ಮುಂಬಯಿ: ಭಾರತದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧ. ಕಟ್ಟುನಿಟ್ಟಾಗಿ ನಿಷೇಧ ಕ್ರಮವನ್ನು ಜಾರಿಗೊಳಿಸಲು ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡಿದೆ. ಉಲ್ಲಂಘಿಸಿದವರಿಗೆ ರೂ.5 ಸಾವಿರ ದಂಡ ವಿಧಿಸಲು ನಿರ್ಧರಿಸಲಾಗಿದೆ.
ಸಂಗ್ರಹಿಸಲು, ಮರು ಬಳಕೆ ಮಾಡಲು, ನಿಯಂತ್ರಿಸಲು ಅಸಾಧ್ಯವಾದ ಪ್ಲಾಸ್ಟಿಕ್ಗಳ ಬಳಕೆಯನ್ನು ಇಂದಿನಿಂದ ನಿಷೇಧಿಸುತ್ತಿದ್ದೇವೆ, ಎಲ್ಲಾ ವ್ಯಾಪಾರಿಗಳು ಮತ್ತು ಜನರು ಇದಕ್ಕೆ ಸಾಥ್ ನೀಡಿದಾಗ ಮಾತ್ರ ಬ್ಯಾನ್ ಕ್ರಮ ಯಶಸ್ಸುಗೊಳ್ಳಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಮೊದಲ ಬಾರಿಗೆ ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಸಿದವರಿಗೆ ರೂ. 5ಸಾವಿರ ದಂಡ, ಎರಡನೇ ಬಾರಿ ನಿಯಮ ಉಲ್ಲಂಘಿಸಿದವರಿಗೆ ರೂ.10 ಸಾವಿರ ದಂಡ, ಮೂರನೇ ಬಾರಿ ಉಲ್ಲಂಘಿಸಿದರೆ 3 ತಿಂಗಳ ಸೆರೆವಾಸ ಸೇರಿದಂತೆ ರೂ.25 ಸಾವಿರ ದಂಡ ವಿಧಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.