ಮುಂಬಯಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ವೀರ ಯೋಧರ ಕುಟುಂಬಗಳು ಹಣಕಾಸು ಮುಗ್ಗಟ್ಟಿಗೆ ಒಳಗಾಗಬಾರದು ಎಂಬ ಸದುದ್ದೇಶದೊಂದಿಗೆ ಮಹಾರಾಷ್ಟ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು ಘೋಷಿಸಿದೆ. ಹುತಾತ್ಮರ ಪತ್ನಿಗೆ 2 ಎಕರೆ ಭೂಮಿಯನ್ನು ನೀಡಲಿದೆ. ಒಂದು ವೇಳೆ ಆಕೆ ಬದುಕಿಲ್ಲದ ಪಕ್ಷದಲ್ಲಿ ಹುತಾತ್ಮನ ಕಾನೂನುಬದ್ಧ ಉತ್ತರಾಧಿಕಾರಿಗಳು ಈ ಭೂಮಿಯನ್ನು ಪಡೆದುಕೊಳ್ಳಲಿದ್ದಾರೆ.
ಹುತಾತ್ಮರ ವಿಧವೆಯರಿಗೆ 2 ಎಕರೆ ಭೂಮಿ ನೀಡುವ ಯೋಜನೆಯನ್ನು ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವಿಸ್ ಮಾ.20ರಂದು ಘೋಷಣೆ ಮಾಡಿದ್ದರು. ಭಾನುವಾರ ಈ ಘೋಷಣೆಯಲ್ಲಿ ತಿದ್ದುಪಡಿ ತಂದಿರುವ ಅವರು, ಒಂದು ವೇಳೆ ಹುತಾತ್ಮನ ಪತ್ನಿ ಬದುಕಿಲ್ಲವಾದಲ್ಲಿ ಆತನ ಕಾನೂನುಬದ್ಧ ಉತ್ತರಾಧಿಕಾರಿಗಳು ಈ ಭೂಮಿಯನ್ನು ಪಡೆಯಲಿದ್ದಾರೆ ಎಂದಿದ್ದಾರೆ.
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ, ಯುದ್ಧ, ಮಿಶನ್ಗಳ ವೇಳೆ ಮೃತರಾದ ಯೋಧರ ಪತ್ನಿ ಅಥವಾ ಉತ್ತರಾಧಿಕಾರಿಗಳಿಗೆ ಜೀವನಾಧಾರಕ್ಕಾಗಿ ಕೃಷಿ ಭೂಮಿಯನ್ನು ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.