ನವದೆಹಲಿ: ವರ್ಲ್ಡ್ ಎಕನಾಮಿಕ್ ಫೋರಂ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮದಲ್ಲಿ ನೀಡಿರುವ ರ್ಯಾಂಕಿಂಗ್ನಲ್ಲಿ ಭಾರತ 40ನೇ ಸ್ಥಾನಕ್ಕೆ ಜಿಗಿತ ಕಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ವಲಯಕ್ಕೆ ಸರ್ಕಾರ ಎಷ್ಟು ಮಹತ್ವ ನೀಡುತ್ತಿದೆ ಎಂಬುದನ್ನು ಇದು ತೋರಿಸಿದೆ ಎಂದಿದ್ದಾರೆ.
ಈ ವರ್ಷ ವರ್ಲ್ಡ್ ಎಕನಾಮಿಕ್ ಫೋರಂ ನೀಡಿರುವ ವರದಿಯಲ್ಲಿ ಭಾರತ 40ನೇ ಸ್ಥಾನವನ್ನು ಅಲಂಕರಿಸಿದೆ. 2015ರಲ್ಲಿ 52ನೇ ಸ್ಥಾನ ಮತ್ತು 2013ರಲ್ಲಿ 65ನೇ ಸ್ಥಾನವನ್ನು ಭಾರತ ಹೊಂದಿತ್ತು. ಈ ಬಾರಿ 12 ಸ್ಥಾನಗಳಷ್ಟು ಭಾರತ ಮೇಲಕ್ಕೇರಿದೆ.
ಈ ಬಗೆಗಿನ ತಮ್ಮ ಸಂತಸವನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ಅವರು, ‘ಕಳೆದ 4 ವರ್ಷದಲ್ಲಿ ಭಾರತ ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮದಲ್ಲಿ 25 ಸ್ಥಾನಗಳ ಜಿಗಿತ ಕಂಡಿದೆ. ಇದು ಪ್ರವಾಸೋದ್ಯಮಕ್ಕೆ ಸರ್ಕಾರ ನೀಡುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದೊಂದು ಅತೀ ಸಂತಸದ ಸುದ್ದಿ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.