ಮಂಗಳೂರು : ನಿಟ್ಟೆ ವಿಶ್ವವಿದ್ಯಾಲಯಕ್ಕೆ ಸೇರಿದ ನಿಟ್ಟೆ ಇನ್ಸ್ಟಿಟ್ಯೂಟ್ ಓಫ್ ಕಮ್ಯುನಿಕೇಷನ್, ಪನೀರ್ ಕ್ಯಾಂಪಸ್, ದೇರಳಕಟ್ಟೆಗೆ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರೂ ಆದ ‘ಸಿಂಪಲ್ ಸ್ಟಾರ್’ ಎಂದೇ ಪರಿಚಿತರಾದ ರಕ್ಷಿತ್ ಶೆಟ್ಟಿಯವರು ಆಗಮಿಸಿದ್ದರು. ವಿಭಾಗದ ಮುಖ್ಯಸ್ಥರಾದ ಪ್ರೊ.ರವಿರಾಜ್ ಕಿಣಿಯವರು ಆಗಮಿಸಿದ ಅತಿಥಿಯನ್ನು ಹೂಗುಚ್ಛ ನೀಡುವುದರ ಮೂಲಕ ಬರಮಾಡಿಕೊಂಡರು. ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗು ಜನ ಸಾಮಾನ್ಯರು ಈ ಕಾರ್ಯಕ್ರಮವನ್ನು ವೀಕ್ಷಿಸಲು ನೆರೆದಿದ್ದರು.
“ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಹೆಚ್ಚು ಪ್ರಯೋಗಾತ್ಮಕ ಸಿನಿಮಾಗಳು ಬರಬೇಕು, ಜನರು ಅವುಗಳನ್ನು ಮೆಚ್ಚಿ ಪ್ರೋತ್ಸಾಹಿಸಬೇಕು” ಎಂದು ನೆರೆದಿರುವ ವಿದ್ಯಾರ್ಥಿಗಳು ಹಾಗೂ ಮಾಧ್ಯಮದವರನ್ನು ಉದ್ದೇಶಿಸಿ ತಮ್ಮ ಮಾತುಗಳನ್ನು ಪ್ರಾರಂಭಿಸಿದರು. ನಿಟ್ಟೆ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯು ಆಗಿರುವ ರಕ್ಷಿತ್ ಶೆಟ್ಟಿ ಸಂಸ್ಥೆಯನ್ನು ಉದ್ದೇಶಿಸಿ, ‘ಈ ವಿದ್ಯಾಸಂಸ್ಥೆ ಹಲವಾರು ಸ್ರಜನಾತ್ಮಕ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿಸುವ ಸಾಮರ್ಥ್ಯ ಹೊಂದಿದೆ’. ‘ತಮ್ಮ ಬೆಳವಣಿಗೆಗಿಂತ ತಾವು ದುಡಿಯುತ್ತಿರುವ ಚಿತ್ರರಂಗ ಬೆಳೆಯುವುದು ಅವಶ್ಯ’ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.
ಚಲನಚಿತ್ರ ಮಾಡುವ ಕಲೆಯನ್ನು ಪ್ರಮುಖ ಮುದ್ದೆಯಾಗಿರಿಸಿ ವಿದ್ಯಾರ್ಥಿಗಳೊಡನೆ ಪರಸ್ಪರ ಚರ್ಚೆ ಆರಂಭಿಸಿದ ರಕ್ಷಿತ್, ಚಲನಚಿತ್ರ ವಿತರಣೆ, ಚಿತ್ರಮಂಧಿರ, ಪೈರಸಿ ವಿಷಯಗಳ ಬಗ್ಗೆ ಸಿನಿಮಾ ಪ್ರಿಯರಿಗೆ ಅರಿವು ಮೂಡಿಸಿದರು. “ಈಗಿನ ಚಲನಚಿತ್ರ ವಿತರಣೆ ಇನ್ನೂ ಹಿಂದಿನ ಕಾಲದ ಪ್ರಕ್ರಿಯೆಯನ್ನೇ ಉಪಯೋಗಿಸುತ್ತಿದ್ದಾರೆ ಆದಕಾರಣ ನಾವು ಕರ್ನಾಟಕದಾದ್ಯಂತ ತಲುಪುತ್ತಿಲ್ಲ, ಈ ಪ್ರಕ್ರಿಯೆಯನ್ನು ಬದಲಿಸುವ ಪ್ರಯತ್ನ ನಡೆಯುತ್ತಿದೆ”.
ರಕ್ಷಿತ್ ರವರು ಇತ್ತೀಚೆಗೆ ಹುಟ್ಟು ಹಾಕಿದ ನಿರ್ಮಾಣ ಸಂಸ್ಥೆ, ಪರಂವಾಹ್ ಸ್ಟುಡಿಯೊಸ್ ಬಗ್ಗೆ ಹೇಳುತ್ತಾ, “ಮಧ್ಯಮ ವರ್ಗದ ಮಲ್ಟಿಪ್ಲೆಕ್ಸ್ ಅನ್ನೋ ಹೊಸ ಪ್ರಯತ್ನವನ್ನು ಮಾಡಬೇಕೆಂದಿದ್ದೇವೆ, ಇದರಿಂದ ತಾವು ಮಾಡುವ ಚಿತ್ರಗಳು ಎಲ್ಲರಿಗೂ ತಲುಪುತ್ತದೆ ಎನ್ನೋ ನಂಬಿಕೆ”.
“ನಾನು ನಟನಾಗುವ ಆಸೆಯಿಂದ ನಿರ್ದೇಶಕನಾದೆ ಹೊರತು ಬೇರೆ ಯಾವ ಉದ್ದೇಶದಿಂದಿಲ್ಲ” ಎಂದು ತಮ್ಮ ಸಿನಿಮಾ ಪಯಣದ ಬಗ್ಗೆ ವಿವರಿಸುತ್ತಾ, ಚಿತ್ರರಂಗಕ್ಕೆ ಪ್ರವೇಶಿಸಲು ಸ್ಪೂರ್ತಿಯಾದ ದಿವಂಗತ ಶಂಕರ್ ನಾಗ್ ಕುರಿತು ಒಂದೆರಡು ಮಾತನಾಡಿದ ಅವರು, “ಶಂಕರ್ ಸರ್ ಮಾಡಿದ ಸಾಧನೆಯ ಅರ್ಧದಷ್ಟಾದರೂ ನಾನು ಸಾಧಿಸಲು ಬಯಸುತ್ತೇನೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.