Date : Saturday, 27-10-2018
ಕಣ್ಣೂರು: ಕೇರಳದ ಕಣ್ಣೂರಿನಲ್ಲಿ ನಿರ್ಮಾಣಗೊಂಡಿರುವ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಮೊತ್ತ ಮೊದಲ ಪ್ರಯಾಣಿಕನಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೊರಹೊಮ್ಮಿದ್ದಾರೆ. ಹೊಸದಾಗಿ ನಿರ್ಮಾಣಗೊಂಡಿರುವ ಬಿಜೆಪಿ ಜಿಲ್ಲಾ ಕಛೇರಿಯನ್ನು ಉದ್ಘಾಟನೆಗೊಳಿಸುವ ಸಲುವಾಗಿ ಇಂದು ಅಮಿತ್ ಶಾ ಕಣ್ಣೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ...
Date : Saturday, 27-10-2018
ಲಕ್ನೋ: ‘ಆಯುಷ್ಮಾನ್ ಭಾರತ್’ ದೇಶದ ಬಡ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಅತೀದೊಡ್ಡ ಉಡುಗೊರೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಬಣ್ಣಸಿದ್ದಾರೆ. ‘ಆಯುಷ್ಮಾನ್ ಭಾರತ್ ಆರಂಭವಾದ ಬಳಿಕ ಕೇವಲ ಲಕ್ನೋ ಒಂದರಲ್ಲೇ 45 ಮಂದಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇದು...
Date : Saturday, 27-10-2018
ನವದೆಹಲಿ: ಭಾರತ-ಜಪಾನ್ ವಾರ್ಷಿಕ ಸಮಿತ್ನಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಜಪಾನ್ಗೆ ಪ್ರಯಾಣಿಸಲಿದ್ದಾರೆ. ಅ.28 ಮತ್ತು 29ರಂದು ಸಮಿತ್ ಜರುಗಲಿದೆ. ರಕ್ಷಣೆ ಮತ್ತು ತಂತ್ರಜ್ಞಾನ ಮೋದಿ ಜಪಾನ್ ಭೇಟಿಯ ಪ್ರಮುಖ ಅಂಶಗಳಾಗಿವೆ, ತಂತ್ರಗಾರಿಕೆ ಮತ್ತು ಜಾಗತಿಕ ಪಾಲುದಾರಿಕೆಯ ದೃಷ್ಟಿಯಿಂದಲೂ...
Date : Saturday, 27-10-2018
ನವದೆಹಲಿ: ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಚಹಾ ಮಾರಾಟಕ್ಕೆ ಉತ್ತೇಜನ ಕಲ್ಪಿಸಲು ಭಾರತ ಚಹಾ ಮಂಡಳಿ ನಿರ್ಧರಿಸಿದೆ. ಇದಕ್ಕಾಗಿ ’ಚಾಯ್ ಸಹಾಯ್’ ಎಂಬ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಧಾರಿತ ಬಹುಭಾಷೀಯ ಮೊಬೈಲ್ ಅಪ್ಲಿಕೇಶನ್ನನ್ನು ಅದು ಬಿಡುಗಡೆಗೊಳಿಸುತ್ತಿದೆ. ಈ ಆ್ಯಪ್ ಚಹಾ ವಲಯದ ಎಲ್ಲಾ ಸಂಬಂಧಪಟ್ಟವರಿಗೆ,...
Date : Saturday, 27-10-2018
ಕೊಲಂಬೋ: ಶ್ರೀಲಂಕಾದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಶುಕ್ರವಾರ ನೂತನ ಪ್ರಧಾನಿಯಾಗಿ ಮಹೇಂದ್ರ ರಾಜಪಕ್ಷೆಯವರ ನೇಮಕವಾಗಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿ, ರಾಜಪಕ್ಷೆಗೆ ಪ್ರಧಾನಿ ಪಟ್ಟ ಕಟ್ಟಿದ್ದಾರೆ. ರಾಜಪಕ್ಷೆಯವರ ಪ್ರಮಾಣವಚನ ಸ್ವೀಕಾರವೂ ಅತ್ಯಂತ...
