Date : Tuesday, 21-03-2017
ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಫೋಟೋಗ್ರಫಿ ಫೋರಂನ ಜಂಟಿ ಆಶ್ರಯದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಯಿತು. ಮಿಜಾರಿನ ಶೋಭಾವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ...
Date : Tuesday, 21-03-2017
ಮಂಗಳೂರು : ಉತ್ತರಪ್ರದೇಶದಲ್ಲಿ ಅಲ್ಪಸಂಖ್ಯಾತರು ಬಿಜೆಪಿಯತ್ತ ಒಲವು ತೋರಿಸಿರುವುದು ಚುನಾವಣಾ ಫಲಿತಾಂಶದಿಂದ ಖಚಿತವಾಗಿದ್ದು, ಮುಂದೆ ಕರ್ನಾಟಕದಲ್ಲೂ ಇದು ಪುನರಾವರ್ತನೆಯಾಗುತ್ತದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಪ್ರದಾನ ಕಾರ್ಯದರ್ಶಿ ರಶ್ಮಿ ಡಿ’ಸೋಜಾ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ದಿನಾಂಕ 20-03-2017 ರ ಸೋಮವಾರದಂದು...
Date : Monday, 20-03-2017
ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಏರ್ಪಡಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಸ್ವಚ್ಛ ಕಾರ್ಯಕ್ರಮವನ್ನು 24 ನೇ ವಾರದಲ್ಲಿ (ಮಾರ್ಚ್ 19, 2017) ನಗರದ 24 ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಾಂಡೇಶ್ವರ : ಪೋಲಿಸ್ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಇಂದು...
Date : Friday, 17-03-2017
ರಾಮಕೃಷ್ಣ ಮಿಷನ್ ಕಳೆದೆರಡು ವರುಷಗಳಿಂದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಆಯೋಜಿಸುತ್ತಿದೆ. ಜನರಲ್ಲಿ ಸ್ವಚ್ಛತೆಯ ಭಾವನೆ ಮೂಡಿಸುವ ಸಲುವಾಗಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತೆಯ ಜಾಗೃತಿಯನ್ನುಂಟು ಮಾಡಲು ಪ್ರಯತ್ನಿಸುತ್ತಿದೆ. ಮೂರನೇ ಹಂತದಲ್ಲಿ ಸುಮಾರು ಅರವತ್ತು ತಂಡಗಳು ಈ ಅಭಿಯಾನದಲ್ಲಿ ಕೈಜೋಡಿಸಿ...
Date : Thursday, 16-03-2017
ಮಂಗಳೂರು : ರಾಜ್ಯದ 12ನೇ ಬಜೆಟ್ ಮಂಡಿಸಿದ ಬಜೆಟ್ ತಜ್ಞ ಸಿದ್ಧರಾಮಯ್ಯರವರ 2017-18 ನೇ ಸಾಲಿನ ಬಜೆಟ್ ಕೇವಲ ಆಯ-ವ್ಯಯದ ಲೆಕ್ಕಾಚಾರಕಷ್ಟೇ ಸೀಮಿತವಾಗಿರುವುದು ರಾಜ್ಯದ ದುರದೃಷ್ಟ. ನಿರಂತರ ಗಂಭೀರ ಬರ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಗ್ರಾಮೀಣ ಜನತೆ ಹಾಗೂ ಕೃಷಿಕರ ಸಹಾಯಕ್ಕೆ ಮುಂದಾಗದಿರುವುದು ಬಜೆಟ್‌ನ...
Date : Wednesday, 15-03-2017
ಪುತ್ತೂರು : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಅಮೇರಿಕದ ಸಂಶೋಧನಾತ್ಮಕ ಪರಿವೀಕ್ಷಕರ ತಂಡವು ಭೇಟಿ ನೀಡಿದ್ದು, ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸ್ವಸ್ಥಿಕ್ ಪದ್ಮ ಸಂಶೋಧಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಲ್ಪಟ್ಟ “PLAMA” ಯೋಜನಾ ವಸ್ತುವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು, ISEF ಅಂತರಾಷ್ಟ್ರೀಯ ವೈಜ್ಞಾನಿಕ...
