ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಏರ್ಪಡಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಸ್ವಚ್ಛ ಕಾರ್ಯಕ್ರಮವನ್ನು 24 ನೇ ವಾರದಲ್ಲಿ (ಮಾರ್ಚ್ 19, 2017) ನಗರದ 24 ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪಾಂಡೇಶ್ವರ : ಪೋಲಿಸ್ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಇಂದು ಪಾಂಡೇಶ್ವರಠಾಣೆಯ ಆವರಣದಲ್ಲಿ ಸ್ವಚ್ಛತಾಕಾರ್ಯ ಮಾಡಿದರು. ಸ್ವಾಮಿಜಿತಕಾಮಾನಂದಜಿ ಹಾಗೂ ಪೋಲಿಸ್ ವೃತ್ತ ನಿರೀಕ್ಷಕ ಶ್ರೀಬೆಳ್ಳಿಯಪ್ಪ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೋಲಿಸ್ ಉಪ ನಿರೀಕ್ಷಕ ಶ್ರೀ ಅನಂತ ಮುರ್ಡೆಶ್ವರ ಹಾಗೂ ಶ್ರೀಸತ್ಯ ಅಭಿಯಾನವನ್ನು ಸಂಯೋಜಿಸಿದರು.
ಕೊಟ್ಟಾರ: ಕುಮಾರ್ ಜಿಮ್ ಫ್ರೆಂಡ್ಸ್ ಗೆಳೆಯರು ಕೊಟ್ಟಾರ ಚೌಕಿಯಲ್ಲಿ ಸ್ವಚ್ಛತಾಕಾರ್ಯ ಕೈಗೊಂಡರು. ಶ್ರೀ ಜೆ. ಕೃಷ್ಣ ಪಾಲೆಮಾರ್ ಹಾಗೂ ಶ್ರೀ ಪ್ರವೀಣ ಅಭಿಯಾನಕ್ಕೆ ಚಾಲನೆ ನೀಡಿದರು. ಕೊಟ್ಟಾರ ಚೌಕಿಯ ಮೇಲ್ಸೇತುವೆಯ ಕಂಬಗಳನ್ನು ಎರಡು ದಿನಗಳಿಂದಲೇ ಸ್ವಚ್ಛ ಮಾಡುತ್ತಿದ್ದ ಯುವಕರ ಪಡೆಇಂದು ಸುಂದರವಾಗಿ ಸಾಮಾಜಿಕ ಕಳಕಳಿಯುಳ್ಳ ಸಂದೇಶ ಮತ್ತು ಚಿತ್ರಗಳನ್ನು ಬರೆದರು. ಶ್ರೀ ಹರೀಶ್, ದಯಾನಂದ ಸೇರಿದಂತೆ ಸುಮಾರು 70 ಜನಯುವಕರು ಸೌಂದರೀಕರಣದಲ್ಲಿ ಭಾಗಿಯಾದರು. ಶ್ರೀ ಕಿರಣಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.
ಕಾವೂರು: ಶ್ರೀ ಸುಧಾಕರ್ ನೇತೃತ್ವದಲ್ಲಿ ಕಾವೂರು ವೃತ್ತದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಶ್ರೀರಣದೀಪ ಕಾಂಚನ್ ಹಾಗೂ ಶ್ರೀ ರಾಮಚಂದ್ರರಾವ್ ಅಭಿಯಾನಕ್ಕೆ ಚಾಲನೆ ನೀಡಿದರು. ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಮಾಡಲಾಯಿತು. ಅಲ್ಲಲ್ಲಿ ನೇತಾಡುತ್ತಿದ್ದ ಹಳೆಯ ಬ್ಯಾನರ್ ಗಳನ್ನು ತೆರವುಗೊಳಿಸಲಾಯಿತು. ರಸ್ತೆಯ ಬದಿಯಲ್ಲಿ ಬಿದ್ದಿದ್ದ ಬಾಟಲ್, ಪ್ಲಾಸ್ಟಿಕ್ ಹೆಕ್ಕಿ ಶುಚಿಗೊಳಿಸಲಾಯಿತು. ಶ್ರೀ ಸಚಿನ್, ಶ್ರೀ ಮೋಹನ್, ಶ್ರೀ ಸದಾನಂದರೈ ಸೇರಿದಂತೆ ಹಲವರು ಶ್ರಮದಾನದಲ್ಲಿ ಪಾಲ್ಗೊಂಡರು.
