ನವದೆಹಲಿ: ಟೈಫೂನ್ ಹಗಿಬಿಸ್ನಿಂದಾಗಿ ಜಪಾನ್ ತತ್ತರಿಸಿ ಹೋಗಿದೆ. ಈ ಹಿನ್ನಲೆಯಲ್ಲಿ ಆ ದೇಶಕ್ಕೆ ನೆರವಿನ ಹಸ್ತವನ್ನು ಚಾಚಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಭಾರತೀಯ ನೌಕಾಸೇನೆಯನ್ನು ಅಲ್ಲಿಗೆ ಕಳುಹಿಸಿಕೊಡಲಾಗುತ್ತಿದೆ.
ಭಾನುವಾರ ಸರಣಿ ಟ್ವಿಟ್ಗಳನ್ನು ಮಾಡಿರುವ ಪ್ರಧಾನಿ, “ಜಪಾನ್ ಜನತೆಯ ಸಿದ್ಧತೆ ಮತ್ತು ಸ್ಥಿತಿಸ್ಥಾಪಕತ್ವದಿಂದಾಗಿ ಮತ್ತು ಸ್ನೇಹಿತ ಶಿಂಜೋ ಅಬೆಯವರ ಸಮರ್ಥ ನಾಯಕತ್ವದಿಂದ ಟೈಫೂನ್ ಹಗಿಬಸ್ ಅನ್ನು ಅತ್ಯಂತ ತ್ವರಿತ ಮತ್ತು ಪರಿಣಾಮಕಾರಿಯಾಗಿ ಜಪಾನ್ ಎದುರಿಸಲಿದೆ” ಎಂದಿದ್ದಾರೆ.
“ಜಪಾನ್ನಲ್ಲಿ ಸೂಪರ್-ಟೈಫೂನ್ ಹಗಿಬಿಸ್ನಿಂದ ಉಂಟಾದ ಪ್ರಾಣಹಾನಿ ಬಗ್ಗೆ ನಾನು ಎಲ್ಲ ಭಾರತೀಯರ ಪರವಾಗಿ ಸಂತಾಪ ಸೂಚಿಸುತ್ತೇನೆ. ಈ ನೈಸರ್ಗಿಕ ವಿಪತ್ತಿನಿಂದ ಉಂಟಾದ ಹಾನಿ ಮತ್ತು ವಿನಾಶದಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ” ಎಂದಿದ್ದಾರೆ.
“ಈ ಕಷ್ಟದ ಸಮಯದಲ್ಲಿ ಭಾರತವು ಜಪಾನ್ನೊಂದಿಗೆ ನಿಲ್ಲುತ್ತದೆ. ಭಾರತೀಯ ನೌಕಾಪಡೆಯ ಸಿಬ್ಬಂದಿ ಜಪಾನಿಗೆ ಭೇಟಿಯನ್ನು ನೀಡಲಿದ್ದು, ಅಲ್ಲಿನ ಜನತೆಗೆ ಸಹಾಯ ಹಸ್ತ ಚಾಚಲಿದ್ದಾರೆ” ಎಂದಿದ್ದಾರೆ.
ಟೈಫೂನ್ನಿಂದಾಗಿ ಇದುವರೆಗೆ ಜಪಾನಿನಲ್ಲಿ 30 ಜನರು ಸಾವನ್ನಪ್ಪಿದ್ದಾರೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ವರದಿಗಳು ತಿಳಿಸುತ್ತಿವೆ.
I offer condolences on behalf of all Indians on the loss of life caused by super-typhoon #Hagibis in Japan. I wish early recovery from the damage and devastation caused by this natural calamity.
— Narendra Modi (@narendramodi) October 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.