News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

ಪ್ರಧಾನ ಕಾರ್ಯದರ್ಶಿ ಕಛೇರಿಗೆ ಬೀಗ ಹಾಕಿಸಿದ ಕೇಜ್ರಿವಾಲ್

ನವದೆಹಲಿ: ಹಂಗಾಮಿ ಮುಖ್ಯ ಕಾರ್ಯದರ್ಶಿಯಾಗಿ ಶಕುಂತಲಾ ಗಾಂಬ್ಲಿನ್ ಅವರನ್ನು ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಣ ತಿಕ್ಕಾಟ ತಾರಕಕ್ಕೇರಿದೆ. ಜಂಗ್ ಅವರ ಆದೇಶದಂತೆ ಗಾಂಬ್ಲಿನ್ ಅವರನ್ನು ಹಂಗಾಮಿ ಮುಖ್ಯ ಕಾರ್ಯದರ್ಶಿಯಾಗಿ...

Read More

ಅನುಷ್ಕಾ ಜೊತೆ ಮಾತನಾಡಿದ ವಿರಾಟ್ ವಿರುದ್ಧ ಕ್ರಮ

ಬೆಂಗಳೂರು: ಐಪಿಎಲ್ ಪಂದ್ಯದ ವೇಳೆ ನಿಯಮಾವಳಿಯನ್ನು ಉಲ್ಲಂಘಿಸಿ ಗೆಳತಿ ಅನುಷ್ಕಾ ಶರ್ಮಾ ಅವರನ್ನು ಭೇಟಿ ಮಾಡಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ಪಂದ್ಯ ಸಂಪೂರ್ಣವಾಗಿ ಮುಗಿಯುವವರೆಗೂ ಆಟಗಾರರು ತಮ್ಮ ಮೀಸಲು ಸ್ಥಳದಿಂದ...

Read More

ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕೇಂದ್ರ ಬದ್ಧ: ಅಮಿತ್ ಷಾ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ವ್ಯವಸ್ಥೆಯನ್ನು ಬದಲಾಯಿಸಲು ಬದ್ಧವಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಹಗರಣವೂ ನಡೆದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು...

Read More

ಅಮೇಥಿಯಲ್ಲಿ ರಾಹುಲ್: ಮೋದಿ ವಿರುದ್ಧ ಟೀಕೆ

ಅಮೇಥಿ: ತನ್ನ ಲೋಕಸಭಾ ಕ್ಷೇತ್ರ ಅಮೇಥಿಗೆ ಸೋಮವಾರ ಭೇಟಿ ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾರೀ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಅಮೇಥಿಯ ಮೆಗಾ ಫುಡ್‌ಪಾರ್ಕ್‌ನ್ನು ರದ್ದುಪಡಿಸಿದ ಕೇಂದ್ರದ ನಿರ್ಧಾರದ ವಿರುದ್ಧ ತನ್ನ ಪ್ರತಿಭಟನೆಯನ್ನು ಪ್ರದರ್ಶಿಸಲು ರಾಹುಲ್...

Read More

ಅಕ್ಬರ್ ‘ದಿ ಗ್ರೇಟ್’ ಆಗಬಹುದಾದರೆ ಮಹಾರಾಣಾ ಪ್ರತಾಪ್ ಯಾಕಲ್ಲ?

ಜೈಪುರ: ರಜಪೂತ ರಾಜವಂಶದ ರಾಜ ಮಹಾರಾಣಾ ಪ್ರತಾಪ್ ಸಿಂಗ್ ಸಾಹಸ, ಶೌರ್ಯವನ್ನು ಸ್ಮರಿಸಿರುವ ಗೃಹಸಚಿವ ರಾಜನಾಥ್ ಸಿಂಗ್, ಆತನಿಗೆ ತಕ್ಕುದಾದ ಘನತೆಯನ್ನು ನಾವು ಇತಿಹಾಸದಲ್ಲಿ ನೀಡಬೇಕಾಗಿದೆ ಎಂದಿದ್ದಾರೆ. ಪ್ರತಾಪಗಢದಲ್ಲಿ ಮಾತನಾಡಿದ ಅವರು, ಅಕ್ಬರ್‌ನನ್ನು ಇತಿಹಾಸಕಾರರು ‘ದಿ ಗ್ರೇಟ್’ ಎಂದು ಕರೆಯುವುದಾದರೆ, ಮಹಾರಾಣಾ...

