ಮಂಗಳೂರು : ರಾಜ್ಯದ 12ನೇ ಬಜೆಟ್ ಮಂಡಿಸಿದ ಬಜೆಟ್ ತಜ್ಞ ಸಿದ್ಧರಾಮಯ್ಯರವರ 2017-18 ನೇ ಸಾಲಿನ ಬಜೆಟ್ ಕೇವಲ ಆಯ-ವ್ಯಯದ ಲೆಕ್ಕಾಚಾರಕಷ್ಟೇ ಸೀಮಿತವಾಗಿರುವುದು ರಾಜ್ಯದ ದುರದೃಷ್ಟ. ನಿರಂತರ ಗಂಭೀರ ಬರ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಗ್ರಾಮೀಣ ಜನತೆ ಹಾಗೂ ಕೃಷಿಕರ ಸಹಾಯಕ್ಕೆ ಮುಂದಾಗದಿರುವುದು ಬಜೆಟ್ನ ಘೋರ ವೈಫಲ್ಯ.
ರಾಜ್ಯದ ಶಿಕ್ಷಕರು ಕಾತರದಿಂದ ನಿರೀಕ್ಷಿಸುತ್ತಿದ್ದ ಕಾಲ್ಪನಿಕ ಸಮಸ್ಯೆಗೆ ಪರಿಹಾರ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಮತಿ, ಕನಿಷ್ಠ 2000 ಇಸವಿಯ ವರೆಗೆ ಪ್ರಾರಂಭವಾದ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ಪ್ರೋ. ವೈದ್ಯನಾಥನ್ ವರದಿಯ ಅನುಷ್ಠಾನದಿಂದ ದೈಹಿಕ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಮುಂತಾದ ಅನೇಕ ನಿರೀಕ್ಷೆಗಳನ್ನು ಸುಳ್ಳಾಗಿಸಿ ಶಿಕ್ಷಕರ ಉತ್ಸಾಹಕ್ಕೆ ತಣ್ಣೀರೆರಿಚಿದ ಬಜೆಟ್.
ರಾಷ್ಟ್ರವೆಲ್ಲ ಒಪ್ಪಿಕೊಂಡರೂ, ಬಜೆಟ್ ಭಾಷಣವನ್ನು ಕೇಂದ್ರ ಸರ್ಕಾರ ಕೈಗೊಂಡ ಅಪಮೌಲೀಕರಣದ ಟೀಕೆಗೆ ಉಪಯೋಗಿಸಿರುವುದು ಕೀಳುಮಟ್ಟದ ರಾಜಕೀಯ.
7ನೇ ವೇತನ ಆಯೋಗದ ರಚನೆ, ಕರಾವಳಿ ಜಿಲ್ಲೆಗಳಿಗೆ ಪಶ್ಚಿಮ ವಾಹಿನಿಗಾಗಿ 100 ಕೋಟಿ ಅನುದಾನ, ಕೊನೆಗಾದರೂ 49 ಹೊಸ ತಾಲೂಕುಗಳ ರಚನೆ ಮಾಡುವ ಸರ್ಕಾರದ ನಿರ್ಣಯ ಹಾಗೂ ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆಯನ್ನು 2000 ದಿಂದ 4000 ಕ್ಕೆ ಏರಿಸಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.