ಇಸ್ಲಾಮಾಬಾದ್: ಚೀನಾ ಪಾಕಿಸ್ಥಾನದ ಪ್ರಮುಖ 3 ರಸ್ತೆ ಯೋಜನೆಗಳಿಗೆ ಅನುದಾನ ನೀಡುವುದನ್ನು ತಾತ್ಕಲಿಕವಾಗಿ ನಿಲ್ಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಚೀನಾ-ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ನಡಿ ಯುಎಸ್ಡಿ 50 ಬಿಲಿಯನ್ ವೆಚ್ಚದಲ್ಲಿ ಪಾಕ್ನಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆದಿದೆ. ಈ ಯೋಜನೆಯ ಭಾಗವಾಗಿರುವ ಕನಿಷ್ಠ ಮೂರು ಪ್ರಮುಖ ರಸ್ತೆ ನಿರ್ಮಾಣಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಲು ಚೀನಾ ನಿರ್ಧರಿಸಿದೆ.
ಚೀನಾ ಸರ್ಕಾರದ ಈ ನಿರ್ಧಾರದಿಂದಾಗಿ ಪಾಕಿಸ್ಥಾನ ನ್ಯಾಷನಲ್ ಹೈವೇ ಅಥಾರಿಟಿಯ ರೂ.1 ಟ್ರಿಲಿಯನ್ ಮೊತ್ತದ ರಸ್ತೆ ಪ್ರಾಜೆಕ್ಟ್ಗೆ ಹಾನಿಯಾಗಲಿದೆ.
ತಾತ್ಕಲಿಕವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಹೊಸ ನಿಯಮಾವಳಿಗಳನ್ನು ಹೊರಡಿಸಿದ ಬಳಿಕ ಅನುದಾನ ಮತ್ತೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.