ಫೋರಂ ಮಾಲ್: ಪೋರಂ ಫಿಜಾ ಮಾಲ್ ಸಿಬ್ಬಂದಿ ಆಸಕ್ತಿಯಿಂದ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಗಳಾದರು. ನೆಹರು ವೃತ್ತದ ಮೂರೂ ರಸ್ತೆಗಳು, ಮಾರ್ಗ ವಿಭಾಜಕಗಳು ಹಾಗೂ ಪಕ್ಕದ ತೊಡುಗಳನ್ನು ಶುಚಿಗೊಳಿಸಲಾಯಿತು. ಇದಕ್ಕೂ ಮುನ್ನ ಸ್ವಾಮಿಜಿತಕಾಮಾನಂದಜಿ ಸಮ್ಮುಖದಲ್ಲಿ ಕ್ಯಾಪ್ಟನ್ ಗಣೇಶ್ಕಾರ್ಣಿಕ್ ಹಾಗೂ ಶ್ರೀಮನೋಜ್ ಸಿಂಗ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಶ್ರೀಅಶ್ವಿತ ಕುಮಾರ್ ಶೆಟ್ಟಿ ಹಾಗೂ ಸುನೀಲ್ ಕೆ ಎಸ್ ಕಾರ್ಯಕ್ರಮವನ್ನು ಸಂಘಟಿಸಿದರು.
ಮಂಗಳಾದೇವಿ: ಶ್ರೀಶಾರದಾ ಮಹಿಳಾ ವೃಂದದ ಸದಸ್ಯೆಯರಿಂದ ಮಂಗಳಾ ನಗರ ಹಾಗೂ ಮಂಕಿಸ್ಟಾಂಡ್ ಪರಿಸರದಲ್ಲಿ ಸ್ವಚ್ಛತಾಕಾರ್ಯ ಜರುಗಿತು. ಶ್ರೀರವಿಶಂಕರ್ ಹಾಗೂ ಶ್ರೀಮತಿ ಸತ್ಯವತಿ ಅಭಿಯಾನವನ್ನು ಶುಭಾರಂಭಗೊಳಿಸಿದರು. ಸ್ವಚ್ಛತೆಯೊಂದಿಗೆ ಸಾರ್ವಜನಿಕರಿಗೆ ಕರಪತ್ರ ನೀಡಿ ಜಾಗೃತಿಕಾರ್ಯ ನಡೆಸಿದರು.
ಯಯ್ಯಾಡಿ: ಫ್ರೇಂಡ್ಸ್ ಪಾರ್ಎವರ್ ಸದಸ್ಯರುಯಯ್ಯಾಡಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಶ್ರೀ ದಿನೇಶ ಆಳ್ವ ಹಾಗೂ ಶ್ರೀ ಅರವಿಂದ ಜೊತೆಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು. ಶ್ರೀ ಅನಿಲ್ ಬೇಕಲ್, ಶ್ರೀ ಪ್ರಭಾಕರ್ ಶ್ರೀ ಸುಜಿತ್ ಮತ್ತಿತರರು ಭಾಗವಹಿಸಿದರು. ಶ್ರೀ ಶುಭೋದಯ ಆಳ್ವ ಮಾರ್ಗದರ್ಶಿಸಿದರು.
ಪಂಪ್ವೆಲ್: ಗರೋಡಿ ಯುವಕರ ತಂಡದಿಂದ ಪಂಪ್ವೆಲ್ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಶ್ರೀಸುಭಾಷ ಪಡೀಲ್ ಹಾಗೂ ಶ್ರೀ ಸಂದೀಪ ಪಂಪವೆಲ್ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು. ಪಂಪವೆಲ್ ನಿಂದಕಂಕನಾಡಿ ಸಾಗುವ ರಸ್ತೆ ಹಾಗೂ ಮಾರ್ಗವಿಭಾಜಕದಲ್ಲಿದ್ದ ತ್ಯಾಜ್ಯ ತೆಗೆದು ಶುಚಿಗೊಳಿಸಲಾಯಿತು. ಜೊತೆಗೆ ಅಲ್ಲಲ್ಲಿ ಹರಡಿಕೊಂಡಿದ್ದ ಕಾಗದ ಪ್ಲಾಸ್ಟಿಕ್ ಹೆಕ್ಕಲಾಯಿತು. ಪೂಜಾರಾಜ್, ಆಶ್ವಿನ್ ನಾಯ್ಕ್, ಪ್ರಕಾಶಗರೋಡಿ ಮತ್ತಿತರರು ಭಾಗವಹಿಸಿದ್ದರು.
