News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಿಷೇಧ ಹಿನ್ನಲೆ: ಮುಂಬಯಿಯಲ್ಲಿ 591 ಕೆಜಿ ಪ್ಲಾಸ್ಟಿಕ್ ಸಂಗ್ರಹ

ಮುಂಬಯಿ: ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಪ್ಲಾಸ್ಟಿಕ್ ನಿಷೇಧ ಜಾರಿಗೊಂಡಿದೆ. ಈ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ), ಕೇವಲ ಎರಡನೇ ದಿನದಲ್ಲಿ ಸುಮಾರು 591.67 ಕೆಜಿಗಳ ನಿಷೇಧಿತ ಪ್ಲಾಸ್ಟಿಕ್ ಮತ್ತು ರೂ.3,35,000 ದಂಡದ ಮೊತ್ತವನ್ನು ಸಂಗ್ರಹಿಸಿದೆ. ಶನಿವಾರದಿಂದ ಬಿಎಂಸಿ ಪ್ಲಾಸ್ಟಿಕ್ ನಿಷೇಧವನ್ನು...

Read More

ಮಹಾರಾಷ್ಟ್ರ: ಹುತಾತ್ಮ ಯೋಧರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ 2 ಎಕರೆ ಭೂಮಿ

ಮುಂಬಯಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ವೀರ ಯೋಧರ ಕುಟುಂಬಗಳು ಹಣಕಾಸು ಮುಗ್ಗಟ್ಟಿಗೆ ಒಳಗಾಗಬಾರದು ಎಂಬ ಸದುದ್ದೇಶದೊಂದಿಗೆ ಮಹಾರಾಷ್ಟ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು ಘೋಷಿಸಿದೆ. ಹುತಾತ್ಮರ ಪತ್ನಿಗೆ 2 ಎಕರೆ ಭೂಮಿಯನ್ನು ನೀಡಲಿದೆ. ಒಂದು ವೇಳೆ ಆಕೆ ಬದುಕಿಲ್ಲದ ಪಕ್ಷದಲ್ಲಿ ಹುತಾತ್ಮನ ಕಾನೂನುಬದ್ಧ ಉತ್ತರಾಧಿಕಾರಿಗಳು...

Read More

3 ದಿನಗಳ ಇಂಡೋನೇಷ್ಯಾ ಭೇಟಿಯಲ್ಲಿ ಐಎನ್‌ಎಸ್ ಶಕ್ತಿ, ಕರ್ಮೋಟ

ನವದೆಹಲಿ: ಭಾರತದ ನೌಕಾ ಹಡಗುಗಳಾದ ಐಎನ್‌ಎಸ್ ಶಕ್ತಿ ಮತ್ತು ಕರ್ಮೋಟ ಮೂರು ದಿನಗಳ ಮಕಸ್ಸರ್, ಇಂಡೋನೇಷ್ಯಾ ಭೇಟಿಯಲ್ಲಿದ್ದು, ಭಾನುವಾರ ವೀಕ್ಷಕರಿಗಾಗಿ ತೆರೆದುಕೊಂಡಿದೆ. ಮಕಸ್ಸರ್‌ನ ಬಂದರಿನಲ್ಲಿ ಇದು ಇದ್ದು, ಇದುವರೆಗೆ ಒಟ್ಟು 100 ಜನರು ಹಡಗನ್ನು ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಅವರಿಗೆ ಹಡಗಿನ...

Read More

ಅವಸಾನದಲ್ಲಿರುವ ನಕ್ಸಲರಿಂದ ತಮ್ಮ ಪಡೆ ಸೇರುವಂತೆ ಗ್ರಾಮಸ್ಥರಿಗೆ ಬೆದರಿಕೆ

ದಂತೇವಾಡ: ನಕ್ಸಲ್ ವಿರೋಧಿ ಹೋರಾಟದಲ್ಲಿ ನಮ್ಮ ಭದ್ರತಾ ಪಡೆಗಳು ಮೇಲುಗೈ ಸಾಧಿಸುತ್ತಿವೆ. ನಿರಂತರವಾದ ಕಾರ್ಯಾಚರಣೆಯಿಂದಾಗಿ ನಕ್ಸಲರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಅಪಾರ ಸಂಖ್ಯೆಯ ನಕ್ಸಲರು ಶರಣಾಗತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಇದು ಕಾಡಿನಲ್ಲಿನ ನಕ್ಸಲರನ್ನು ತೀವ್ರವಾಗಿ ಬಾಧಿಸಿದೆ. ತಮ್ಮ...

Read More

ಸೇನೆಯಿಂದ ಆಪರೇಶನ್ ಆಲ್ ಔಟ್: ಮತ್ತಿಬ್ಬರು ಉಗ್ರರ ಸಂಹಾರ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಜನ್ಮ ಜಾಲಾಡುತ್ತಿವೆ. ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ಉಗ್ರರ ತಲೆಗಳು ಉರುಳುತ್ತಿವೆ. ಬಿಡುಗಡೆಗೊಳಿಸಲಾಗಿದ್ದ 22 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿನ ಇಬ್ಬರಿಗೆ ಈಗಾಗಲೇ ನರಕದ ದಾರಿಯನ್ನು ತೋರಿಸಲಾಗಿದೆ. ದಕ್ಷಿಣ ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ...

