News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿದ ಬಲೂಚಿಸ್ತಾನ್: ಧ್ವಜ ಮತ್ತು ಗೀತೆಅನಾವರಣ

ನವದೆಹಲಿ: ಪಾಕಿಸ್ತಾನ ಮತ್ತು ಅದರ ದೌರ್ಜನ್ಯಗಳನ್ನು ಧಿಕ್ಕರಿಸಿರುವ ಬಲೂಚಿಸ್ತಾನ್ ಪ್ರಾಂತ್ಯವು ಈಗ ಇಸ್ಲಾಮಾಬಾದ್‌ನ ಕಪಿ ಮುಷ್ಟಿಯಿಂದ ತನ್ನ ಸ್ವಾತಂತ್ರ್ಯವನ್ನು ಅಧಿಕೃತವಾಗಿ ಘೋಷಿಸಿದೆ.

ಬಲೂಚ್ ಸೈನ್ಯವು ಪ್ರಾಂತ್ಯದ ಶೇಕಡಾ 85 ಕ್ಕಿಂತ ಹೆಚ್ಚು ಭೂಪ್ರದೇಶವನ್ನು ಮತ್ತು ಚಿನ್ನ, ತಾಮ್ರ, ಕಲ್ಲಿದ್ದಲು ನಿಕ್ಷೇಪಗಳು ಮತ್ತು ಅನಿಲ ನಿಕ್ಷೇಪಗಳು ಸೇರಿದಂತೆ ಪ್ರದೇಶದ ವಿಶಾಲ ಖನಿಜ ಸಂಪನ್ಮೂಲಗಳನ್ನು ನಾವೇ  ನಿಯಂತ್ರಿಸುತ್ತೇವೆ ಎಂದು ಘೋಷಿಸಿದೆ.

ಅಲ್ಲದೇ, ಬಲೂಚಿಸ್ತಾನ್‌ ತನ್ನದೇ ಆದ ಧ್ವಜ, ರಾಷ್ಟ್ರಗೀತೆ, ಕರೆನ್ಸಿ ಮತ್ತು ಆಡಳಿತ ಸಂಸ್ಥೆಗಳನ್ನು ಸ್ಥಾಪಿಸುವ ಬಗ್ಗೆಯೂ ಮಾತನಾಡಿದೆ.

ಸಾಮಾಜಿಕ ಮಾಧ್ಯಮ ವೇದಿಕೆಯಾದ್ಯಂತ ಹರಡುತ್ತಿರುವ ಪೋಸ್ಟ್‌ಗಳು “ಬಲೂಚಿಸ್ತಾನ್ ಗಣರಾಜ್ಯ”ದ ಉದಯವನ್ನು ಘೋಷಿಸುತ್ತಿವೆ. ಬಲೂಚಿಸ್ತಾನದಿಂದ ಪಾಕಿಸ್ತಾನದ ವಿರುದ್ಧದ ಈ ವೈರಲ್ ಮತ್ತು ತೀಕ್ಷ್ಣವಾದ ಟೀಕೆಯು ಜಾಗತಿಕ ವೇದಿಕೆಯಲ್ಲಿ ಇದುವರೆಗೆ ರಾಜಕೀಯ ಅಸ್ಥಿರತೆಯಲ್ಲಿ ಸಿಲುಕಿಕೊಂಡಿದ್ದ ಮತ್ತು ದೇಶೀಯವಾಗಿ ವಿಭಜನೆಯಾಗಿದ್ದ ಇಸ್ಲಾಮಾಬಾದ್ ಅನ್ನು ಮತ್ತಷ್ಟು ಮುಜುಗರಕ್ಕೀಡು ಮಾಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top