News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಟೈಫೂನ್ ಹಗಿಬಿಸ್­ನಿಂದ ತತ್ತರಿಸಿದ ಜಪಾನ್ : ಭಾರತದ ನೆರವಿನ ಹಸ್ತ

ನವದೆಹಲಿ: ಟೈಫೂನ್ ಹಗಿಬಿಸ್­ನಿಂದಾಗಿ ಜಪಾನ್ ತತ್ತರಿಸಿ ಹೋಗಿದೆ. ಈ ಹಿನ್ನಲೆಯಲ್ಲಿ ಆ ದೇಶಕ್ಕೆ ನೆರವಿನ ಹಸ್ತವನ್ನು ಚಾಚಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಭಾರತೀಯ ನೌಕಾಸೇನೆಯನ್ನು ಅಲ್ಲಿಗೆ ಕಳುಹಿಸಿಕೊಡಲಾಗುತ್ತಿದೆ. ಭಾನುವಾರ ಸರಣಿ ಟ್ವಿಟ್­ಗಳನ್ನು ಮಾಡಿರುವ ಪ್ರಧಾನಿ, “ಜಪಾನ್...

Read More

ಕಾಂಗ್ರೆಸ್ ನಾಯಕರ ಹೇಳಿಕೆ ಪಾಕಿಸ್ಥಾನಕ್ಕೆ ಬಲ ನೀಡುತ್ತಿದೆ : ರಾಜನಾಥ್ ಸಿಂಗ್

ನವದೆಹಲಿ: ಅಕ್ಟೋಬರ್ 8ರಂದು ವಿಜಯದಶಮಿಯ ಪ್ರಯುಕ್ತ ಫ್ರಾನ್ಸಿನಲ್ಲಿ ರಫೆಲ್ ಯುದ್ಧ ವಿಮಾನಕ್ಕೆ ಶಸ್ತ್ರ ಪೂಜೆ ನೆರವೇರಿಸಿದ್ದನ್ನು ಟೀಕಿಸಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಅವರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರುಗಳು ನೀಡುತ್ತಿರುವ ಹೇಳಿಕೆ ಪಾಕಿಸ್ಥಾನಕ್ಕೆ ಬಲ ತುಂಬುತ್ತಿದೆ...

Read More

ಹರಿಯಾಣ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ : 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ

ಚಂಡಿಗಢ : ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ಹರಿಯಾಣದಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಈ ಪ್ರಣಾಳಿಕೆಯಲ್ಲಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಲಾಗಿದೆ. “ಮ್ಹಾರಿ ಸಪ್ನೆ ಕ ಹರಿಯಾಣ್” ಇಂದು ಪ್ರಣಾಳಿಕೆಗೆ ಶೀರ್ಷಿಕೆಯನ್ನು ನೀಡಲಾಗಿದ್ದು, ರೈತರು, ಕಾರ್ಮಿಕರು ಮತ್ತು ಕೈಗಾರಿಕೋದ್ಯಮಿಗಳಿಗೆ...

Read More

ಅ.19 ರಿಂದ ಆರಂಭವಾಗಲಿದೆ ಭಾರತ-ಜಪಾನ್ ಜಂಟಿ ಮಿಲಿಟರಿ ಸಮರಾಭ್ಯಾಸ “ಧರ್ಮ ಗಾರ್ಡಿಯನ್ 2019”

  ನವದೆಹಲಿ : ಭಾರತ ಮತ್ತು ಜಪಾನ್ ನಡುವಿನ ಮಿಲಿಟರಿ ಸಮರಾಭ್ಯಾಸ “ಧರ್ಮ ಗಾರ್ಡಿಯನ್ 2019” ಅಕ್ಟೋಬರ್ 19 ರಿಂದ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ. ನವೆಂಬರ್ 2 ರಂದು ಸಮರಭ್ಯಾಸ ಅಂತ್ಯಗೊಳ್ಳಲಿದೆ. ಭಾರತೀಯ ಸೇನೆ ಮತ್ತು ಜಪಾನೀಸ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ಸ್‌ನ...

Read More

ಟೆಲಿಮೆಡಿಸಿನ್ ಸೇವೆಯನ್ನು ಪರಿಚಯಿಸಲಿದೆ ಜಮ್ಮು-ಕಾಶ್ಮೀರ ಆಡಳಿತ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಟೆಲಿಮೆಡಿಸಿನ್ ಸೇವೆಯನ್ನು ಪರಿಚಯಿಸಲು ಅಲ್ಲಿನ ಆಡಳಿತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಅದು ಸಂಬಂಧಿತ ಏಜೆನ್ಸಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಶ್ರೀನಗರ ಸ್ಮಾರ್ಟ್ ಸಿಟಿ ಯೋಜನೆಯಡಿ ಟೆಲಿಮೆಡಿಸಿನ್ ಸೇವೆಯನ್ನು ಆರಂಭಿಸುವುದಾಗಿ ಅಲ್ಲಿನ ಆಡಳಿತ ಹೇಳಿಕೊಂಡಿದೆ. “ಶ್ರೀನಗರದಲ್ಲಿ ಟೆಲಿಮೆಡಿಸಿನ್...

