ನವದಹೆಲಿ: ರೈಲುಗಳ ಆಗಮನದ ಬಗ್ಗೆ ನೇರ ಅಪ್ಡೇಟ್ಗಳನ್ನು ಒದಗಿಸುವ ಬೆಂಗಳೂರು ಮೂಲದ ಸಂಸ್ಥೆಯ ಬಹುಭಾಷಾ ಅಪ್ಲಿಕೇಶನ್ ‘Where Is My Train’ ಅನ್ನು ಗೂಗಲ್ ಸ್ವಾಧೀನಪಡಿಸಿಕೊಂಡಿದೆ. ಆದರೆ ಸ್ವಾಧೀನದ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.
ಆಗಸ್ಟ್ 30ರ ಅಂತ್ಯದಲ್ಲಿ, ಈ ಆ್ಯಪ್ನ್ನು 30-40 ಮಿಲಿಯನ್ ಡಾಲರ್ ನೀಡಿ ಖರೀದಿ ಮಾಡಲು ಗೂಗಲ್ ಮಾತುಕತೆಯಲ್ಲಿ ತೊಡಗಿದೆ ಎಂದು ವರದಿಯಾಗಿತ್ತು. ಚೀನಾದ ಸ್ಮಾರ್ಟ್ಫೋನ್ ತಯಾರಕ ಕ್ಸಿಯೊಮಿ ಕೂಡಾ ಖರೀದಿ ರೇಸ್ನಲ್ಲಿದ್ದು, ಬೆಂಗಳೂರು ಮೂಲದ ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಲು ಉತ್ಸುಹುಕವಾಗಿತ್ತು.
ಭಾರತೀಯ ನೆಲೆಯಲ್ಲಿ ಗೂಗಲ್ನ ಎರಡನೇ ಸ್ವಾಧೀನ ಇದಾಗಿದ್ದು, ಕಳೆದ ವರ್ಷ, ಅದು ಬೆಂಗಳೂರು ಮೂಲದ ಮತ್ತೊಂದು ಆರ್ಟಿಫೀಶೀಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ಅಪ್ ಹ್ಯಾಲ್ಲಿ ಲ್ಯಾಬ್ಸ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು.
’ವೇರ್ ಇಸ್ ಮೈ ಟ್ರೈನ್’ ಆ್ಯಪ್ ಗೂಗಲ್ನ ‘Next billion users’ ಕಾರ್ಯಕ್ರಮವನ್ನು ನಿಯಂತ್ರಿಸಲಿದೆ, ಇದು ಮುಖ್ಯವಾಗಿ ಭಾರತೀಯ ರೈಲ್ವೆ ಮತ್ತು ಐಆರ್ಸಿಟಿಸಿ ವೇಳಾಪಟ್ಟಿಗಳ ಆಫ್ಲೈನ್ ಏಕೀಕರಣವನ್ನು ಲಭ್ಯಗೊಳಿಸುತ್ತದೆ ಮತ್ತು ರೈಲುಗಳನ್ನು ಪತ್ತೆಹಚ್ಚಲು ಸೆಲ್-ಟವರ್ ಮಾಹಿತಿಯನ್ನು ಬಳಸುತ್ತದೆ.
ಇಂಗ್ಲಿಷ್, ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರುವ ವೇರ್ ಈಸ್ ಮೈ ಟ್ರೈನ್ ಅಪ್ಲಿಕೇಶನ್, ಬಳಕೆದಾರರಿಗೆ ಪ್ಲಾಟ್ಫಾರ್ಮ್ಗಳ ಕೋಚ್ ಸ್ಥಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಆಸನ / ಭರ್ತಿ ಚೌಕಟ್ಟಿನಲ್ಲಿ ಬ್ರೌಸ್ ಮಾಡಲು ಅವಕಾಶ ಕಲ್ಪಿಸುತ್ತದೆ.
ವೇರ್ ಇಸ್ ಮೈ ಟ್ರೈನ್ ಆಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ 2018ರ ಭಾರತದ ಅತ್ಯುತ್ತಮ ಆ್ಯಪ್ ಆಗಿ ನಾಮನಿರ್ದೇಶನಗೊಂಡಿದೆ.
source: entrackr.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.