Date : Wednesday, 15-03-2017
ಸುಳ್ಯ : ನಾಟಕಗಳು ಸಾಹಿತ್ಯದ ಒಂದು ಪ್ರಕಾರವಾಗಿದ್ದು, ಮಾನವನ ಬದುಕಿನ ರೂಪಾಂತರಗಳಾಗಿವೆ. ದಿನನಿತ್ಯದ ಆಗು-ಹೋಗುಗಳಲ್ಲಿರುವ ಅವೈಚಾರಿಕತೆಯನ್ನು ತೊಲಗಿಸಿ ವೈಚಾರಿಕ ಬದುಕಿಗೆ ತಿರುವು ನೀಡುತ್ತದೆ. ನಾಟಕಗಳಲ್ಲಿ ಸಮಾಜದ ಜ್ವಲಂತ ಸಮಸ್ಯೆಗಳನ್ನು ಪ್ರಸ್ತುತ ಪಡಿಸುವುದರ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಕಲಾವಿದರಲ್ಲಿ ಹುದುಗಿರುವ...
Date : Wednesday, 15-03-2017
ಮಂಗಳೂರು : ಅಪ್ಪಟ ಚುನಾವಣಾ ಬಜೆಟ್, ಜಾರಿಗೆ ತರಲು ಸಾಧ್ಯವಿಲ್ಲವಾದರೂ ಜನರ ಕಣ್ಣಿಗೆ ಮಣ್ಣೆರೆಚಲು ಮತ್ತು ಜನರಿಗೆ ತಮ್ಮ ದುರಾಡಳಿತವನ್ನು ಮುಚ್ಚಿ ಹಾಕಲು ಮಾಡಿರುವ ಹರಸಾಹಸ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಮೂಡಬಿದ್ರೆ, ಕಡಬ ತಾಲೂಕು ರಚನೆ ಘೋಷಣೆಯನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ...
Date : Wednesday, 15-03-2017
ಮಂಗಳೂರು : ನಿಟ್ಟೆ ವಿಶ್ವವಿದ್ಯಾಲಯಕ್ಕೆ ಸೇರಿದ ನಿಟ್ಟೆ ಇನ್ಸ್ಟಿಟ್ಯೂಟ್ ಓಫ್ ಕಮ್ಯುನಿಕೇಷನ್, ಪನೀರ್ ಕ್ಯಾಂಪಸ್, ದೇರಳಕಟ್ಟೆಗೆ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರೂ ಆದ ‘ಸಿಂಪಲ್ ಸ್ಟಾರ್’ ಎಂದೇ ಪರಿಚಿತರಾದ ರಕ್ಷಿತ್ ಶೆಟ್ಟಿಯವರು ಆಗಮಿಸಿದ್ದರು. ವಿಭಾಗದ ಮುಖ್ಯಸ್ಥರಾದ ಪ್ರೊ.ರವಿರಾಜ್ ಕಿಣಿಯವರು...
Date : Monday, 13-03-2017
ಬಂಟ್ವಾಳ : ಗ್ರಹಸ್ಥಾಶ್ರಮ ಧರ್ಮ ಸರಿಯಾಗಿ ಪಾಲಿಸಿದಲ್ಲಿ ಉತ್ತಮ ಸಂತಾನ ಪ್ರಾಪ್ತಿಯಾಗಿ ದೋಷ ರಹಿತ ದೇಶ ನಿರ್ಮಾಣವಾಗುತ್ತದೆ. ಪ್ರೀತಿ ವಾತ್ಸಲ್ಯದಿಂದ ಸಂಸ್ಕಾರ ಯುತರಾಗಿ ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ. ಭಜನೆಯಿಂದ ನಮ್ಮ ಆತ್ಮದಲ್ಲಿರುವ ದೇವರನ್ನು ಜಾಗೃತಗೊಳಿಸಬಹುದು. ಪ್ರತಿ ಊರಿನಲ್ಲೂ ಇಂತಹ ಭಜನಾ...