ನಂತೂರು: ದ.ಕ ಹವ್ಯಕ ಸಭಾದ ಸದಸ್ಯರಿಂದ ಪದುವಾ ಜಂಕ್ಷನ್ ನಿಂದ ನಂತೂರವರೆಗೆ ಸ್ವಚ್ಛ ಮಾಡಲಾಯಿತು. ಶ್ರೀ ತಿಮ್ಮಪ್ಪಯ್ಯ ಹಾಗೂ ಶ್ರೀ ಬಾಲಕೃಷ್ಣ ಅಭಿಯಾನಕ್ಕೆ ಚಾಲನೆ ನೀಡಿದರು. ಸುಮಾರು ಇನ್ನೂರು ಮನೆಗಳಿಗೆ ತೆರಳಿ ಸ್ವಚ್ಛತೆಯ ಮಹತ್ವವನ್ನು ಸಾರುವ ಕರಪತ್ರ ಹಂಚಿ ಜಾಗೃತಿ ಮಾಡಲಾಯಿತು. ಶ್ರೀ ವೇಣುಗೋಪಾಲ ಭಟ್ ಹಾಗೂ ಡಾರಾಜೇಂದ್ರ ಪ್ರಸಾದ ಕಾರ್ಯಕ್ರಮವನ್ನು ಸಂಯೋಜಿಸಿದರು.
ರಥಬೀದಿ: ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರೀ ವೆಂಕಟರಮಣ ರಥಬೀದಿಯಲ್ಲಿ ಶ್ರಮದಾನ ನಡೆಯಿತು. ಪ್ರಾಚಾರ್ಯರಾದ ಶ್ರೀ ರಾಜಶೇಖರ್ ಹೆಬ್ಬಾರ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಪ್ರೊ. ಶೇಷಪ್ಪ ಅಮೀನ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿ ರಥಬೀದಿಯನ್ನು ಸ್ವಚ್ಛಗೊಳಿಸಿದರು. ಅಲ್ಲದೇ ದಾರಿಹೋಕರಿಗೆ ಹಾಗೂ ಅಂಗಡಿ ವರ್ತಕರಿಗೆ ಸ್ವಚ್ಛತೆಯ ಕರಪತ್ರ ನೀಡಿ ಜಾಗೃತಿ ಮಾಡಲಾಯಿತು.
ಬಿಜೈ ಚರ್ಚ್ ರಸ್ತೆ: ಶ್ರೀ ಸುಬ್ರಮಣ್ಯ ಸಭಾದ ಆಶ್ರಯದಲ್ಲಿ ಬಿಜೈ ಚರ್ಚ್ ರಸ್ತೆ, ಕೊಡಿಯಾಲ್ಗುತ್ತು ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀ ಪ್ರಭಾಕರ ಶೆಟ್ಟಿ ಹಾಗೂ ಉದಯಕುಮಾರ ಅಭಿಯಾನಕ್ಕೆ ಚಾಲನೆ ಕೊಟ್ಟರು. ಶ್ರೀ ಎಂ ಆರ್ ವಾಸುದೇವ್ ನೇತೃತ್ವದಲ್ಲಿ ಕೊಡಿಯಾಲ್ಗುತ್ತು ರಸ್ತೆಯನ್ನು ಹಾಗೂ ಸುತ್ತಮುತ್ತಲಿನ ಕಾಲುದಾರಿ ಹಾಗೂ ತೊಡುಗಳನ್ನು ಶುಚಿಗೊಳಿಸಲಾಯಿತು. ಶ್ರೀಕಾಂತ ರಾವ್ಅಭಿಯಾನವನ್ನು ಸಂಯೋಜಿಸಿದರು.
