ಮುಂಬಯಿ: ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಪ್ಲಾಸ್ಟಿಕ್ ನಿಷೇಧ ಜಾರಿಗೊಂಡಿದೆ. ಈ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ), ಕೇವಲ ಎರಡನೇ ದಿನದಲ್ಲಿ ಸುಮಾರು 591.67 ಕೆಜಿಗಳ ನಿಷೇಧಿತ ಪ್ಲಾಸ್ಟಿಕ್ ಮತ್ತು ರೂ.3,35,000 ದಂಡದ ಮೊತ್ತವನ್ನು ಸಂಗ್ರಹಿಸಿದೆ.
ಶನಿವಾರದಿಂದ ಬಿಎಂಸಿ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸಿದೆ, ತಪ್ಪಿತಸ್ಥರಿಗೆ ರೂ.5000 ದಂಡವನ್ನು ವಿಧಿಸಲಾಗುತ್ತಿದೆ. ಪುನರಾವರ್ತಿತ ತಪ್ಪಿತಸ್ಥರಿಗೆ 25 ಸಾವಿರ ರೂಪಾಯಿವರೆಗೆ ದಂಡ ಮತ್ತು 3 ತಿಂಗಳು ಸೆರೆವಾಸ ಇದೆ.
ನಿಷೇಧ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲು ಟೀಮ್ಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಟೀಮ್ ರೈಡ್ಗಳನ್ನು ಮಾಡಿ, ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಿದೆ. ದಂಡ ನೀಡಲು ಒಪ್ಪದವರಿಗಾಗಿ ದೂರು ಮಂಡಳಿಯನ್ನು ಪ್ರತಿ ವಾರ್ಡ್ನಲ್ಲೂ ಸ್ಥಾಪನೆ ಮಾಡಲಾಗಿದ್ದು, ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ.
ಎರಡು ದಿನಗಳಲ್ಲಿ ಒಟ್ಟು 867 ಕಡೆಗಳಲ್ಲಿ ರೈಡ್ ಮಾಡಲಾಗಿದ್ದು, 3,35,000 ರೂಪಾಯಿ ದಂಡ ಸ್ವೀಕರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.