ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ವಿರುದ್ಧ ವಿವಿಧ ರಾಜ್ಯಗಳು ಮೀಸಲಾತಿ ನೀಡುವಂತೆ ಒತ್ತಾಯಿಸಿದ ಹೊರತಾಗಿಯೂ ಸಂಸತ್ನಲ್ಲಿ ಧ್ವನಿ ಮತದ ಮೂಲಕ ಆಗಸ್ಟ್ ತಿಂಗಳಿನಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ತಿದ್ದುಪಡಿ (ತಿದ್ದುಪಡಿ) ಮಸೂದೆ, 2016, ಮತ್ಯ ದಂತವೈದ್ಯ (ತಿದ್ದುಪಡಿ) ಮಸೂದೆ 2016 ಮುಂದಿನ 2017ನೇ ಸಾಲಿನಿಂದ ವೈದ್ಯಕೀಯ ಮತ್ತು ದಂತವೈದ್ಯಕೀಯ ಕ್ಷೇತ್ರಗಳಿಗೆ ದೇಶದಾದ್ಯಂತ ನೀಟ್ ಪರೀಕ್ಷೆ ಆರಂಭಿಸಲಾಗುವುದು.
ನೀಟ್ ಪರೀಕ್ಷೆ ಭ್ರಷ್ಟಾಚಾರ ನಿಗ್ರಹದ ಮೂಲಕ ಪಾರದರ್ಶಕತೆ ತರಲು ಮತ್ತು ಬಹುಮಟ್ಟದ ಪರೀಕ್ಷೆ ನಡೆಸುವುದನ್ನು ವಿರುದ್ಧ ತಪಾಸಣೆ ಮತ್ತು ಕೌನ್ಸೆಲಿಂಗ್ ವಿದ್ಯಾರ್ಥಿಗಳ ಶೋಷಣೆ ತಡೆಗಟ್ಟಲು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಕಳೆದ ಎಪ್ರಿಲ್ನಲ್ಲಿ ಮಾಜಿ ಮಾನವ ಸಂಪನ್ಮೂಲ ಸಚಿವ ಸ್ಮೃತಿ ಇರಾನಿ ಮುಂದಿನ ವಾರ್ಷಿಕ ಅವಧಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಪದವಿ ಕೋರ್ಸ್ಗಳಿಗೆ ವಾರ್ಷಿಕ ಶುಲ್ಕವನ್ನು ಪ್ರಸ್ತುತ 90,000 ದಿಂದ 2 ಲಕ್ಷಕ್ಕೆ ಏರಿಸಿದ್ದರು.
ತಿರುಪತಿ ಐಐಟಿ, ಐಐಟಿ ಪಾಲಕ್ಕಾಡ್, ಐಐಟಿ ಗೋವಾ, ಧಾರವಾಡ, ಭೀಲಾಯಿ, ಜಮ್ಮು ಐಐಟಿಗಳನ್ನು ಐಐಟಿ ಕಾಯಿದೆಯ ಪರಿಧಿಯ ಅಡಿಯಲ್ಲಿ ತರುವ ಗುರಿಯೊಂದಿಗೆ ಜುಲೈನಲ್ಲಿ ಲೋಕಸಭೆಯಲ್ಲಿ ಒಂದು ಮಸೂದೆಯೊಂದನ್ನು ಜಾರಿಗೊಳಿಸಲಾಯಿತು.
ಆಗಸ್ಟ್ನಲ್ಲಿ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಜಮ್ಮು ಐಐಟಿ ಉದ್ಘಾಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.