ಕರಂಗಲಪಾಡಿ: ಸಂತ ಅಲೋಸಿಯಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕರಂಗಲಪಾಡಿಯಲ್ಲಿ ಸ್ವಚ್ಛತಾಕಾರ್ಯವನ್ನು ಹಮ್ಮಿಕೊಂಡಿದ್ದರು. ಪ್ರಾಧ್ಯಾಪಕರಾದ ಶ್ರೀ ಚಂದ್ರಶೇಖರ ಶೆಟ್ಟಿ ಹಾಗೂ ಡಾ. ರವೀಂದ್ರ ಸ್ವಾಮಿಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರಾಧ್ಯಾಪಕಿ ಪ್ರೇಮಲತಾ ಶೆಟ್ಟಿ ಮುಂದಾಳತ್ವದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಆಸಕ್ತಿಯಿಂದ ಶ್ರಮದಾನಗೈದರು.
ಗಣೇಶಪುರ: ಜೆಸಿಆಯ್ ಸದಸ್ಯರಿಂದ ಗಣೇಶಪುರ ದೇವಸ್ಥಾನ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಅಭಿಯಾನ ನಡೆಯಿತು. ಶ್ರಿ ಗಣಪತಿ ಶೇಟ್ ಹಾಗೂ ಶ್ರಿ ವಿಜಯ್ ಕಾರ್ಯಕ್ರಮವನ್ನು ಆರಂಭಗೊಳಿಸಿದರು. ಮೊದಲಿಗೆ ದೇವಸ್ಥಾನದ ವಠಾರ ಸ್ವಚ್ಛಗೊಳಿಸಲಾಯಿತು. ತದನಂತರ ಪೋಸ್ಟ್ ಆಫೀಸ್ ಆವರಣಗೋಡೆ ಹಾಗೂ ಹತ್ತಿರದ ಬಸ್ ತಂಗುದಾಣವನ್ನು ಶುಚಿಗೊಳಿಸಿ ಬಣ್ಣ ಬಳಿಯಲಾಯಿತು.
ಎಕ್ಕೂರು: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸದಸ್ಯರು ಹಾಗೂ ಸ್ಥಳಿಯ ಸಾರ್ವಜನಿಕರು ಎಕ್ಕೂರಿನಲ್ಲಿ ಸ್ವಚ್ಛತೆಗಾಗಿ ಶ್ರಮದಾನ ನಡೆಸಿದರು. ಶ್ರಿಮತಿ ಜಯಂತಿ ಆನಂದ ಹಾಗೂ ಶ್ರೀಮತಿ ವಿಮಲಾ ಸ್ವಚ್ಛತಾಕಾರ್ಯವನ್ನು ಆರಂಭಗೊಳಿಸಿದರು. ಎಕ್ಕೂರಿನ ಅಡ್ಡರಸ್ತೆ ಹಾಗೂ ಭಜನಾ ಮಂದಿರದ ಸುತ್ತಮುತ್ತ ಸ್ವಚ್ಛತೆಯನ್ನು ನಡೆಸಲಾಯಿತು. ಶ್ರೀಮತಿ ಶೋಭಾ, ಪ್ರೇಮಾ ಹಾಗೂ ಗೌತಮ್ ಸೇರಿದಂತೆ ಅನೇಕರು ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಂಡರು.
ಬೋಳಾರ: ಶಿಕ್ಷಕಿ ವಿಜಯಲಕ್ಷ್ಮೀ ಮಾರ್ಗದರ್ಶನದಲ್ಲಿ ಸೋದರಿನಿವೇದಿತ ಬಳಗದವರಿಂದ ಮಂಗಳಾದೇವಿಯಿಂದ ಬೋಳಾರ ಲಿವೆಲ್ಜಂಕ್ಷನ್ ವರೆಗೆ ಸ್ವಚ್ಛತಾಕಾರ್ಯ ಜರುಗಿತು. ಶ್ರೀಮತಿ ಉಷಾ ದಿನಕರ್ರಾವ್ ಹಾಗೂ ಶ್ರೀ ಚಂದ್ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಚ್ಛತೆಯೊಂದಿಗೆ ಮನೆ ಮನೆಗೆ ಹೋಗಿ ಕರಪತ್ರ ನೀಡಿ ಜಾಗೃತಿ ಮಾಡಲು ಪ್ರಯತ್ನಿಸಲಾಯಿತು.
