Date : Monday, 30-10-2017
ನವದೆಹಲಿ: ರೈಲ್ವೇ ಮುಂದಿನ 5 ವರ್ಷಗಳಲ್ಲಿ ಸುಮಾರು 150 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆಯಲ್ಲಿದೆ, ಇದರಿಂದಾಗಿ ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಲಿದೆ ಎಂದು ರೈಲ್ವೇ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ರಾಷ್ಟ್ರೀಯ ಸಾರಿಗೆಯಾದ ರೈಲ್ವೇಗೆ ಹೊಸ ಆಯಾಮವನ್ನು ನೀಡಲು ತಾನು ಪ್ರಯತ್ನಿಸುತ್ತಿರುವುದಾಗಿ ಹೇಳಿರುವ ಅವರು,...
Date : Saturday, 28-10-2017
ನವದೆಹಲಿ: ಮೊಬೈಲ್ ಆಧಾರ್‌ನ್ನು ದಾಖಲೆಯಾಗಿ ತೋರಿಸಿ ಇನ್ನು ಮುಂದೆ ಏರ್‌ಪೋರ್ಟ್‌ನೊಳಗೆ ಪ್ರವೇಶಿಸಬಹುದಾಗಿದೆ. ಅಲ್ಲದೇ ಪೋಷಕರೊಂದಿಗೆ ಇರುವ ಅಪ್ರಾಪ್ತರಿಗೆ ಯಾವುದೇ ದಾಖಲೆಗಳ ಅಗತ್ಯವಿಲ್ಲ. ನಾಗರಿಕ ವಿಮಾನ ಯಾನ ಸಚಿವಾಲಯ ಈ ಬಗ್ಗೆ ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ಏರ್‌ಪೋರ್ಟ್‌ನೊಳಗೆ ಪ್ರವೇಶಿಸುವ ಪ್ರಯಾಣಿಕರು ವೋಟರ್ ಐಡಿ,...
Date : Saturday, 28-10-2017
ನವದೆಹಲಿ: ಮಲೇಷ್ಯಾದಲ್ಲಿ ಪಾಸ್‌ಪೋರ್ಟ್ ಕಳೆದುಕೊಂಡು ಸಂಕಷ್ಟದಲ್ಲಿರುವ ಭಾರತೀಯ ಕುಟುಂಬದ ನೆರವಿಗೆ ಧಾವಿಸಿದ್ದಾರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಮೀರಾ ರಮೇಶ್ ಪಾಟೇಲ್ ಎಂಬುವವರು ಸುಷ್ಮಾ ಅವರಿಗೆ ಟ್ವಿಟ್ ಮಾಡಿ, ತನ್ನ ಕುಟುಂಬ ಕೌಲಾಲಂಪುರ ಏರ್‌ಪೋರ್ಟ್‌ನಲ್ಲಿ ಪಾಸ್‌ಪೋರ್ಟ್‌ನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿದೆ. ವೀಕೆಂಡ್‌ನಲ್ಲಿ...
Date : Saturday, 28-10-2017
ನವದೆಹಲಿ: ಭಾರತ ಪ್ರವಾಸದಲ್ಲಿರುವ ಫ್ರೆಂಚ್ ಶಸ್ತ್ರಾಸ್ತ್ರ ಪಡೆಗಳ ಸಚಿವೆ ಫ್ಲೊರೆನ್ಸ್ ಪಾಲೆ ಅವರು ಶನಿವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಭಾರತ ಮತ್ತು ಫ್ರೆಂಚ್ ರಾಷ್ಟ್ರಗಳು ದ್ವಿಪಕ್ಷೀಯ ರಕ್ಷಣಾ ಬಾಂಧವ್ಯವನ್ನು ವೃದ್ಧಿಸುಕೊಳ್ಳುವ ಭರವಸೆಯನ್ನು ಪರಸ್ಪರ ನೀಡಿವೆ. ಅಲ್ಲದೇ ಉಭಯ ದೇಶಗಳು...
Date : Saturday, 28-10-2017
ನವದೆಹಲಿ: ದೀಪಾವಳಿ ಸಮಾರಂಭದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅಧಿಕಾರಕ್ಕೆ ಬಂದ ಮೂರು ವರ್ಷದಿಂದಲೂ ಮೋದಿ ಪತ್ರಕರ್ತರೊಂದಿಗೆ ದೀಪಾವಳಿ ಸಂವಾದ ನಡೆಸುತ್ತಾ ಬಂದಿದ್ದಾರೆ. ‘ಮಾಧ್ಯಮ ಜನರ ಮೇಲೆ ಅಗಾಧ ಪ್ರಭಾವ...