Date : Saturday, 27-10-2018
ನವದೆಹಲಿ: ದೇಶೀಯವಾಗಿ ನಿರ್ಮಿಸಲಾದ ಮೊತ್ತ ಮೊದಲ ಸುಖೋಯ್ Su-30MKI ಯುದ್ಧ ವಿಮಾನವನ್ನು ಶುಕ್ರವಾರ ವಾಯುಸೇನೆಗೆ ಹಸ್ತಾಂತರ ಮಾಡಲಾಯಿತು. ಮಹಾರಾಷ್ಟ್ರ ನಾಸಿಕ್ ಜಿಲ್ಲೆಯ ಓಜರ್ನಲ್ಲಿನ ಭಾರತೀಯ ವಾಯುಸೇನೆಯ 11 ಬೇಸ್ ರಿಪೇರ್ ಡಿಪೋಟ್(ಬಿಆರ್ಡಿ)ನಲ್ಲಿ, ಮೊತ್ತ ಮೊದಲ ದೇಶೀ ನಿರ್ಮಿತ ಸುಖೋಯ್ ಯುದ್ಧ ವಿಮಾನವನ್ನು...
Date : Saturday, 27-10-2018
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಗುರುವಾರ ಚಂದ್ರಯಾನ 2 ಯೋಜನೆಯ ಲ್ಯಾಂಡರ್ ವಿಕ್ರಮ್ನ್ನು ಮಹತ್ವದ ಪರೀಕ್ಷೆಗೊಳಪಡಿಸಿದ್ದು, ಅದರ ಮೃದುತ್ವ ಮತ್ತು ನಿಖರ ಇಳಿಯುವಿಕೆಯನ್ನು ಸ್ಪಷ್ಟಪಡಿಸಿಕೊಂಡಿದೆ. ಚಂದ್ರಯಾನ 2ನ ಲ್ಯಾಂಡಿಂಗ್ಗೆ ಸಂಬಂಧಪಟ್ಟ ಮಹತ್ವದ ಪರೀಕ್ಷೆ ಇದಾಗಿದ್ದು, ಲ್ಯಾಂಡರ್ ವಿಕ್ರಮ್ನ ನಾವಿಗೇಷನಲ್ ಸಿಸ್ಟಮ್ನ ಕಾರ್ಯವನ್ನು...
Date : Saturday, 27-10-2018
ನವದೆಹಲಿ: ಭಾರತ ಮತ್ತು ಮಯನ್ಮಾರ್ ದೇಶಗಳು ತಮ್ಮ ಗಡಿಯೊಳಗೆ ಕಾರ್ಯಾಚರಿಸುತ್ತಿರುವ ಬಂಡುಕೋರ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿವೆ. ಉಭಯ ದೇಶಗಳ ನಡುವಣ ಭದ್ರತಾ ಸಹಕಾರದ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಭಯ ದೇಶಗಳ ನಡುವಣ ಎರಡು ದಿನಗಳ ರಾಷ್ಟ್ರೀಯ ಮಟ್ಟದ...
Date : Saturday, 27-10-2018
ಲಕ್ನೋ: ಗೂಗಲ್ ಟ್ರೆಂಡ್ ಪ್ರಕಾರ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದೇಶದ ಇತರ ಎಲ್ಲಾ ಸಿಎಂಗಳನ್ನು ಹಿಂದಿಕ್ಕಿ ಅತೀಹೆಚ್ಚು ಗೂಗಲ್ ಸರ್ಚ್ಗೊಳಗಾದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಶಾನ್ಯ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಸರ್ಚ್ಗಳು ಸೇರಿದಂತೆ ಶೇ.70ರಷ್ಟು ಸರ್ಚ್ಗಳು ಯೋಗಿ...
Date : Saturday, 27-10-2018
ನವದೆಹಲಿ: ಗಗನಮುಖಿಯಾಗಿದ್ದ ಪೆಟ್ರೋಲ್ ಮತ್ತು ಡಿಸೇಲ್ ದರಗಳು ಇದೀಗ ಇಳಿಮುಖವಾಗುತ್ತಿದ್ದು, ಗ್ರಾಹಕರಿಗೆ ತುಸು ನಿರಾಳತೆಯನ್ನು ತಂದುಕೊಟ್ಟಿದೆ. ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 40 ಪೈಸೆ ಕಡಿಮೆಯಾಗಿದ್ದು, ಪ್ರಸ್ತುತ ದರ ರೂ.80.45 ಪೈಸೆ ಇದೆ. ಪ್ರತಿ ಲೀಟರ್ ಡಿಸೇಲ್...