Read More

ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ

ಬೆಂಗಳೂರು: 2015ರ ಸಾಲಿನ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಶೇ.60.54ರಷ್ಟು ಫಲಿತಾಂಶ ದಾಖಲಾಗಿದೆ. ದಕ್ಷಿಣ ಕನ್ನಡ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದರೆ, ಉಡುಪಿ ಎರಡನೇ ಸ್ಥಾನ ಪಡೆದಿದೆ, ಗದಗ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಪದವಿಪೂರ್ವ ಮಂಡಳಿ ನಿರ್ದೇಶಕಿ ಸುಷ್ಮಾ ಗೋಡಬೋಲೆ...

Read More

ಕೇಂದ್ರೀಯ ಪಡೆಗಳಿಗೆ 11 ಸಾವಿರ ಮಹಿಳಾ ಸಿಬ್ಬಂದಿಗಳು

ನವದೆಹಲಿ: ಗಡಿ ಕಾಯುವಿಕೆ ಮತ್ತು ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವಂತಹ ಮಹತ್ತರ ಜವಾಬ್ದಾರಿಯನ್ನು ಮಹಿಳೆಯರಿಗೂ ನೀಡುವ ಸಲುವಾಗಿ ಕೇಂದ್ರೀಯ ಭದ್ರತಾ ಪಡೆಗಳಿಗೆ ಶೀಘ್ರದಲ್ಲೇ ಸುಮಾರು 11 ಸಾವಿರ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಈ ವರ್ಷ ಒಟ್ಟು 62 ಸಾವಿರ ಯುವ ಪುರುಷ...

Read More

ಪಪ್ಪು ಯಾದವ್‌ರಿಂದ ಹೊಸ ಪಕ್ಷ

ಪಾಟ್ನಾ: ಆರ್‌ಜೆಡಿ ಪಕ್ಷದ ಮಾಜಿ ನಾಯಕ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ‘ಜನ್ ಕ್ರಾಂತಿ ಅಧಿಕಾರ್ ಮೋರ್ಚಾ’ ಎಂಬ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಬಿಹಾರಕ್ಕೆ 3ನೇ ಆಯ್ಕೆಯ ಅಗತ್ಯವಿದೆ, ಅದಕ್ಕಾಗಿ ಹೊಸ ಪಕ್ಷ...

Read More

42 ವರ್ಷ ಕೋಮಾದಲ್ಲಿದ್ದ ಅತ್ಯಾಚಾರ ಸಂತ್ರಸ್ಥೆ ಅರುಣಾ ನಿಧನ

ಮುಂಬಯಿ: ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ ಕಳೆದ 42 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅರುಣಾ ಶಾನ್‌ಭೋಗ್ ಸೋಮವಾರ ಬೆಳಿಗ್ಗೆ ಮೃತರಾಗಿದ್ದಾರೆ. ಮುಂಬಯಿನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಇವರು 1973ರ ನವೆಂಬರ್ 27ರಂದು ಅದೇ ಆಸ್ಪತ್ರೆಯ ವಾರ್ಡ್ ಬಾಯ್‌ನಿಂದ ಅತ್ಯಂತ ಭೀಕರವಾಗಿ...

Read More

ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಬಿಹಾರ ಚುನಾವಣೆ: ಝೈದಿ

ಪಾಟ್ನಾ: ರಾಜಕೀಯವಾಗಿ ಅತಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ತಿಳಿಸಿದ್ದಾರೆ. ಬಿಹಾರದಲ್ಲಿ ಚುನಾವಣೆಯ ವೇಳೆ ತೋಳ್ಬಲದ ಪ್ರದರ್ಶನಗಳು ಹೆಚ್ಚಾಗಿ ನಡೆಯುವ ಹಿನ್ನಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ...

Read More

Recent News

Back To Top