ಚೆಂಬುಗುಡ್ಡೆ: ಜೈ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರ ನೇತೃತ್ವದಲ್ಲಿ ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀರಾಮಚಂದ್ರ ಹಾಗೂ ಶ್ರೀ ಪುರುಷೋತ್ತಮ್ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಶ್ರೀವಿಠೋಭ ರುಕ್ಮಯ್ಯ ಭಜನಾ ಮಂದಿರ, ಅಮ್ಮ ಭಗವಾನ್ ಮಾನವ ಸೇವಾ ಸಮಿತಿ, ಜಗತ್ ಫ್ರೇಂಡ್ಸ್ ಸರ್ಕಲ್, ವೆಲಕಮ್ಗ್ರೂಪ್ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಸಹಯೋಗದೊಂದಿಗೆ ಅಭಿಯಾನವನ್ನು ನಡೆಸಲಾಯಿತು. ಶ್ರೀ ವೇದಿತಕುಮಾರ ಸಂಯೋಜಿಸಿದರು.
ಫಳ್ನಿರ್: ಲಯನ್ಸ್ ಕ್ಲಬ್ ಸದಸ್ಯರಿಂದ ಫಳ್ನಿರ್ ಹೈಲ್ಯಾಂಡ್ ನಲ್ಲಿ ಸ್ವಚ್ಛತಾಕಾರ್ಯಕ್ರಮ ನಡೆಯಿತು. ಶ್ರೀ ತಾರಾನಾಥ ಶೆಟ್ಟಿ ಹಾಗೂ ಸುರೇಶ್ ರೈ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ರಸ್ತೆಗಳ ಬದಿಗಳನ್ನು ಹಾಗೂ ತೋಡಿನಲ್ಲಿದ್ದ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಶ್ರೀ ಸದಾಶಿವ ರೈ ಹಾಗೂ ಶ್ರೀ ಸುರೇಶ್ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದರು.
ಮೇರ್ಲಪದವು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಮೇರ್ಲಪದವಿನಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯತ್ ಸದಸ್ಯ ಶ್ರೀ ಅಶೋಕ್ ಹಾಗೂ ಶ್ರೀ ರಾಜೇಶ್ ಶೆಟ್ಟಿ ಸ್ವಚ್ಛತಾಕಾರ್ಯಕ್ಕೆ ಚಾಲನೆ ನೀಡಿದರು.
ಏರಪೋರ್ಟ್ ರಸ್ತೆ: ಕೆಪಿಟಿ ವಿದ್ಯಾರ್ಥಿಗಳಿಂದ ಏರಪೊರ್ಟ್ರಸ್ತೆಯಲ್ಲಿ ಸ್ವಚ್ಛತಾಕಾರ್ಯ ನಡೆಯಿತು. ಶ್ರೀರೋನಾಲ್ಡ್ ಮಿರಂಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲಿಗೆ ಏರಪೋರ್ಟ್ರಸ್ತೆ ಹಾಗೂ ಪುಟ್ ಪಾಥ್ ಗೂಡಿಸಿ ಶುಚಿಗೊಳಿಸಿದರು. ನಂತರ ಪಾಲಿಟೆಕ್ನಿಕ್ ಮುಂಭಾಗದ ಗೋಡೆಗೆ ಅಂಟಿಸಿದ್ದ ಭಿತ್ತಿಚಿತ್ರಗಳನ್ನು ಕಿತ್ತು ಶುಚಿಗೊಳಿಸಿದರು.
ಗೂಡ್ಶೆಡ್ ರಸ್ತೆ : ಶ್ರೀಗೋಪಾಲಕೃಷ್ಣ ಕುಂಬ್ಳೆ ನೇತೃತ್ವದಲ್ಲಿ ನಿರೇಶ್ವಾಲ್ಯರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಶ್ರೀದೇವರಾಜ್ ಕಾಮತ್ ಹಾಗೂ ಮಾಧವ ಶೆಟ್ಟಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಸ್ವಚ್ಛತಾಕಾರ್ಯ ಕೊಣಾಜೆಯಲ್ಲಿ ಜರುಗಿತು. ಡಾ ಸುದೀಪ ಹಾಗೂ ಶ್ರಿ ಲತಾ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಅಶೋಕ, ಶಶಾಂಕ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಸ್ವಚ್ಛತಾಕಾರ್ಯದಲ್ಲಿ ಭಾಗವಹಿಸಿದರು.
