×
Home About Us Advertise With s Contact Us

ಸಮಾಜ ಸುಧಾರಣೆಗೆ ನಾಟಕಗಳ ಕೊಡುಗೆ- ಕು. ದಿವ್ಯಾ ಕಾಳಮನೆ

ಸುಳ್ಯ : ನಾಟಕಗಳು ಸಾಹಿತ್ಯದ ಒಂದು ಪ್ರಕಾರವಾಗಿದ್ದು, ಮಾನವನ ಬದುಕಿನ ರೂಪಾಂತರಗಳಾಗಿವೆ. ದಿನನಿತ್ಯದ ಆಗು-ಹೋಗುಗಳಲ್ಲಿರುವ ಅವೈಚಾರಿಕತೆಯನ್ನು ತೊಲಗಿಸಿ ವೈಚಾರಿಕ ಬದುಕಿಗೆ ತಿರುವು ನೀಡುತ್ತದೆ. ನಾಟಕಗಳಲ್ಲಿ ಸಮಾಜದ ಜ್ವಲಂತ ಸಮಸ್ಯೆಗಳನ್ನು ಪ್ರಸ್ತುತ ಪಡಿಸುವುದರ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಕಲಾವಿದರಲ್ಲಿ ಹುದುಗಿರುವ ಕಲೆಯ ಸೊಬಗು, ಪಾತ್ರ ಭಿನ್ನತೆ, ನವರಸಗಳು, ಆಶಯಗಳು ಉತ್ತಮವಾಗಿದ್ದಲ್ಲಿ ಸಹೃದಯರನ್ನು ಆಕರ್ಷಿಸುವುದು. ಉತ್ತಮ ವಿಷಯಗಳನ್ನು ಆರಿಸಿಕೊಂಡು ಯುವಜನತೆ ನಾಟಕದ ಕಡೆ ಒಲವು ತೋರಬೇಕು ಎಂದು ಕುಮಾರಿ ದಿವ್ಯಾ ಕಾಳಮನೆ ಹೇಳಿದರು. ಇವರು ದಿನಾಂಕ 15-3-2017 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನ್ನಡ ಚಿಂತನೆ ಸರಣಿಯ ’ನಾಟಕಗಳು ಮತ್ತು ಸಾಮಾಜಿಕ ಸುಧಾರಣಾ ಚಿಂತನೆಗಳು’ ವಿಷಯದ ಕುರಿತು ಮಾತನಾಡಿದರು.

sneha1

sneha-school

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಚಂದ್ರಶೇಖರ ದಾಮ್ಲೆ ಇವರು ಮಾತನಾಡಿ ನಿತ್ಯ ಜೀವನದಲ್ಲಿ ನಾಟಕ ಇದ್ದೇ ಇದೆ. ಸಾಮಾಜಿಕ ಸಮಸ್ಯೆಗಳನ್ನು ನಾಟಕಗಳಲ್ಲಿ ಪ್ರಸ್ತುತ ಪಡಿಸಿದಾಗ ಜನಜಾಗೃತಿ ಮೂಡಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಮೊದಲಿಗೆ ಶಿಕ್ಷಕ ರಘುರಾಮ ಭಟ್ ಸಿ. ಸ್ವಾಗತಿಸಿ ಶಿಕ್ಷಕಿ ಜಯಂತಿ ಕೆ. ವಂದಿಸಿದರು. ಮುಖ್ಯಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಉಪಸ್ಥಿತರಿದ್ದರು. ಶಿಕ್ಷಕ ದೇವಿಪ್ರಸಾದ ಜಿ. ಸಿ. ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ’ಮಾನವರಾಗೋಣ’ ಎಂಬ ವೃದ್ಧಾಶ್ರಮದ ಸಮಸ್ಯೆಗಳನ್ನು ಬಿಂಬಿಸುವ ನಾಟಕ ಪ್ರದರ್ಶನಗೊಂಡಿತು.

 

Recent News

Back To Top
error: Content is protected !!