ಬೈಂದೂರು : ಬುಡಕಟ್ಟು ಹಾಗೂ ಪರಿಶಿಷ್ಟ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಆಧುನಿಕತೆ ಇನ್ನೂ ತೆರೆದುಕೊಳ್ಳದೇ ಬಹಳ ಹಿಂಜರಿಕೆ ಸ್ವಭಾವ ಹೆಚ್ಚುತ್ತಿದ್ದು, ಇವರಿಗೆ ಶೈಕ್ಷಣಿಕ, ಭಾಷಣ ಹಾಗೂ ರಂಗಭೂಮಿ ಕಾರ್ಯಾಗಾರಗಳು ಆತ್ಮವಿಶ್ವಾಸವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ನರಸಿಂಹ ಹಳಗೇರಿ ಹೇಳಿದರು.
ಯಡ್ತರೆ ಗ್ರಾಪಂ ವ್ಯಾಪ್ತಿಯ ಮಲ್ಲಿಬಾರು ಸ.ಹಿ.ಪ್ರಾ ಶಾಲೆಯಲ್ಲಿ ಕಲಿಕೋತ್ಸವದ ಅಂಗವಾಗಿ ಉಪ್ಪುಂದ ಜೇಸಿಐ ಏರ್ಪಡಿಸಿದ್ದ ಭಾಷಣ ಕಲೆ, ಶಿಕ್ಷಣದಲ್ಲಿ ರಂಗಭೂಮಿಯ ಆಯಾಮಗಳ ಬಳಕೆ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೆಶಿಸಿ ಅವರು ಮಾತನಾಡಿದರು. ಅತೀ ಹಿಂದುಳಿದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಎಲ್ಲರಂತೆ ನಾವೂ ಕೂಡಾ ಸಾಧನೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಒಮ್ಮೆ ಧೃಢಪಟ್ಟರೆ ಅವರು ಎಂದಿಗೂ ಜೀವನದಲ್ಲಿ ಹಿಂಜರಿಯಲಾರರು ಎಂದರು.
ಜೆಸಿಐ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ ಅಧ್ಯಕ್ಷತೆ ವಹಿಸಿ, ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು. ಮುಖ್ಯಶಿಕ್ಷಕ ಗಿರೀಶ್ ಮೇಸ್ತ, ಸಹಶಿಕ್ಷಕರಾದ ವಿನಾಯಕ ಪಟಗಾರ್, ರಾಮನಾಥ ಮೇಸ್ತ, ಜೆಸಿ ಕಾರ್ಯದರ್ಶಿ ರಾಮಕೃಷ್ಣ ಖಾರ್ವಿ ಉಪಸ್ಥಿತರಿದ್ದರು. ಸುಧಾಕರ ಪಿ. ಸ್ವಾಗತಿಸಿ, ಹಾಲೇಶಪ್ಪ ಡಿ. ವಂದಿಸಿದರು. ತರಬೇತಿಯ ನಂತರ ಆಶುಭಾಷಣ ಸ್ಪರ್ಧೆ ಮತ್ತು ಕಿರು ಪ್ರಹಸನಗಳು ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.