ದೇರೆಬೈಲ್: ಪ್ರಶಾಂತ ನಗರದಲ್ಲಿ ಸ್ವಚ್ಛತಾಕಾರ್ಯಕ್ರಮ ಜರುಗಿತು. ಮನಪಾ ಸದಸ್ಯ ಶ್ರೀ ರಾಜೇಶ್ ಹಾಗೂ ಎನ್ಎಲ್ರಾವ್ ಕಾರ್ಯಕ್ರಮವನ್ನು ಆರಂಭಗೊಳಿಸಿದರು. ಪ್ರಶಾಂತ ನಗರ ಅಸೋಸಿಯೆಶನ್ ಸದಸ್ಯರು ಸಹಯೋಗ ಒದಗಿಸಿದರು.
ಅಶೋಕ ನಗರ: ಎಂಸಿಎಫ್ ಮಂಗಳಾ ಸಿಬ್ಬಂದಿಯಿಂದ ಸ್ವಚ್ಛತಾ ಅಭಿಯಾನ ನಡೆಯಿತು. ಮನಪಾ ಸದಸ್ಯ ಶ್ರೀ ರಾಧಾಕೃಷ್ಣ ಹಾಗೂ ಶ್ರೀ ಪ್ರಭಾಕರ್ರಾವ್ ಅಭಿಯಾನಕ್ಕೆ ನಿಶಾನೆ ತೋರಿದರು. ಶ್ರೀಸಾಯಿ ಫ್ರೇಂಡ್ಸ್ ಹಾಗೂ ಸ್ಪಂದನ ಫ್ರೆಂಡ್ಸ್ ಸ್ವಚ್ಛತಾಕಾರ್ಯಕ್ಕೆ ಕೈಜೋಡಿಸಿ ಸಹಕರಿಸಿದರು.
ಪಡೀಲ್: ಯೂಥ ಸೆಂಟರ್ ಹಾಗೂ ಆಟೋಚಾಲಕರ ಸಹಯೋಗದಲ್ಲಿ ಪಡೀಲ್ನಲ್ಲಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಪಡೀಲ್ ಜಂಕ್ಷನ್ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು. ತದನಂತರ ಮನೆಮನೆ ಸಂಪರ್ಕಿಸಿ ಜಾಗೃತಿ ಕರಪತ್ರ ನೀಡಲಾಯಿತು. ಶ್ರೀ ಉದಯಕುಮಾರ ಕೆ ಪಿ ಕಾರ್ಯಕ್ರಮವನ್ನು ಸಂಯೋಜಿಸಿದರು.
ಕೊಂಡಾಣ: ಶ್ರೀ ಎ. ಸೀತಾರಾಂ ಮಾರ್ಗದರ್ಶನದಲ್ಲಿ ಮಿತ್ರನಗರದಲ್ಲಿ ಸ್ವಚ್ಛತೆಯನ್ನು ಹಮ್ಮಿಕೊಳ್ಳಲಾಯಿತು. ಶ್ರೀ ರವೀಂದ್ರ ಶೆಟ್ಟಿ ಹಾಗೂ ಪ್ರತಿಮಾ ಹೆಬ್ಬಾರ ಜಂಟಿಯಾಗಿಅಭಿಯಾನಕ್ಕೆ ಚಾಲನೆ ನೀಡಿದರು. ನೂರಾರು ಮನೆಗಗಳನ್ನು ಸಂಪರ್ಕ ಮಾಡಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಶ್ರಿಮತಿ ಪುಷ್ಪಕಲಾ ಬೀರಿ ಹಾಗೂ ಶ್ರೀ ಪ್ರವೀಣ ಕೊಂಡಾಣ ಸೇರಿದಂತೆ ಸುಮಾರು 70 ಜನ ಶ್ರಮದಾನ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.