Date : Saturday, 28-10-2017
ನವದೆಹಲಿ: ಕಾಶ್ಮೀರದಲ್ಲಿ ಯುವಕರ ಮೂಲಭೂತೀಕರಣ ದೊಡ್ಡ ಸವಾಲಾಗಿದೆ. ಒಂದು ವೇಳೆ ಇದು ಹೆಚ್ಚಾದರೆ ಕಾಶ್ಮೀರದಲ್ಲಿ ಯಮೆನ್, ಸಿರಿಯಾ, ಲಿಬಿಯಾದಂತಹ ಪರಿಸ್ಥಿತಿ ಉದ್ಭವವಾಗಲಿದೆ. ಹೀಗಾಗೀ ಸಮಸ್ಯೆಯಲ್ಲಿರುವ ಕಾಶ್ಮೀರಿಗಳಿಗೆ ನಾವೆಲ್ಲರೂ ಕೊಡುಗೆ ನೀಡುಬೇಕಾದುದು ಅತ್ಯಗತ್ಯ ಎಂದು ಕಾಶ್ಮೀರ ಸಂವಾದದ ನೂತನ ಸಂಧಾನಕಾರ ದಿನೇಶ್ವರ್ ಶರ್ಮಾ...
Date : Saturday, 28-10-2017
ಇಂಧೋರ್: ಹಿಂದೂಸ್ಥಾನ ಹಿಂದೂಗಳ ರಾಷ್ಟ್ರ. ಇದರರ್ಥ ಇಲ್ಲಿ ಬೇರೆಯವರು ಇರಬಾರದು ಎಂದಲ್ಲ ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ‘ಜರ್ಮನ್ ಜರ್ಮನಿಯರ ರಾಷ್ಟ್ರ, ಬ್ರಿಟನ್ ಬ್ರಿಟಿಷರ ರಾಷ್ಟ್ರ, ಅಮೆರಿಕಾ ಅಮೆರಿಕನ್ನರ ರಾಷ್ಟ್ರವಾಗಿದೆ. ಅದೇ ರೀತಿ ಹಿಂದೂಸ್ಥಾನ ಹಿಂದೂಗಳ ರಾಷ್ಟ್ರ. ಇದರರ್ಥ...
Date : Saturday, 28-10-2017
ಬಾರ್ಸಿಲೋನ: ಸ್ಪೇನ್‌ನಿಂದ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವಾಗಿ ಕ್ಯಾಟಲೋನಿಯಾ ಹೊರಹೊಮ್ಮಿದೆ. ಕ್ಯಾಟಲೋನ್‌ನ ಪ್ರಾದೇಶಿಕ ಸಂಸತ್ತು ಸ್ಪೇನ್‌ನಿಂದ ಸ್ವತಂತ್ರಗೊಳ್ಳುವ ಘೋಷಣೆಯ ಪರವಾಗಿ ಮತ ಚಲಾಯಿಸಿದೆ. ಮತದಾನದಲ್ಲಿ ಪಾಲ್ಗೊಂಡ ಶೇ.90ರಷ್ಟು ಮಂದಿಯಲ್ಲಿ ಶೇ.43ರಷ್ಟು ಜನ ಸ್ವಾತಂತ್ರ್ಯದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಕ್ಯಾಟಲೋನಿಯ ಸರ್ಕಾರ ಹೇಳಿದೆ....
Date : Saturday, 28-10-2017
ಭಾರತ ತನ್ನತನವನ್ನು ಗುರುತಿಸಿಕೊಂಡು ಗತಶೀಲತೆಯನ್ನು ಪಡೆದು ಮರಳಿ ತನ್ನಬೈಭವವನ್ನು ಗಳಿಸಿ, ಜಗತ್ತನ್ನು ಮುನ್ನಡೆಸುವ ಹಿರಿಮೆಯ ಸ್ಥಾನವನ್ನು ಪಡೆಯುವ ಸಂದರ್ಭ ಕೂಡಿಬಂದಿದೆ. ಹೌದು ಅಂತಹ ಅದ್ಭುತ ಸಮಯ ಒಂದು ಕಡೆ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಆಗಿ 125 ವರ್ಷದಲ್ಲಿದ್ದರೆ ಇನ್ನೊಂದು ಕಡೆ ಅವರ...
Date : Saturday, 28-10-2017
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಆದಿ ಶಂಕರಾಚಾರ್ಯರ ರಚನೆಯ ಸೌಂದರ್ಯ ಲಹರಿ ಮತ್ತು ದಕ್ಷಿಣಾಮೂರ್ತಿ ಅಷ್ಟಕಗಳ ಸಾಮೂಹಿಕ ಪಾರಾಯಣೋತ್ಸವ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅರಮನೆ ಮೈದಾನದಲ್ಲಿ ಇಂದಿನಿಂದ ಎರಡು ದಿನ ಈ ಕಾರ್ಯಕ್ರಮ ನೆರವೇರಲಿದ್ದು, ಪ್ರಧಾನಿಗಳು ನಾಳೆ...