Read More

ಚೀನಾದಲ್ಲಿ ನಡೆಯಲಿದೆ ಮೂರನೇ ಅನೌಪಚಾರಿಕ ಶೃಂಗಸಭೆ : ಆಹ್ವಾನ ಸ್ವೀಕರಿಸಿದ ಮೋದಿ

ಮಾಮಲ್ಲಪುರಂ : ಮುಂದಿನ ವರ್ಷ ಭಾರತ ಮತ್ತು ಚೀನಾ ನಡುವಿನ ಮೂರನೇ ಅನೌಪಚಾರಿಕ ಶೃಂಗಸಭೆಯು ಚೀನಾದಲ್ಲಿ ಜರುಗಲಿದೆ. ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನು ನೀಡಿದ್ದಾರೆ. ಆಹ್ವಾನನವನ್ನು ಮೋದಿ ಸ್ವೀಕಾರ...

Read More

ಪಾಕಿಸ್ಥಾನಕ್ಕೆ ಅಗ್ನಿಪರೀಕ್ಷೆ : ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಇಂದು ನಿರ್ಧರಿಸಲಿದೆ FATF

ನವದೆಹಲಿ : ಜಾಗತಿಕ ಭಯೋತ್ಪಾದನಾ ವಿರೋಧಿ ಹಣಕಾಸು ಸಂಸ್ಥೆ ಫಿನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಅಥವಾ FATF ಭಾನುವಾರ ಪ್ಯಾರಿಸ್‌ನಲ್ಲಿ ಮಹತ್ವದ ಸಭೆಯನ್ನು ನಡೆಸುತ್ತಿದೆ. ಈ ಸಭೆಯಲ್ಲಿ ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕೇ ಅಥವಾ ಗ್ರೇ ಪಟ್ಟಿಯಿಂದ ತೆಗೆಯಬೇಕೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ....

Read More

ಆರ್‌ಎಸ್ಎಸ್ ಇಡೀ ಸಮಾಜದ ಬದಲಾವಣೆಯನ್ನು ಬಯಸುತ್ತದೆ : ಭಾಗವತ್

ಭುವನೇಶ್ವರ : ಆರ್‌ಎಸ್ಎಸ್ ಯಾರ ಮೇಲೆಯೂ ದ್ವೇಷದ ಭಾವವನ್ನು ಇಟ್ಟುಕೊಂಡಿಲ್ಲ ಎಂದು ಪ್ರತಿಪಾದಿಸಿರುವ ಸರಸಂಘಚಾಲಕ ಮೋಹನ್ ಭಾಗವತ್ ಅವರು, ಕೇವಲ ಹಿಂದೂ ಸಮಾಜದ ಮಾತ್ರವಲ್ಲ, ಇಡೀ ಸಮಾಜದ ಬದಲಾವಣೆಯನ್ನು ಆರ್‌ಎಸ್‌ಎಸ್ ಬಯಸುತ್ತದೆ ಎಂದಿದ್ದಾರೆ. ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಗೂ ಮುಂಚಿತವಾಗಿ ಪ್ರಬುದ್ಧರ ಸಭೆಯನ್ನುದ್ದೇಶಿಸಿ...

Read More

ಎಲ್ಲಾ ಮಟ್ಟದ ವಿನಿಮಯಗಳನ್ನು ವೃದ್ಧಿಸಲು ಭಾರತ-ಚೀನಾ ಬದ್ಧವಾಗಿವೆ: ಕೇಂದ್ರ

ಮಹಾಬಲಿಪುರಂ : 2020ರ ವರ್ಷವನ್ನು ಚೀನಾ ಮತ್ತು ಭಾರತದ ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ ವಿನಿಮಯದ ವರ್ಷವಾಗಿ ಆಚರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿರ್ಧರಿಸಿದ್ದಾರೆ. ತಮಿಳುನಾಡಿನ ಮಾಮಲ್ಲಪುರಂನಲ್ಲಿ ಶನಿವಾರ ಸಮಾಪನಗೊಂಡ ಭಾರತ ಮತ್ತು...

Read More

ಉಗ್ರ ಸಂಘಟನೆಗಳನ್ನು ಬೆಂಬಲಿಸುವುದನ್ನು ಪಾಕಿಸ್ಥಾನ ನಿಲ್ಲಿಸಬೇಕು : ಯುಎಸ್ ಸೆನೆಟರ್

ವಾಷಿಂಗ್ಟನ್ : ತಾಲಿಬಾನ್ ಸೇರಿದಂತೆ ಇತರ ಭಯೋತ್ಪಾದನಾ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ಪಾಕಿಸ್ಥಾನ ನಿಲ್ಲಿಸಬೇಕು ಎಂದು ಅಮೆರಿಕ ಸೆನೆಟರ್ ಹೇಳಿದ್ದಾರೆ. ಇಸ್ಲಾಮಾಬಾದ್ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ ಸೆನೆಟರ್ ಮ್ಯಾಗಿ ಹಸನ್ ಅವರು, “ಅಫ್ಘಾನಿಸ್ಥಾನದಲ್ಲಿ ಸ್ಥಿರತೆಯನ್ನು ತರುವ ನಿಟ್ಟಿನಲ್ಲಿ ಪಾಕಿಸ್ಥಾನವು ಮಹತ್ವದ ಪಾತ್ರವನ್ನು ನಿಭಾಯಿಸಬೇಕು, ಭಯೋತ್ಪಾದನಾ...

Read More

Recent News

Back To Top