾವಣೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಸಮ್ಮತಿ ಸೂಚಿಸಿದ್ದಾರೆ.
ಈ ಗ್ರಾಮಕ್ಕೆ ‘ಬಿಸ್ಮಿಲ್ಲಾ ಖಾನ್ ಸಂಗೀತ್ ಗ್ರಾಮ್’ ಎಂಬ ಹೆಸರನ್ನು ಇಡಲಾಗುತ್ತದೆ. ಇಲ್ಲಿ ಮೂಸಿಯಂ ಸೆಂಟರ್, ತರಬೇತಿ ಮತ್ತು ಸಂಶೋಧನಾ ಕೇಂದ್ರ, ಸಂಗೀತದ ಘರಾನಕ್ಕೆ ಸಂಬಂಧಿಸಿದ ಹಲವಾರು ವಿಶೇಷತೆಗಳು ಈ ಗ್ರಾಮದಲ್ಲಿ ಇದರಲಿದೆ.
ಬಿಸ್ಮಿಲ್ಲಾ ಅವರ ದತ್ತು ಪುತ್ರಿ ಪದ್ಮಶ್ರೀ ಸೋಮ ಘೋಷ್ ಅವರು ಈ ಯೋಜನೆಗೆ ಮುನ್ನುಡಿ ಬರೆದಿದ್ದು, ಇದೀಗ ಸಿಎಂ ಅವರ ಸಮ್ಮತಿಯೂ ಅವರಿಗೆ ಸಿಕ್ಕಿದೆ. ಸಂಗೀತ ಗ್ರಾಮ ಸ್ಥಾಪನೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು, ಭೂಮಿಯನ್ನು ನೀಡುವುದಾಗಿ ಯೋಗಿ ಭರವಸೆ ನೀಡಿದ್ದಾರೆ.
‘ನನ್ನ ತಂದೆಯ ಕನಸು ಸಾಕಾರಗೊಳ್ಳುವ ಸಮಯ ಬಂದಿದೆ. ಇದು ನನ್ನ ಜೀವನದ ಅತೀದೊಡ್ಡ ಸಂತಸದ ದಿನ’ ಎಂದು ಯೋಗಿ ಭೇಟಿಯ ಬಳಿಕ ಘೋಷ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.