ಮುಂಬಯಿ: ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ ಕಳೆದ 42 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅರುಣಾ ಶಾನ್ಭೋಗ್ ಸೋಮವಾರ ಬೆಳಿಗ್ಗೆ ಮೃತರಾಗಿದ್ದಾರೆ.
ಮುಂಬಯಿನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಇವರು 1973ರ ನವೆಂಬರ್ 27ರಂದು ಅದೇ ಆಸ್ಪತ್ರೆಯ ವಾರ್ಡ್ ಬಾಯ್ನಿಂದ ಅತ್ಯಂತ ಭೀಕರವಾಗಿ ಅತ್ಯಾಚಾರಕ್ಕೊಳಗಾಗಿದ್ದರು, ಆತ ಇವರ ಮೇಲೆ ಮಾರಣಾಂತಿಕ ಹಲ್ಲೆಯನ್ನೂ ನಡೆಸಿದ್ದ. ಅಂದು ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಅರುಣಾ ಮತ್ತೆಂದೂ ಎದ್ದೇಳಲೇ ಇಲ್ಲ.
ಅವರ ಕಣ್ಣು ತೆರೆದಿತ್ತಾದರೂ ಅವರ ಬ್ರೈನ್ ಯಾವುದೇ ರೀತಿಯಲ್ಲೂ ಕಾರ್ಯಚರಿಸುತ್ತಿರಲಿಲ್ಲ. ಜೀವಂತವಾಗಿದ್ದರೂ ಶವದ ರೀತಿಯಲ್ಲಿ ಅವರಿದ್ದರು.
ಅವರಿಗೆ ದಯಾ ಮರಣ ನೀಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು, ಆದರೆ ಸುಪ್ರೀಂ ಅದಕ್ಕೆ ನಿರಾಕರಿಸಿತ್ತು.
ಕಳೆದ ಕೆಲದಿನಗಳಿಂದ ಅರುಣಾ ಅವರ ಆರೋಗ್ಯ ತೀರಾ ಬಿಗಡಾಯಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಮೃತರಾಗಿದ್ದಾರೆ.
ಅತ್ಯಾಚಾರಿ ವಾರ್ಡ್ಬಾಯ್ 7 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿ ಹೊರಬಂದಿದ್ದಾನೆ. ಆದರೆ ಆತನ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಅರುಣಾ ಏನು ತಪ್ಪು ಮಾಡದಿದ್ದರೂ ಕಳೆದ 42 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದರು. ಅತ್ಯಾಚಾರದ ಹೇಯ ಕೃತ್ಯಕ್ಕೆ ಬಲಿಯಾದ ಒಬ್ಬ ದುರಂತ ನಾಯಕಿಯಾಗಿ ಅರುಣಾ ನಮಗೆ ಗೋಚರವಾಗುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.