ಲಂಡನ್: ಸ್ವೀಡನ್ ರಾಷ್ಟ್ರ ತ್ಯಾಜ್ಯದ ಅಭಾವ ಎದುರಿಸುತ್ತಿದ್ದು, ಈ ಸ್ಕ್ಯಾಂಡಿನೇವಿಯನ್ ರಾಷ್ಟ್ರ ತನ್ನ ತ್ಯಾಜ್ಯ ಮರುಬಳಕೆ ಸ್ಥಾವರಗಳನ್ನು ಮುನ್ನಡೆಸಲು ಇತರ ರಾಷ್ಟ್ರಗಳಿಂದ ತ್ಯಾಜ್ಯಗಳ ಆಮದು ಮಾಡುತ್ತಿದೆ.
ನವೀಕರಿಸಬಹುದಾದ ಮರುಬಳಕೆ ತ್ಯಾಜ್ಯದ ಸಹಾಯದಿಂದ ದೇಶದ ಅರ್ಧದಷ್ಟು ವಿದ್ಯುತ್ ಉತ್ಪಾದಿಸುತ್ತಿರುವ ಸ್ವೀಡನ್, ೧೯೯೧ರಲ್ಲಿ ಪಳೆಯುಳಿಕೆ ಇಂಧನಗಳ ಮೇಲೆ ಭಾರೀ ತರಿಗೆ ಹೇರಿತ್ತು.
ಸ್ವೀಡನ್ನ ಮರುಬಳಕೆ ವ್ಯವಸ್ಥೆಯು ಸಂಪೂರ್ಣ ಅತ್ಯಾಧುನಿಕವಾಗಿದ್ದು, ಕಳೆದ ವರ್ಷ ಕೇವಲ ಶೇ.೧ರಷ್ಟು ಗೃಹಬಳಕೆ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.
ಖಾಸಗಿ ಕಂಪೆನಿಗಳು ತ್ಯಾಜ್ಯ ಆಮದು ಮತ್ತು ಉರಿಸುವಿಕೆ ವ್ಯವಸ್ಥೆ ನಡೆಸುತ್ತಿದ್ದರೂ ಸಹ, ಚಳಿಗಾಲದಲ್ಲಿ ಮನೆಗಳನ್ನು ಬಿಸಿಯಾಗಿಡಲು ಈ ತ್ಯಾಜ್ಯಗಳು ರಾಷ್ಟ್ರೀಯ ತಾಪಮಾನ ನೆಟ್ವರ್ಕ್ಗೆ ಹೋಗುವಂತೆ ಸ್ವೀಡನ್ ರಾಷ್ಟ್ರೀಯ ಮರುಬಳಕೆ ನೀತಿಯನ್ನು ಅಳವಡಿಸಿದೆ.
ತ್ಯಾಜ್ಯಗಳ ಮರುಳಕೆ ಮತ್ತು ನವೀಕರಣಕ್ಕಾಗಿ ಜನರು ತ್ಯಾಜ್ಯಗಳನ್ನು ಎಸೆಯದಂತೆ ಅವರಲ್ಲಿ ಜಾಗೃತಿ ಮೂಡಿಸಲಾಗಿದೆ. ಆದ್ದರಿಂದಲೇ ನಾವು ಈ ಜಾಲವನ್ನು ಹೊಂದಿದ್ದೇವೆ. ಮನೆಗಳನು ಬಿಸಿಯಾಗಿಡಲು ಈ ತ್ಯಾಜ್ಯಗಳನ್ನು ಸ್ಥಾವರಗಳಿಂದ ಮರುಬಳಕೆ ಮಾಡಲಾಗುತ್ತದೆ. ಯೂರೋಪ್ನ ಇತರ ರಾಷ್ಟ್ರಗಳು ಈ ವ್ಯವಸ್ಥೆಯನ್ನು ಅಳವಡಿಸದೇ ಇದ್ದು, ಇವು ಚಿಮಣಿಗಳಿದಂದ ಹೊರಹೋಗುತ್ತವೆ. ಇಲ್ಲಿ ನಾವು ಪಳಯುಳಿಕೆ ಇಂಧನದ ಬದಲಾಗಿ ಬಳಸುತ್ತೇವೆ ಎಂದು sಸ್ವೀಡಿಷ್ ತ್ಯಾಜ್ಯ ಮರುಬಳಕೆ ಅಸೋಸಿಯೇಶನ್ ಆಗಿರುವ ಅವ್ಫಾಲ್ ಸ್ವೆರಿಜ್ನ ಸಂವಹನ ನಿರ್ದೇಶಕಿ ಅಕ್ಯಾರಿನ್-ಗ್ರಿಪ್ವಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.