News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೊಜಾಂಬಿಕ್‌ನಿಂದ ತೊಗರಿ ಬೇಳೆ ಖರೀದಿ

ನವದೆಹಲಿ: ದ್ವಿದಳ ಧಾನ್ಯಗಳ ಬೆಲೆ ತೀವ್ರವಾಗಿ ಏರುತ್ತಿದ್ದು, ಇದನ್ನು ಪರಿಶೀಲಿಸಲು ಭಾರತ ಮುಂದಿನ 5 ವರ್ಷಗಳ ಕಾಲ ಮೊಜಾಂಬಿಕ್‌ನಿಂದ ತೊಗರಿ ಬೇಳೆಯನ್ನು ಖರೀದಿಸಲು ಮುಂದಾಗಿದೆ. ಕಳೆದ ಎರಡು ವರ್ಷಗಳಿಂದ ಬರದ ಹಿನ್ನೆಲೆಯಲ್ಲಿ ಸ್ಥಳೀಯ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ದ್ವಿದಳ ಧಾನ್ಯಗಳ...

Read More

ವಿಕಾಸ್ ಕಾಲೇಜಿನ ವಿದ್ಯಾರ್ಥಿಗಳ ಯೋಗ ಸಾಧನೆ

ಮಂಗಳೂರು: ತಾರೀಖು 29-06-2016 ರಂದು ವಿಕಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾದ ಶಿವನಗೌಡ ಬಿ. ಮತ್ತು ಕುಸುಮ ಇವರನ್ನು ಸನ್ಮಾನಿಸಲಾಯಿತು. ಈ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಜೂನ್ 27 ರಂದು ನಡೆದ ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಪಡೆದಿದ್ದರು. ಅಂತರಾಷ್ಟ್ರೀಯ...

Read More

ಬ್ಯಾಂಕ್, ಮಾಲ್, ಶಾಪ್‌ಗಳನ್ನು 24 ಗಂಟೆಯೂ ತೆರೆದಿಡಲು ಸಮ್ಮತಿ

ನವದೆಹಲಿ: ಇನ್ನು ಮುಂದೆ ಬ್ಯಾಂಕುಗಳು, ಶಾಪ್‌ಗಳು ಮತ್ತು ಮಾಲ್‌ಗಳನ್ನು ದಿನದ 24 ಗಂಟೆಯೂ ತೆರೆದಿಡಬಹುದಾಗಿದೆ. ಇದರಿಂದ ಗ್ರಾಹಕರು ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ ತಮಗೆ ಅನುಕೂಲಕರವಾದ ಸಂದರ್ಭದಲ್ಲೇ ಶಾಪಿಂಗ್, ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವ ಅವಕಾಶ ಪಡೆಯಲಿದ್ದಾರೆ. ಕೇಂದ್ರ ಸಂಪುಟ ಬುಧವಾರ ಮಾಡೆಲ್ ಶಾಪ್...

Read More

ಅಮೆರಿಕಾದಲ್ಲಿ ನಾಲ್ವರು ಭಾರತೀಯರಿಗೆ ‘ಶ್ರೇಷ್ಠ ವಲಸಿಗರು’ ಪ್ರಶಸ್ತಿ

ವಾಷಿಂಗ್ಟನ್: ಭಾರತೀಯ ಮೂಲದ ಗೂಗಲ್ ಸಿಇಓ ಸುಂದರ್ ಪಿಚೈ ಸೇರಿದಂತೆ ಒಟ್ಟು ನಾಲ್ವರು ಭಾರತೀಯರು ಈ ವರ್ಷದ ಪ್ರತಿಷ್ಟಿತ “Great Immigrants: The Pride of America” (ಶ್ರೇಷ್ಠ ವಲಸಿಗರು: ಅಮೆರಿಕಾದ ಹೆಮ್ಮೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಿಬಿಎಸ್ ನ್ಯೂಸ್ ಅವರ್‌ನ ಆಂಕರ್...

Read More

ಸ್ವಂತ ಸ್ಟೇಡಿಯಂ ನಿರ್ಮಾಣಕ್ಕೆ ಬಿಸಿಸಿಐ ನಿರ್ಧಾರ

ನವದೆಹಲಿ: ಭೂಮಿಯನ್ನು ಖರೀದಿಸಿ ತನ್ನದೇ ಆದ ಸ್ವಂತ ಸ್ಟೇಡಿಯಂವೊಂದನ್ನು ನಿರ್ಮಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಪಂದ್ಯಗಳನ್ನು ಸ್ಥಳಾಂತರ ಮಾಡಲು ಬರುವ ಒತ್ತಡಗಳಿಂದ ತಪ್ಪಿಸಿಕೊಳ್ಳಲು ಈ ನಿರ್ಧಾರ ಮಾಡಿದೆ ಎನ್ನಲಾಗಿದೆ. ದೆಹಲಿಯಲ್ಲಿ ಇನ್ನು 5 ವರ್ಷದಲ್ಲಿ ವಿಶ್ವದರ್ಜೆಯ ಬಿಸಿಸಿಐ ಒಡೆತನದ ಸ್ಟೇಡಿಯಂ ತಲೆ...

