ನವದೆಹಲಿ: ಗಡಿ ಕಾಯುವಿಕೆ ಮತ್ತು ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವಂತಹ ಮಹತ್ತರ ಜವಾಬ್ದಾರಿಯನ್ನು ಮಹಿಳೆಯರಿಗೂ ನೀಡುವ ಸಲುವಾಗಿ ಕೇಂದ್ರೀಯ ಭದ್ರತಾ ಪಡೆಗಳಿಗೆ ಶೀಘ್ರದಲ್ಲೇ ಸುಮಾರು 11 ಸಾವಿರ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ಈ ವರ್ಷ ಒಟ್ಟು 62 ಸಾವಿರ ಯುವ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳನ್ನು ವಿವಿಧ ಪಡೆಗಳಿಗೆ ನಿಯೋಜನೆಗೊಳಿಸುವ ತನ್ನ ಯೋಜನೆಯ ಬಗ್ಗೆ ಕೇಂದ್ರ ಈಗಾಗಲೇ ಘೋಷಣೆ ಮಾಡಿದೆ.
ಈ ಹಿನ್ನಲೆಯಲ್ಲಿ ಪ್ಯಾರ ಮಿಲಿಟರಿ ಪಡೆಗಳಾದ ಸಿಆರ್ಪಿಎಫ್, ಬಿಎಸ್ಎಫ್, ಸಿಐಎಸ್ಎಫ್ ಮತ್ತು ಐಟಿಬಿಪಿ ಪಡೆಗಳಿಗೆ ಸುಮಾರು 8,533 ಮಹಿಳಾ ಸಿಬ್ಬಂದಿಯನ್ನು ನಿಯೋಜಿಸುವ ಮತ್ತು ಕೇಂದ್ರ ಪಡೆಗಳಿಗೆ 11 ಸಾವಿರ ಮಹಿಳೆಯರನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ನೇಪಾಳ ಮತ್ತು ಭೂತಾನ್ನಂತಹ ಭಾರತದ ತೆರೆದ ಗಡಿಯನ್ನು ಕಾಯುವ ಸಶಸ್ತ್ರ ಸೀಮಾ ಬಲ್ಗೆ 2017ರೊಳಗೆ 2,772 ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸುವ ಪ್ರಕ್ರಿಯೆಗೆ ಕೇಂದ್ರ ಗೃಹಸಚಿವಾಲಯ ಚಾಲನೆ ನೀಡಿದೆ.
ಕೇಂದ್ರೀಯ ಪಡೆಗಳಲ್ಲಿ ಮಹಿಳಾ ಪ್ರಾಬಲ್ಯವನ್ನು ಶೇ.5ರಷ್ಟಕ್ಕೆ ಏರಿಸುವುದು ಕೇಂದ್ರದ ಗುರಿಯಾಗಿದೆ, ಪ್ರಸ್ತುತ ಶೇ.2.15ರಷ್ಟು ಮಾತ್ರ ಮಹಿಳಾ ಪ್ರಾಬಲ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.