Date : Wednesday, 01-04-2015
ಕಾರ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಧರ್ಮ ಪೀಠಗಳಲ್ಲಿ ಒಂದಾಗಿರುವ ಶ್ರೀ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿಯಾಗಿ ಏಳು ದಶಕಗಳ ಸಾರ್ಥಕತೆ ಕಂಡಿರುವ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಇದೀಗ ನವತಿ ಸಂಭ್ರಮದಲ್ಲಿದ್ದಾರೆ. ದೇಶ, ವಿದೇಶಗಳಲ್ಲಿ ಹೊಂದಿರುವ ಲಕ್ಷಾಂತರ ಮಂದಿ ಶಿಷ್ಯವರ್ಗಕ್ಕೆ...
Date : Wednesday, 01-04-2015
ಪುತ್ತೂರು: ಶಿಕ್ಷಣ ಸಂಸ್ಥೆಗಳ ಉಪನ್ಯಾಸಕಿಯರಿಗೆ ಮಹಿಳಾ ದೌರ್ಜನ್ಯ ಹಾಗೂ ಪೂರಕ ಕಾನೂನು ಮಾಹಿತಿಗಳನ್ನು ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಮಾಜದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಹೇಳಿದರು. ಅವರು ಕಾಲೇಜಿನ ಮಹಿಳಾ ಸಂಘದ...
Date : Wednesday, 01-04-2015
ಸುಳ್ಯ : ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಯಕ್ಷಗಾನ ತಾಳಮದ್ದಳೆ ಜರಗಿತು. ಕಲಾಸಂಘದ ಹಿಮ್ಮೇಳ ವಾದಕ ವಿಷ್ಣು ಶರಣ ಬನಾರಿ ಅವರಿಂದ ಸೇವಾರೂಪವಾಗಿ ಅಳವಡಿಸಲ್ಪಟ್ಟ ಈ ಕಲಾ...
Date : Wednesday, 01-04-2015
ಸುಳ್ಯ : ಸುಳ್ಯದ ಅಮರಶಿಲ್ಪಿ ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟುಹಬ್ಬವನ್ನು ಸುಳ್ಯ ಹಬ್ಬವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ2015-2016 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷರೂ ಆದ ಎನ್.ಎ. ರಾಮಚಂದ್ರ...
Date : Wednesday, 01-04-2015
ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ತೀಯ ಮತ್ತು ವಿದ್ಯುನ್ಮಾನ ಅಭಿಯಂತರಿಕೆ ವಿಭಾಗವು ತಾಂತ್ರಿಕ ವಿದ್ಯಾಭ್ಯಾಸ ಗುಣಮಟ್ಟ ಸುಧಾರಣಾ ಕಾರ್ಯಕ್ರಮ-ಭಾಗ 2 (ಟೆಕ್ಯುಪ್-2) ರ ಆಶ್ರಯದಲ್ಲಿ ವಿದ್ಯುತ್ತೀಯ ಅಭಿಯಂತರಿಕೆಯಲ್ಲಿನ ಮುನ್ನಡೆಯ ಬಗ್ಗೆ ವಿಮರ್ಶಿಸಲು ಒಂದು ದಿನದ ರಾಷ್ಟ್ರಮಟ್ಟದ ವಿಚಾರಸಂಕಿರಣವು...
Date : Wednesday, 01-04-2015
ಬೆಂಗಳೂರು: 17 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಕಾಲೇಜು ಸಿಬ್ಬಂದಿಯೇ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಆಗ್ನೇಯ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಆಕೆಯೊಂದಿಗಿದ್ದ ಗೆಳತಿಗೂ ಗಾಯಗಳಾಗಿವೆ. ಕಾಲೇಜು ಆವರಣದಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತ ವಿದ್ಯಾರ್ಥಿನಿ ಗೌತಮಿ ತುಮಕೂರು ಜಿಲ್ಲೆ ಪಾವಗಡದವಳು...
Date : Wednesday, 01-04-2015
ಸುಳ್ಯ : ಆಲೆಟ್ಟಿ-ಬಡ್ಡಡ್ಕ ರಸ್ತೆಯ ಗುಂಡ್ಯ ಎಂಬಲ್ಲಿ ಕಾಮಗಾರಿ ನಡೆಸದೆ ಅರ್ಧಕ್ಕೆ ನಿಲ್ಲಿಸಿದ ರಸ್ತೆಯು ಅಪಘಾತ ವಲಯವಾಗಿ ಮಾರ್ಪಟ್ಟಿದ್ದು ಪ್ರಯಾಣಿಕರ ಜೀವಕ್ಕೆ ಸಂಚಕಾರವನ್ನು ತಂದೊಡ್ಡುತಿದೆ. ಇಲ್ಲಿ ದಿನಾಲು ಒಂದೆರಡು ಅಪಘಾತಗಳು ನಡೆಯುತ್ತಲೇ ಇರುತ್ತದೆ. ಮಂಗಳವಾರ ರಾತ್ರಿ ಕಾಂಕ್ರೀಟ್ ಹಲಗೆಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವು...
Date : Wednesday, 01-04-2015
ಬೆಳ್ತಂಗಡಿ : ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಳ್ತಂಗಡಿ ರೋಟರಿಯಿಂದ ಆರ್ಥಿಕ ನೆರವನ್ನು ಮೂಂಡಾಜೆಯ ವಿನಯಚಂದ್ರ ಅವರಿಗೆ ರೋಟರಿ ಕಾರ್ಯದರ್ಶಿ ಎಂ.ವೈಕುಂಠ ಪ್ರಭು, ಸದಸ್ಯರಾದ ಡಾ.ಆನಂದ ನಾರಾಯಣ ಹಾಗೂ ಪ್ರಕಾಶ್ ತುಳುಪುಳೆ ಅವರು ಇತ್ತೀಚೆಗೆ ಬೆಳ್ತಂಗಡಿ ರೋಟರಿ ಭವನದಲ್ಲಿ...
Date : Wednesday, 01-04-2015
ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಲಿಸುವುದು ಮತ್ತು ಒಂದರಿಂದ ಐದನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಎರಡು ಮಸೂದೆಗಳನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು...
Date : Tuesday, 31-03-2015
ಮಂಗಳೂರು : ಶ್ರೀ ರಾಮನ ಬಗ್ಗೆ ಕೀಳು ಅಭಿರುಚಿಯ ಮಾತುಗಳನ್ನು ಆಡುವ ಪ್ರೊ. ಕೆ. ಎಸ್. ಭಗವಾನ್ ಅಂತವರು ಅಗ್ಗದ ಪ್ರಚಾರಗಿಟ್ಟಿಸುವ ತಂತ್ರಗಾರಿಕೆಯಾಗಿದೆ. ಹಿಂದು ಧರ್ಮದ ಬಗ್ಗೆ ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಹಿಂದುಗಳೆಲ್ಲರೂ ಒಂದಾಗಿ ಪ್ರತಿಭಟನೆ ಮಾಡಬೇಕು ಎಂದು...