ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗೆ ರಾಜ್ಯದಲ್ಲೇ ಮೊದಲ ಬಾರಿಗೆ ನಬಾರ್ಡ್ ಸಂಸ್ಥೆ ನೇರವಾಗಿ ಸಾಲ ವಿತರಣೆಗೆ ಮುಂದಾಗಿದೆ. ಇದು ಕೃಷಿ ವಲಯಕ್ಕೆ ಪ್ರಯೋಜನವಾಗಲಿದೆ ಎಂದು ಬ್ಯಾಂಕ್ನ ಅಧ್ಯಕ್ಷ ರಂಗನಾಥ ರೈ ಕೆ.ಎಸ್ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಬಾರ್ಡ್ ಸಂಸ್ಥೆ ಕಡಿಮೆ ಬಡ್ಡಿ ದರದಲ್ಲಿ ನೇರ ಸಾಲ ವಿತರಿಸಲು ಅಂಗೀಕಾರ ನೀಡಿದೆ. 2014-15ನೇ ಸಾಲಿನಲ್ಲಿ 15.47 ಕೋಟಿ ರೂ. ಸಾಲ ನೀಡಿದ್ದು, 27.84 ಕೋಟಿ ರೂ. ವಹಿವಾಟು ನಡೆಸಿದೆ. ನಬಾರ್ಡ್ ಸೌಲಭ್ಯದಿಂದ ಮುಂದಿನ ವರ್ಷಗಳಲ್ಲಿ ಪಿಕಾರ್ಡ್ ಬ್ಯಾಂಕ್ ಇನ್ನೂ ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆ ಇದೆ. ಈ ವ್ಯವಸ್ಥೆಯಿಂದ ಕೃಷಿಕರಿಗೆ ಪ್ರಯೋಜನವಾಗಲಿದೆ ಎಂದರು.
ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆರ್ಥಿಕ ವರ್ಷದ ಅಂತ್ಯಕ್ಕೆ 8432 ಸದಸ್ಯರನ್ನು ಹೊಂದಿದ್ದು, 2ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಶೇ.70ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ರಾಜ್ಯ ಸರ್ಕಾರ ಜಾರಿಗೊಳಿಸಿದ ಶೇ.3ರ ಬಡ್ಡಿದರದ ಕೃಷಿ ಸಾಲ ಯೋಜನೆಯಲ್ಲಿ 2014-15ನೇ ಸಾಲಿನಲ್ಲಿ 1045 ಕೃಷಿಕರಿಗೆ 8.49ಕೋಟಿ ರೂ. ಕೃಷಿ ಸಾಲ ಹಾಗೂ ೫೫೬ ಕೃಷಿಕರಿಗೆ 6.97 ಕೋಟಿ ರೂ. ಕೃಷಿಯೇತರ ಸಾಲ ನೀಡಲಾಗಿದೆ. ಬ್ಯಾಂಕ್ನ ಕಡಬ ಶಾಖೆಯಲ್ಲೂ ರೈತರಿಗೆ ನೇರ ಸಾಲ ಪಡೆಯಲು ಹಾಗೂ ಮರುಪಾವತಿ ಮಾಡಲು ಆನ್ಲೈನ್ ತಂತ್ರಾಂಶ ಅಳವಡಿಸಲಾಗಿದೆ. ಇದರಿಂದ ಜನರಿಗೆ ಖರ್ಚು ವೆಚ್ಚ ಹಾಗೂ ಸಮಯ ಉಳಿತಾಯವಾಗಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬ್ಯಾಂಕ್ನ ನಿಯೋಜಿತ ಅಧ್ಯಕ್ಷ ಎ.ಬಿ.ಮನೋಹರ್ ರೈ, ಕೋಶಾಧಿಕಾರಿ ಭಾಸ್ಕರ್ ಗೌಡ, ನಾಮನಿರ್ದೇಶಿತ ಸದಸ್ಯ ವಿಕ್ರಂ ರೈ ಸಾಂತ್ಯ, ವ್ಯವಸ್ಥಾಪಕ ಅಲ್ಬರ್ಟ್ ಲೂವಿಸ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.