Read More

ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಪ್ಲಾಸ್ಟಿಕ್ ಬ್ಯಾನ್ ಜಾರಿ: ಉಲ್ಲಂಘಿಸಿದರೆ ರೂ.5 ಸಾವಿರ ದಂಡ

ಮುಂಬಯಿ: ಭಾರತದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧ. ಕಟ್ಟುನಿಟ್ಟಾಗಿ ನಿಷೇಧ ಕ್ರಮವನ್ನು ಜಾರಿಗೊಳಿಸಲು ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡಿದೆ. ಉಲ್ಲಂಘಿಸಿದವರಿಗೆ ರೂ.5 ಸಾವಿರ ದಂಡ ವಿಧಿಸಲು ನಿರ್ಧರಿಸಲಾಗಿದೆ. ಸಂಗ್ರಹಿಸಲು, ಮರು ಬಳಕೆ ಮಾಡಲು, ನಿಯಂತ್ರಿಸಲು ಅಸಾಧ್ಯವಾದ ಪ್ಲಾಸ್ಟಿಕ್‌ಗಳ...

Read More

ಪದವಿ ಪ್ರವೇಶ ಪರೀಕ್ಷೆ ಬರೆದ 100ಕ್ಕೂ ಅಧಿಕ ಶರಣಾಗತ ನಕ್ಸಲರು

ರಾಯ್ಪುರ: ಹಿಂಸೆ ತೊರೆದು ಅಹಿಂಸೆಯ ಮಾರ್ಗಕ್ಕೆ ಹಿಂದಿರುಗಿರುವ ಛತ್ತೀಸ್‌ಗಢ ಹಲವಾರು ಮಾಜಿ ನಕ್ಸಲರು ಇಂದು ಉತ್ತಮ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿದ್ದಾರೆ. ಅವರ ಹಾದಿಯನ್ನು ಸುಗಮಗೊಳಿಸಲು ಸರ್ಕಾರ ಕೈಜೋಡಿಸಿದೆ. ಪೊಲೀಸರ ಮುಂದೆ ಶರಣಾಗತರಾಗಿರುವ ಸುಮಾರು 100ಕ್ಕೂ ಅಧಿಕ ನಕ್ಸಲರು ಪದವಿ ಪಡೆದು ಸುಶಿಕ್ಷಿತರಾಗುವ...

Read More

ಮಧ್ಯಪ್ರದೇಶದಲ್ಲಿ ರೂ.4,000 ಕೋಟಿ ನೀರಾವರಿ ಯೋಜನೆಗೆ ಮೋದಿ ಚಾಲನೆ

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ಮೋಹನ್‌ಪುರ ನೀರಾವರಿ ಯೋಜನೆಗೆ ಚಾಲನೆಯನ್ನು ನೀಡಿದರು. ಸಿಎಂ ಶಿವರಾಜ್ ಸಿಂಗ್ ಚೌವ್ಹಾನ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರಿಗೆ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಮೋದಿ, ‘ಸುಮಾರು 4 ಸಾವಿರ...

Read More

ಮೇಘಾಲಯದಲ್ಲಿ ಅತೀದೊಡ್ಡ ಪಕ್ಷದ ಸ್ಥಾನ ಕಳೆದುಕೊಂಡ ಕಾಂಗ್ರೆಸ್

ಶಿಲ್ಲಾಂಗ್: ಮೇಘಾಲಯದಲ್ಲಿ ತಾನು ಏಕೈಕ ಅತೀದೊಡ್ಡ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್‌ಗೆ ಈಗ ಮುಖಭಂಗವಾಗಿದೆ. ಅದರ ಶಾಸಕ ಮಾರ್ಟಿನ್ ಎಂ ಡಾಂಗ್ಗೋ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನಲೆಯಲ್ಲಿ ಅದು ಅತೀದೊಡ್ಡ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದೆ. ಮೇಘಾಲಯದಲ್ಲಿ ಆಡಳಿತರೂಢ ಎನ್‌ಪಿಪಿ ಪಕ್ಷ 20...

Read More

ವಿದೇಶಗಳ ವಿದ್ಯಾರ್ಥಿಗಳಿಗೆ ಉಪಗ್ರಹ ನಿರ್ಮಾಣ ಕಲಿಸಲಿದೆ ಇಸ್ರೋ

ಬೆಂಗಳೂರು: ಭಾರತ ತನ್ನ ಉಪಗ್ರಹ ನಿರ್ಮಾಣ ತಂತ್ರಜ್ಞತೆಯನ್ನು ಇತರ ರಾಷ್ಟ್ರಗಳ ಎಂಜಿನಿಯರಿಂಗ್ ಪದವೀಧರರಿಗಾಗಿ ತೆರೆದಿಟ್ಟಿದೆ. ಈ ವರ್ಷದಿಂದ ಮುಂದಿನ ನಾಲ್ಕು ವರ್ಷದವರೆಗೆ ಇಸ್ರೋ, ವಿವಿಧ ರಾಷ್ಟ್ರಗಳ ಸುಮಾರು 90 ಅರ್ಹ ಎಂಜಿನಿಯರಿಂಗ್ ಪದವೀಧರರಿಗೆ ಮೂರು ಸಣ್ಣ ಉಪಗ್ರಹಗಳನ್ನು ನಿರ್ಮಿಸಲು ಮತ್ತು ಪರೀಕ್ಷಿಸಲು ಕಲಿಸಲಿದೆ....

Read More

Recent News

Back To Top