Date : Friday, 22-05-2015
ಬೆಳ್ತಂಗಡಿ: ತಾಲೂಕಿನ 46 ಗ್ರಾಪಂಗಳ 631 ಸ್ಥಾನಗಳಲ್ಲಿ ೬೨೩ ಸ್ಥಾನಗಳಿಗೆ 1496 ಮಂದಿ ಸ್ಪರ್ಧಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ತಾಲೂಕಿನ 631 ಸ್ಥಾನಗಳಿಗೆ 1918 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಪರಿಶೀಲನೆ ವೇಳೆ 9 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. 8 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯುವಿಕೆಗೆ ಮೇ. 21 ಕೊನೆಯ ದಿನವಾಗಿದ್ದು ಇದರಲ್ಲಿ 405 ಮಂದಿ ನಾಮಪತ್ರಗಳನ್ನು...
Date : Friday, 22-05-2015
ಬೆಳ್ತಂಗಡಿ : ಬೆಲೆಬಾಳುವ ಕೃಷ್ಣ ಮೃಗದ ಚರ್ಮವನ್ನು ಧರ್ಮಸ್ಥಳದ ಮುಖ್ಯ ರಸ್ತೆಯ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪುತ್ತೂರು ಪೋಲಿಸ್ ಅರಣ್ಯ ಸಂಚಾರಿದಳದ ತಂಡ ಶುಕ್ರವಾರ ಬಂಧಿಸಿದ್ದು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ...
Date : Friday, 22-05-2015
ಕಾರ್ಕಳ : ಕೇಂದ್ರ ಸರಕಾರವು ಕಳೆದ ಒಂದು ವರ್ಷದ ಆಡಳಿತ ಅವಧಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು, ವಿಶ್ವವೇ ಭಾರತವನ್ನು ದಿಟ್ಟಿಸಿ ನೋಡುವಂತೆ ಮಾಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಅವರು ಮಂಜುನಾಥ ಪೈ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ...
Date : Friday, 22-05-2015
ಮಂಗಳೂರು : ಈ ವರ್ಷದ ಪಿ.ಯು.ಸಿ. ಫಲಿತಾಂಶದಲ್ಲಿ ಒಟ್ಟು ಶೇಕಡಾವಾರು ಫಲಿತಾಂಶ ಸುಧಾರಣೆಯಾಗಿದ್ದರೂ ದ್ವಿತೀಯ ಪಿ.ಯು.ಸಿ. ಪರೀಕ್ಷಾ ದಿನಗಳಿಂದ ಪ್ರಾರಂಭಗೊಂಡು ಇಂದಿನವರೆಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಸಾರ್ವಜನಿಕರಲ್ಲಿ ಆತಂಕ ಹಾಗೂ ಗೊಂದಲವನ್ನು ಸೃಷ್ಟಿಸಿದೆ. ವಿದ್ಯಾರ್ಥಿಗಳ ಹಾಗೂ ಅವರ ಪೋಷಕರ ಗೊಂದಲವನ್ನು...
Date : Friday, 22-05-2015
ಪೆರ್ಲ : ಮೇ 22 ರಂದು ಬೆಳಗ್ಗೆ ದೀಪಾರಾಧನೆಯೊಂದಿಗೆ ವಿಶಿಷ್ಟವಾದ ಪೂರ್ಣಮಂಡಲ ತ್ರಿಕಾಲಪೂಜೆ ಮತ್ತುಪಾರಾಯಣಗಳ ಪ್ರಾರಂಭವಾಯಿತು. ನಂತರ ಅಷ್ಟೋತ್ತರ ಶತ ನಾಳಿಕೇರ ಫಲಾತ್ಮಕ ಅಷ್ಟದ್ರವ್ಯ ಮಹಾಗಣಪತಿಹವನ, ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಗೋಪೂಜೆ ಮತ್ತು ಗೋದಾನ ನಡೆಯಿತು. ಈ ಸಂದರ್ಭದಲ್ಲಿಶ್ರೀಗೋಪಾಲಕೃಷ್ಣನಿಗೆ ಸುವಸ್ತು ಸಮರ್ಪಣೆ, ಗೋಮಾತೆಗೆ...
Date : Friday, 22-05-2015
ಬೆಂಗಳೂರು: ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರಕಾರದ ಸಂಭ್ರಮವನ್ನು ಆಚರಿಸುವ ಬದಲಾಗಿ ಅವರು ಅನುಷ್ಠಾನಕ್ಕೆ ತಂದಿರುವ ಯೋಜನೆಗಳನ್ನು ದೇಶದಾದ್ಯಂತ ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಸಚಿವ ಅನಂತಕುಮಾರ್ ಹೇಳಿದ್ದಾರೆ. ಅವರು ಬೆಂಗಳೂರಿನಲ್ಲಿ ಪಕ್ಷದ ಮಾಧ್ಯಮ...
Date : Friday, 22-05-2015
ಬೆಂಗಳೂರು : ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳ ಅಧಿಕೃತ ವಾಹನಗಳ ಮೇಲೆ ಕೆಂಪುದೀಪ ಬಳಸುವುದನ್ನು ಸುಪ್ರೀಂಕೋರ್ಟ್ ನಿರ್ದೇಶನದನ್ವಯ ಮಿತಿಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ಸೇರಿ ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿಗಳು ತಮ್ಮ ವಾಹನದ ಮೇಲೆ ಕೆಂಪು, ಹಳದಿ, ನೀಲಿ ಬಣ್ಣ ಸೇರಿದಂತೆ ಯಾವುದೇ...
Date : Friday, 22-05-2015
ಬೆಂಗಳೂರು: ಬೇಸಿಗೆಯ ರಜಾ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹುಬ್ಬಳ್ಳಿ- ಚೆನ್ನೈ ನಡುವೆ ಆಯೋಜಿಸಿದ್ದ ವಿಶೇಷ ರೈಲು ಸೇವೆಯ ಅವಧಿಯನ್ನು ಹೆಚ್ಚಿಸಿದೆ. ಮೇ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿದ್ದ ಈ ಸೇವಾವಧಿಯನ್ನು ಅ.1ರ ವರೆಗೆ...
Date : Friday, 22-05-2015
ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಬಸ್ ದರ ಏರಿಕೆ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಡೀಸೆಲ್ ಬೆಲೆ ಸತತವಾಗಿ ಏರುತ್ತಿದ್ದರೂ ಬಸ್ ಪ್ರಯಾಣ ದರ ಹೆಚ್ಚಿಸುವ...
Date : Friday, 22-05-2015
ಬೆಂಗಳೂರು: ಪಿಯುಸಿ ಫಲಿತಾಂಶದಲ್ಲಿ ಗೊಂದಲ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳ ಆಗ್ರಹಕ್ಕೆ ಮಣಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫಲಿತಾಂಶ ಪ್ರಕಟವನ್ನು ಮುಂದೂಡಲು ನಿರ್ಧರಿಸಿದೆ. ಮೇ.26ರಂದು ಸಿಇಟಿ ಪರೀಕ್ಷೆ ಪ್ರಕಟವಾಗುವುದರಲ್ಲಿತ್ತು, ಆದರೆ ಇದೀಗ ಅದನ್ನು ಜೂನ್ 4ಕ್ಕೆ...