Read More

ಸಿಎಂ ಸಿದ್ದರಾಮಯ್ಯನವರ ಜೀವನ ಚರಿತ್ರೆಯನ್ನು ಓದಬೇಕಂತೆ !

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕುರಿತಾದ ‘ಇಟ್ಟ ಗುರಿ ದಿಟ್ಟ ಹೆಜ್ಜೆ’ ಎಂಬ ಪುಸ್ತಕವನ್ನು ಸರ್ಕಾರಿ ಪ್ರಾಥಮಿಕ, ಫ್ರೌಢಶಾಲೆ, ಅನುದಾನಿತ ಶಾಲೆಗಳು ಖರೀದಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪುಸ್ತಕವನ್ನು ಎಲ್ಲಾ ಶಾಲೆಗಳ...

Read More

ವಾಟ್ಸ್‌ಆ್ಯಪ್ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ವಾಟ್ಸ್‌ಆ್ಯಪ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯುಂಟು ಮಾಡುತ್ತಿದ್ದು, ಅದನ್ನು ನಿಷೇಧಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹರ್ಯಾಣ ಮೂಲದ ಮಾಹಿತಿ ಹಕ್ಕುಗಳ ಕಾರ್ಯಕರ್ತ ಸುಧೀರ್ ಯಾದವ್ ಅರ್ಜಿ ಸಲ್ಲಿಸಿದ್ದು, ವಾಟ್ಸ್‌ಆ್ಯಪ್ ಗೂಢಲಿಪೀಕರಣ ಭದ್ರತೆಯನ್ನು ಒದಗಿಸುತ್ತಿದ್ದು, ಭಯೋತ್ಪಾದಕರು ವಾಟ್ಸ್‌ಆಪ್ ಸಂವಹನ...

Read More

ಕೇಂದ್ರ ಉದ್ಯೋಗಿಗಳ ವೇತನ ಹೆಚ್ಚಳಕ್ಕೆ ಕೇಂದ್ರ ಅಸ್ತು

ನವದೆಹಲಿ: 7ನೇ ವೇತನಾ ಆಯೋಗದ ಶಿಫಾರಸ್ಸುಗಳ ಬಗ್ಗೆ ಕಾರ್ಯದರ್ಶಿಗಳ ಮಂಡಳಿ ರಚಿಸಿದ ಅಂತಿಮ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರಿ ಉದ್ಯೋಗಿಗಳ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ. ವೇತನದಲ್ಲಿ ಹೆಚ್ಚಳ ಮತ್ತು ಸರ್ಕಾರಿ ಉದ್ಯೋಗಿಗಳ ಪಿಂಚಣಿ ಹೆಚ್ಚಳಕ್ಕೆ ಕೇಂದ್ರ...

Read More

ಕೇರಳ ಸಿಎಂರನ್ನು ಮೋದಿಗೆ ಹೋಲಿಸಿದ ಕಾಂಗ್ರೆಸ್

ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಅಧಿಕಾರ ವಹಿಸಿಕೊಂಡು ಒಂದು ತಿಂಗಳುಗಳು ಕಳೆದರೂ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಮಾಡುತ್ತಿರುವ ಟೀಕೆಗಳು ಅಂತ್ಯಗೊಂಡಿಲ್ಲ. ಇದೀಗ ಅವರನ್ನು ಕಾಂಗ್ರೆಸ್ ತನ್ನ ನಂಬರ್ ಒನ್ ರಾಜಕೀಯ ಶತ್ರು ನರೇಂದ್ರ ಮೋದಿಯವರಿಗೆ ಹೋಲಿಕೆ ಮಾಡಿದೆ....

Read More

ಟ್ವಿಟರ್‌ನಲ್ಲಿ ದಾಖಲೆ ಸೃಷ್ಟಿಸಿದ ಮೋದಿಯ ಟಿವಿ ಸಂದರ್ಶನ

ನವದೆಹಲಿ: ಟೈಮ್ಸ್ ನೌ ಚಾನೆಲ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ 85 ನಿಮಿಷಗಳ ನೇರ ಸಂದರ್ಶನ ಟ್ವಿಟರ್‌ನಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಸಂದರ್ಶನದ ವೇಳೆ 250,೦00 ಟ್ವಿಟ್‌ಗಳು ಈ ಬಗ್ಗೆ ಹರಿದಾಡಿದ್ದು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಇದರಲ್ಲಿ 170,000 ಟ್ವಿಟ್...

Read More

Recent News

Back To Top